Gram Panchayat: ಇನ್ನುಮುಂದೆ ಗ್ರಾಮ ಪಂಚಾಯತ್ ಗಳಲ್ಲಿ ಸಿಗಲಿದೆ ಈ ಎಲ್ಲಾ ಸೇವೆಗಳು, ಬಾಪೂಜಿ ಯೋಜನೆ.
ಇನ್ನುಮುಂದೆ ಗ್ರಾಮ ಪಂಚಾಯತ್ ನಲ್ಲಿ ಈ ಎಲ್ಲಾ ಸೇವೆಗಳು ಲಭ್ಯ.
Gram Panchayat Facility: ಸರ್ಕಾರ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಹೊಸ ಸೌಲಭ್ಯವನ್ನು ಒದಗಿಸುತ್ತಿದೆ. ಸದ್ಯ ಜನಸಾಮಾನ್ಯರು ಸರ್ಕಾರೀ ಅಥವಾ ಸರ್ಕಾರೇತರ ಕೆಲಸಗಳಿಗೆ ನಾಡ ಕಚೇರಿಗೆ ಭೇಟಿ ನೀಡುದು ಸರ್ವೇ ಸಾಮಾನ್ಯವಾಗಿದೆ.
ನಗರ ಪ್ರದೇಶದ ಜನರಿಗೆ ನಾಡ ಕಚೇರಿಗೆ ಭೇಟಿ ನೀಡಿ ಕೆಲಸ ಮಾಡಿಕೊಳ್ಳುದು ಸುಲಭವಾಗಬಹುದು, ಆದರೆ ಗ್ರಾಮಿಣ ಪ್ರದೇಶದ ಜನತೆಗೆ ನಾಡ ಕಚೇರಿಯ ವ್ಯವಹಾರ ಒಂದು ರೀತಿಯಲ್ಲಿ ಕಷ್ಟವಾಗುತ್ತದೆ. ಗ್ರಾಮೀಣ ಪ್ರದೇಶದಿಂದ ನಾಡ ಕಚೇರಿಗಳು ದೂರವಿರುದರಿಂದ ಗ್ರಾಮೀಣ ಜನತೆ ನಾಡ ಕಚೇರಿಗೆ ಹೋಗಲು ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುತ್ತದೆ. ಹೀಗಾಗಿ ಸರ್ಕಾರ ಗ್ರಾಮೀಣ ಪ್ರದೇಶದ ಜನತೆಗೆ ಹೊಸ ಸೌಲಭ್ಯ ನೀಡಲು ಮುಂದಾಗಿದೆ.
ಸಾರ್ವಜನಿಕರಿಗೆ ಸರ್ಕಾರದಿಂದ ಗುಡ್ ನ್ಯೂಸ್
ಇನ್ನುಮುಂದೆ ಗ್ರಾಮ ಪಂಚಾಯತ್ ನಲ್ಲಿ ಲಭ್ಯವಾಗಲಿದೆ ಈ ಎಲ್ಲಾ ಸೇವೆಗಳು.
ಸರ್ಕಾರದ ಸೇವೆಗಳು ಹೆಚ್ಚಾಗಿ ಗ್ರಾಮ ಪಂಚಾಯತ್ ನಲ್ಲಿ ಲಭ್ಯವಿರುತ್ತದೆ. ಇನ್ನುಮುಂದೆ ಗ್ರಾಮ ಪಂಚಾಯತ್ ಗಳಲ್ಲಿ ಇನ್ನಷ್ಟು ಸೇವೆಯನ್ನು ನೀಡಲು ಸರ್ಕಾರ ಚಿಂತನೆ ನೆಡೆಸಿದೆ. ಈ ಮೂಲಕ ಸಾರ್ವಜನಿಕರಿಗೆ ಸಿಹಿ ಸುದ್ದಿ ನೀಡಿದೆ.
ಇನ್ನುಮುಂದೆ ಗ್ರಾಮ ಪಂಚಾಯತ್ ನಲ್ಲಿ ಲಭ್ಯವಾಗಲಿದೆ ಈ ಎಲ್ಲ ಸೇವೆಗಳು
*ಆದಾಯ ಪ್ರಮಾಣ ಪತ್ರ
*ಜಾತಿ ಮತ್ತು ಆದಾಯ ಪ್ರಮಾಣ ಪತ್ರ
*ವಾಸ ಸ್ಥಳ ಪ್ರಮಾಣ ಪತ್ರ
ಪ್ರತಿಯೊಂದು ಹೋಬಳಿಯಲ್ಲಿ ಆರರಿಂದ ಏಳು ಗ್ರಾಮ ಪಂಚಾಯತಿ ಇರುತ್ತದೆ. ಕಂದಾಯ ಇಲಾಖೆಯ ಅಟಲ್ಜೀ ಜನಸ್ನೇಹಿ ನಿರ್ದೇಶನಾಲಯದಡಿ ನಾಡಕಛೇರಿಗಳಲ್ಲಿ ಒದಗಿಸಲಾಗುತ್ತಿರುವ 44 ಸೇವೆಗಳನ್ನು ಪಡೆಯಲು ಸಲ್ಲಿಸಲು ಜನರು ಹೋಬಳಿ ಮಟ್ಟದಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರಗಳಿಗೆ ಭೇಟಿ ನೀಡಬೇಕಾಗಿತ್ತು. ಸಾರ್ವಜನಿಕರು ಸೇವೆಗಳನ್ನು ಪಡೆಯಲು ಸಾಕಷ್ಟು ದೂರ ಕ್ರಮಿಸಬೆಕಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಗ್ರಾಮಿಣ ಜನರು ತಮಗೆ ಅವಶ್ಯಕ ವಿರುವ ಸೇವೆಗಳನ್ನು ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒದಗಿಸಲು ಸರ್ಕಾರವು ನಿರ್ಧರಿಸಿದೆ.