Mukesh Ambani: ಅವಳಿ ಮೊಮ್ಮಕ್ಕಳಿಗೆ ಐಷಾರಾಮಿ ಗಿಫ್ಟ್ ಕೊಟ್ಟ ಅಜ್ಜ ಮುಖೇಶ್ ಅಂಬಾನಿ, ಅಬ್ಬಬ್ಬಾ ಅಂದ ನೆಟ್ಟಿಗರು.
Grandchildrens of Mukesh Ambani: ಇಶಾ ಅಂಬಾನಿ ಅವರ ಅವಳಿ ಮಕ್ಕಳಾದ ಆದಿಯಾ ಮತ್ತು ಕೃಷ್ಣ ಅವರ ಹುಟ್ಟುಹಬ್ಬಕ್ಕೆ ಅಜ್ಜ ಅಜ್ಜಿಯರಾದ ಮುಖೇಶ್ (Mukesh Ambani) ಮತ್ತು ನೀತಾ ಅಂಬಾನಿಯವರು ವಿಶೇಷ ಗಿಫ್ಟ್ ಕೊಟ್ಟಿದ್ದಾರೆ.
ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಕಸ್ಟಮೈಸ್ ಮಾಡಿದ ಕ್ಲೋಸೆಟ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದು ಈಗ ಭಾರಿ ವೈರಲ್ ಆಗುತ್ತಿದೆ. ಐಷಾರಾಮಿ ಗಿಫ್ಟ್ ಅನ್ನು ತಮ್ಮ ಅವಳಿ ಮೊಮ್ಮಕ್ಕಳಿಗೆ ಪ್ರೀತಿಯ ಉಡುಗೊರೆಯಾಗಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ನೀಡಿದ್ದಾರೆ.
ತಮ್ಮ ಅವಳಿ ಮೊಮ್ಮಕ್ಕಳಿಗೆ ಐಷಾರಾಮಿ ಗಿಫ್ಟ್ ಕೊಟ್ಟ ಅಜ್ಜ ಮುಖೇಶ್ ಅಂಬಾನಿ
ಕಳೆದ ನವೆಂಬರ್ 19 ರಂದು ಇಶಾ ಆನಂದ್ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರು ಆದಿಯಾ ಎಂಬ ಹೆಣ್ಣು ಮಗುವಿದೆ ಮತ್ತು ಗಂಡು ಮುಗುವನ್ನು ಸ್ವಾಗತಿಸಿದರು.
ನಿರೀಕ್ಷೆಯಂತೆ ಬಿಲಿಯನೇರ್ಗಳಾದ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಮೊಮ್ಮಕ್ಕಳಿಗೆ ಐಷಾರಾಮಿ ಸವಲತ್ತುಗಳನ್ನು ನೀಡುತ್ತಿದ್ದಾರೆ. ಈ ಉಡುಗೊರೆಗಳಾಗಿ ಪುಟಾಣಿಗಳಿಗೆ 5 ಅಡಿ ಎತ್ತರದ ಹಳದಿ ಕ್ಲೋಸೆಟ್ ನೀಡಿದ್ದಾರೆ. ಗಿಫ್ಟ್ ಟೆಲ್ ಆಲ್ ಇದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ.
ಅವಳಿ ಮೊಮ್ಮಕ್ಕಳಿಗೆ ಉಡುಗೊರೆ ನೀಡಿದ ಮುಖೇಶ್ ಅಂಬಾನಿ
ಈ ಅದ್ದೂರಿ ಕ್ಲೋಸೆಟ್ ನೀಲಿ ಬಣ್ಣದ ಆರ್ಟಿಫಿಷಿಯಲ್ ಹೂವುಗಳನ್ನು ಮತ್ತು ಮುದ್ದಾದ ಟೆಡ್ಡಿ ಬೇರ್ ಗಳಿಂದ ತುಂಬಿದೆ. ಈ ಕ್ಲೋಸೆಟ್ ಬಿಸಿಗಾಳಿಯ ಬಲೂನ್ ಗಳಿಂದ ಒಳಗೊಂಡಿದೆ.
ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ. ಮುಖೇಶ್ ಅಂಬಾನಿ ಅವರು ತಮ್ಮ ಅವಳಿ ಮೊಮ್ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ತಮ್ಮ ಪುಟಾಣಿ ಮೊಮ್ಮಕ್ಕಳಿಗೆ ಐಷಾರಾಮಿ ಉಡುಗೊರೆ ಜೊತೆಗೆ ಸಾಕಷ್ಟು ಆಸ್ತಿಯನ್ನು ನೀಡಲು ಮುಂದಾಗಿದ್ದರಂತೆ.