Grandfather Property: ಮೊಮ್ಮಗ ಅಥವಾ ಮೊಮ್ಮಗಳಿಗೆ ಅಜ್ಜನ ಆಸ್ತಿಯಲ್ಲಿ ಎಷ್ಟು ಪಾಲಿದೆ…? ಹೈಕೋರ್ಟ್ ತೀರ್ಪು.

ಮೊಮ್ಮಗ ಅಥವಾ ಮೊಮ್ಮಗಳಿಗೆ ಅಜ್ಜನ ಆಸ್ತಿಯಲ್ಲಿ ಎಷ್ಟು ಪಾಲಿದೆ ಎನ್ನುವ ಬಗ್ಗೆ ಸಂಪೂರ್ಣ ವಿವರ.

Grand son And Grand daughter Rights In Grand father Property: ಭಾರತೀಯ ಕಾನೂನಿನಲ್ಲಿ (Indian Law) ಆಸ್ತಿ ವಿಚಾರವಾಗಿ ಹೊಸ ಹೊಸ ತಿದ್ದುಪಡಿಯನ್ನು ತರಲಾಗುತ್ತದೆ. ಜನರು ಸಾಮಾನ್ಯವಾಗಿ ಕಾನೂನು ನಿಯಮ, ಆಸ್ತಿಯ ಮೇಲಿನ ಹಕ್ಕುಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿರುದಿಲ್ಲ.

ಆಸ್ತಿಗೆ ಸಂಬಂಧಿಸಿದ ನಿಯಮಗಳು ಮತ್ತು ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳುದು ಬಹಳ ಮುಖ್ಯವಾಗಿರುತ್ತದೆ. ಇದೀಗ ನಾವು ಮೊಮ್ಮಗ ಅಥವಾ ಮೊಮ್ಮಗಳಿಗೆ ಅಜ್ಜನ ಆಸ್ತಿಯಲ್ಲಿ ಎಷ್ಟು ಪಾಲಿದೆ ಎನ್ನುವ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಳ್ಳೋಣ.

Property Rights Latest Update
Image Credit: Housing

ಅಜ್ಜನ ಸ್ವಯಾರ್ಜಿತ ಆಸ್ತಿಯ ಮೇಲೆ ಮೊಮ್ಮಗನಿಗೆ ಹಕ್ಕಿಲ್ಲ
ಅಜ್ಜ ಸ್ವಯಂ ಸ್ವಾಧೀನಪಡಿಸಿಕೊಂಡ ಆಸ್ತಿಯ ಮೇಲೆ ಮೊಮ್ಮಗನಿಗೆ ಯಾವುದೇ ಕಾನೂನು ಹಕ್ಕು ಇರುವುದಿಲ್ಲ. ಅಜ್ಜನಿಗೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ತನಗೆ ಬೇಕಾದ ವ್ಯಕ್ತಿಗೆ ನೀಡುವ ಅಧಿಕಾರವಿದೆ. ಒಂದು ವೇಳೆ ಅಜ್ಜ ವಿಲ್ ಬರೆಯದೆ ಮರಣ ಹೊಂದಿದರೆ ಆತನ ಆಸ್ತಿ ಹೆಂಡತಿ, ಮಗ ಮತ್ತು ಮಗಳಿಗೆ ಹೋಗುತ್ತದೆ, ಅವರು ಆ ಆಸ್ತಿಯ ಮೇಲೆ ಕಾನೂನು ಹಕ್ಕುಗಳನ್ನು ಪಡೆಯುತ್ತಾರೆ. ಮೊಮ್ಮಗನ ತಂದೆ ಬದುಕಿದ್ದರೆ ತಾತನ ಆಸ್ತಿಯಲ್ಲಿ ಯಾವುದೇ ಪಾಲು ಪಡೆಯಲು ಸಾಧ್ಯವಾಗುದಿಲ್ಲ.

ಪೂರ್ವಜರ ಆಸ್ತಿಯ ಮೇಲೆ ಹಕ್ಕು
ಮೊಮ್ಮಗನಿಗೆ ಪೂರ್ವಜರ ಆಸ್ತಿಯ ಮೇಲೆ ಕಾನೂನಿನ ಪ್ರಕಾರ ಹಕ್ಕಿದೆ. ಈ ಬಗ್ಗೆ ಯಾವುದೇ ವಿವಾದ ಉಂಟಾದರೂ ಅವರು ಸಿವಿಲ್ ನ್ಯಾಯಾಲಯಕ್ಕೆ ಹೋಗಬಹುದು. ಪೂರ್ವಜರಿಂದ ಪಿತ್ರಾರ್ಜಿತವಾಗಿ ಬಂದ ಪಿತ್ರಾರ್ಜಿತ ಆಸ್ತಿಗೆ ತಂದೆ ಅಥವಾ ಅಜ್ಜನಿಗೆ ಹೇಗೆ ಹಕ್ಕಿದೆಯೋ ಅದೇ ರೀತಿ ಪಿತ್ರಾರ್ಜಿತ ಆಸ್ತಿಗೆ ಮೊಮ್ಮಗನು ಹಕ್ಕುದಾರನಾಗಿರುತ್ತಾನೆ.

Grandson And Granddaughter Rights In Grandfather Property
Image Credit: Timesofindia

ಪೂರ್ವಜರ ಆಸ್ತಿ ಎಂದರೆ…
ಒಬ್ಬ ಪೂರ್ವಜರಿಂದ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಪೂರ್ವಜರ ಆಸ್ತಿ ಎಂದು ಕರೆಯಲಾಗುತ್ತದೆ. ಅಂದರೆ ಮುತ್ತಜ್ಜನಿಂದ ಅಜ್ಜನಿಗೆ, ಅಜ್ಜನಿಂದ ತಂದೆಗೆ ಮತ್ತು ತಂದೆಯಿಂದ ಮೊಮ್ಮಗನಿಗೆ. ಈ ಆಸ್ತಿಗೆ ಸಂಬಂಧಿಸಿದ ನಿಯಮಗಳು ಸ್ವಯಂ -ಸ್ವಾಧೀನಪಡಿಸಿಕೊಂಡ ಆಸ್ತಿಗಿಂತ ವಿಭಿನ್ನವಾಗಿದೆ.

Join Nadunudi News WhatsApp Group

ವಕೀಲರ ಸಹಾಯ ಪಡೆಯುವುದು ಉತ್ತಮ
ಮೊಮ್ಮಗನು ಪೂರ್ವಜರ ಆಸ್ತಿಯ ಮೇಲೆ ಕಾನೂನು ಹಕ್ಕು ಹೊಂದಿದ್ದರೆ, ಆ ಆಸ್ತಿ ಪಡೆಯಲು ವೃತ್ತಿಪರ ವಕೀಲರ ಸಹಾಯವನ್ನು ತೆಗೆದುಕೊಳ್ಳುವುದು ಉತ್ತಮವಾಗಿದೆ. ಇದರಿಂದ ನಿಮಗೆ ಭೂಮಿ ಅಥವಾ ಆಸ್ತಿ ವಿವಾದಗಳಿಗೆ ಸಂಬಂಧಿಸಿದ ತೊಡಕುಗಳಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸುವುದಿಲ್ಲ, ನ್ಯಾಯಾಂಗ ಪ್ರಕ್ರಿಯೆಯ ಜಟಿಲತೆಗಳನ್ನು ತಪ್ಪಿಸಲು ನಿಮಗೆ ಸಾಧ್ಯವಾಗುತ್ತದೆ.

Join Nadunudi News WhatsApp Group