ಈ ಬಡ ಭಿಕ್ಷುಕಿ ಆಂಜನೇಯ ಸ್ವಾಮಿಗೆ ಬೆಳ್ಳಿ ಮುಖವಾಡ ಮಾಡಿಸಲು ನೀಡಿದ ದೇಣಿಗೆ ಎಷ್ಟು ಗೊತ್ತಾ, ರಾಜ್ಯವೇ ಶಾಕ್, ನಿಜಕ್ಕೂ ಗ್ರೇಟ್ ಅಜ್ಜಿ.
ಕೆಲವೊಮ್ಮೆ ಕೆಲವರು ಮಾಡುವ ಒಳ್ಳೆಯ ಕೆಲಸಗಳು ಇತರರಿಗೆ ಮಾದರಿಯಾಗುತ್ತದೆ ಎಂದು ಹೇಳಬಹುದು. ಹೌದು ಅದೆಷ್ಟೋ ದುಡ್ಡಿದ್ದವರು ಇನ್ನಷ್ಟು ಹಣವನ್ನ ಕೂಡಿಹಾಕಲು ತಯಾರು ಮಾಡುತ್ತಾರೆಯೇ ವಿನಃ ಬೇರೆಯವರಿಗೆ ಸಹಾಯ ಮಾಡುವ ಗುಣ ಇರುವುದು ಬಹಳ ಕಡಿಮೆ ಎಂದು ಹೇಳಬಹುದು. ಹಣ ಇಂದು ಗಳಿಸಬಹುದು ನಾಳೆ ಗಳಿಸಬಹುದು, ಆದರೆ ಸೇವೆ ಮಾಡಲು ಸಿಕ್ಕ ಅವಕಾಶ ಮತ್ತೆ ಸಿಗುವುದಿಲ್ಲ ಎಂದು ಹೇಳಬಹುದು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಚಾರಗಳು ವೈರಲ್ ಆಗುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ, ಇನ್ನು ಅದೇ ರೀತಿಯಲ್ಲಿ ಇಂದು ಸಾಮಾಜಿಕ ಜಾಲತಾಣದಲ್ಲಿ ಇನ್ನೊಂದು ವಿಷಯ ಬಹಳ ವೈರಲ್ ಆಗಿದ್ದು ಇದು ಜನರ ಮೆಚ್ಚುಗೆಗೆ ಕಾರಣವಾಗಿದೆ ಎಂದು ಹೇಳಬಹುದು.
ದೇವರು ನಮಗೆ ಯಾವತ್ತೂ ಒಳ್ಳೆಯದಾಗಬಾರದು ಎಂದು ಯೋಚನೆ ಮಾಡುವುದಿಲ್ಲ ಮತ್ತು ನಾವು ಮಾಡುವ ಕೆಲಸದಿಂದ ನಮಗೆ ಸುಖ ಮತ್ತು ನೆಮ್ಮದಿ ಸಿಗುತ್ತದೆ ಎಂದು ಹೇಳಬಹುದು. ಸ್ನೇಹಿತರೆ ಚಿಕ್ಕಮಗಳೂರಿನ ಒಬ್ಬ ಭಿಕ್ಷಕಿ ಈಗ ಅದೆಷ್ಟೋ ಜನರು ಮಾದರಿಯಾಗಿದ್ದು ಸದ್ಯ ಈ ಭಿಕ್ಷುಕಿ ಮಾಡಿದ ಕೆಲಸವನ್ನ ನೋಡಿ ಇಡೀ ರಾಜ್ಯವೇ ಈ ಭಿಕ್ಷುಕಿಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದೆ ಎಂದು ಹೇಳಬಹುದು. ಹಾಗಾದರೆ ಈ ಭಿಕ್ಷುಕಿ ಯಾರು ಮತ್ತು ಈಕೆ ಮಾಡಿದ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಸ್ನೇಹಿತರೆ ಕೆಂಪಜ್ಜಿ ಅನ್ನುವ ಬಡ ಅಜ್ಜಿ ಅದೆಷ್ಟೋ ಸಮಯಗಳಿಂದ ಭಿಕ್ಷೆ ಬೇಡಿಕೊಂಡು ಜೀವನವನ್ನ ಮಾಡುತ್ತಿದ್ದಾಳೆ ಮತ್ತು ಈಕೆಗೆ ಯಾರು ಇಲ್ಲ. ಭಿಕ್ಷೆಯನ್ನ ಬೇಡಿಕೊಂಡು ಅಂಜನೇಯ ದೇವಸ್ಥಾನದ ಅಕ್ಕಪಕ್ಕದಲ್ಲೇ ಓಡಾಡಿಕೊಂಡು ಇರುತ್ತಿದ್ದಳು ಈ ಅಜ್ಜಿ. ಕಳೆದ ಕೆಲವು ದಿನಗಳಿಂದ ಈ ಕೆಂಪಜ್ಜಿ ಅನ್ನುವ ಅಜ್ಜಿ ದೇವಸ್ಥಾನದ ಬಳಿ ಬಂದು ಆಡಳಿತ ಮಂಡಳಿಯ ಅಧ್ಯಕ್ಷನನ್ನ ಹುಡುಕಾಡಿತ್ತಿದ್ದರು. ಈ ಅಜ್ಜಿ ಹಣವನ್ನ ಕೇಳಲು ಬಂದಿದ್ದಾಳೆ ಎಂದು ಭಾವಿಸಿ ಅಲ್ಲಿನ ಜನರು ಈ ಅಜ್ಜಿಯನ್ನ ಅಲ್ಲಿಂದ ಓಡಿಸುತ್ತಿದ್ದರು.
ಪ್ರತಿದಿನ ಆಡಳಿತ ಮಂಡಳಿಯವರನ್ನ ಹುಡುಕಿಕೊಂಡು ಬರುತ್ತಿದ್ದ ಅಜ್ಜಿಯನ್ನ ಅಲ್ಲಿನ ಜನರು ಓಡಿಸುತ್ತಿದ್ದ ಕಾರಣ ಏನು ಮಾಡಬೇಕು ಎಂದು ತೋಚದ ಈ ಅಜ್ಜಿ ನೇರವಾಗಿ ದೇವಸ್ಥಾನದ ಒಳಗಡೆ ಹೋಗಿ ಅರ್ಚಕರ ಕೈಗೆ 500ರ 20 ನೋಟು ಕೊಟ್ಟು ಈ ಹಣದಲ್ಲಿ ಆಂಜನೇಯನಿಗೆ ಬೆಳ್ಳಿಯ ಮುಖವಾಡ ಮಾಡಿಸಿ ಎಂದು ಬೇಡಿಕೆ ನೀಡಿದ್ದಾರೆ. ಕಡೂರಿನ ಸಾಯಿಬಾಬಾ ದೇವಸ್ಥಾನದ ಬಳಿ ಕೆಂಪಜ್ಜಿ ಕಾರ್ಯ ಕಂಡು ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಈ ಅಜ್ಜಿ ಮಾಡಿದ ಕೆಲಸ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಬಹುದು. ತಾನು ಕಷ್ಟಪಟ್ಟು ದುಡಿದ ಹಣದಲ್ಲಿ ಈ ಅಜ್ಜಿ ಆಂಜನೇಯ ಸ್ವಾಮಿಗೆ ಬೆಳ್ಳಿಯ ಮುಖವಾಡ ಮಾಡಿಸಿ ಎಂದು ಬೇಡಿಕೆಯನ್ನ ಇಟ್ಟಿದ್ದಾಳೆ. ಸ್ನೇಹಿತರೆ ಈ ಅಜ್ಜಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.