ನಿನ್ನೆ ನಡೆದ ದುರಂತದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕೊನೆಯಾಗಿ ಈ ವ್ಯಕ್ತಿಯ ಬಳಿ ಹೇಳಿದ್ದೇನು ಗೊತ್ತಾ, ಕಣ್ಣೀರಿಟ್ಟ ಪ್ರತ್ಯಕ್ಷದರ್ಶಿ.
ನಿನ್ನೆ ನಡೆದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ನಿನ್ನೆ ಭಾರತ ಸೇನೆಯ ಹೆಲಿಕಾಪ್ಟರ್ ಪತನವಾಗಿದ್ದು 13 ಜನರು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಇನ್ನು ಭಾರತದ ಎಲ್ಲಾ ಸೇನೆಯ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಕೂಡ ಈ ಅಪಘಾತದಲ್ಲಿ ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದು ಇದು ದೇಶಕ್ಕೆ ತುಂಬಲಾರದ ನಷ್ಟವನ್ನ ಉಂಟುಮಾಡಿದೆ ಎಂದು ಹೇಳಬಹುದು. ಮೂರೂ ಸೇನೆಯ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಚಲಿಸುತ್ತಿದ್ದ ಹೆಲಿಕಾಪ್ಟರ್ ನಿನ್ನೆ ಪತನವಾಗಿದ್ದು ಬಿಪಿನ್ ರಾವತ್ ಪತ್ನಿ ಸೇರಿ 13 ಮಂದಿ ಸೈನಿಕರು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ.
ಇನ್ನು ಈ ದುರಂತ ನಡೆದ ಸಮಯದಲ್ಲಿ ಆ ಘಟನಾ ಸ್ಥಳಕ್ಕೆ ತಕ್ಷಣ ಹೋದ ಒಬ್ಬ ವ್ಯಕ್ತಿಯ ಜೊತೆ ಬಿಪಿನ್ ರಾವತ್ ಮಾತನಾಡಿದ್ದು ಅಲ್ಲಿ ನಡೆದ ಘಟನೆಯ ಬಗ್ಗೆ ಆತ ಸಂಪೂರ್ಣ ಮಾಹಿತಿಯನ್ನ ಕೊಟ್ಟಿದ್ದಾನೆ. ಹಾಗಾದರೆ ಅಪಘಾತ ನಡೆದ ಸಮಯದಲ್ಲಿ ಅಲ್ಲಿಗೆ ತಕ್ಷಣ ಬಂದ ವ್ಯಕ್ತಿಯ ಬಳಿ ಬಿಪಿನ್ ರಾವತ್ ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ನಿನ್ನೆ ದುರಂತ ನಡೆದಾಗ ಅಲ್ಲಿಯೇ ಕೆಲಸ ಮಾಡುತ್ತಿದ್ದ ವ್ಯತಿಯೊಬ್ಬರು ಅಲ್ಲಿಗೆ ತಕ್ಷಣ ಹೋಗಿದ್ದಾರೆ ಅವರು ಅಲ್ಲಿಗೆ ಹೋದಾಗ ಮೂರೂ ಸುಟ್ಟ ದೇಹಗಳು ಕಂಡವು ಮತ್ತು ಅದರಲ್ಲಿ ಒಬ್ಬರು ಬದುಕಿದ್ದರು ಮತ್ತು ಅವರು ಬಿಪಿನ್ ರಾವತ್ ಆಗಿದ್ದರು ಎಂದು ಪ್ರತ್ಯಕ್ಷದರ್ಶಿ ಶಿವ ಎಂಬಾತ ಹೇಳಿದ್ದಾರೆ.
ನಿನ್ನೆ ಪ್ರತ್ಯಕ್ಷದರ್ಶಿ ಶಿವ ವ್ಯಕ್ತಿ ಅಂದರೆ, ನಿನ್ನೆ ಶಿವ ಮತ್ತು ಅವರ ಜೊತೆಗೆ ಕೆಲಸ ಮಾಡುತ್ತಿದ್ದವರು ಹೆಲಿಕಾಪ್ಟರ್ ಪತನ ಆಗಿದ್ದನ್ನ ಗಮನಿಸಿದ್ದಾರೆ ಮತ್ತು ತಕ್ಷಣ ಅಲ್ಲಿಗೆ ಹೋಗಿದ್ದಾರೆ. ಇನ್ನು ಅವರು ಅಲ್ಲಿಗೆ ಹೋದಾಗ ಮೂರೂ ದೇಹಗಳು ಕಂಡವು ಮತ್ತು ಅದರಲ್ಲಿ ಒಬ್ಬರಿಗೆ ಜೀವ ಇತ್ತು. ಇನ್ನು ಜೀವಂತ ಇದ್ದ ಅವರು ಶಿವ ಎಂಬಾತನ ಬಳಿ ನೀರು ಬೇಕೆಂದು ಕೇಳಿದ್ದಾರೆ. ಬೇಡಿಶೀಟ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಅವರನ್ನ ನಾವು ಕಷ್ಟಪಟ್ಟು ಹೊರಗೆ ತೆಗೆದೆವು ಮತ್ತು ಆ ಸಮಯದಲ್ಲಿ ಅಲ್ಲಿಗೆ ಬಂದ ಸಿಬ್ಬಂದಿ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದು ಅವರು ಹೇಳಿದರು.
ಘಟನೆಯಾದ ಮೂರು ಗಂಟೆಗಳ ನಂತರ ಯಾರೋ ಒಬ್ಬರು ನನ್ನ ಬಳಿಗೆ ಬಂದು, ನೀನು ಮಾತನಾಡಿದ್ದು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರೊಂದಿಗೆ ಎಂದು ತಿಳಿಸಿದರು. ಜೊತೆಗೆ ಅವರ ಫೋಟೋವನ್ನು ನನಗೆ ತೋರಿಸಿದರು. ಆ ವ್ಯಕ್ತಿ ನಮ್ಮ ದೇಶಕ್ಕೆ ಬಹಳ ಸೇವೆಯನ್ನ ಸಲ್ಲಿಸಿದ್ದಾರೆ, ಆದರೆ ಅವರಿಗೆ ನೀರನ್ನು ಸಹ ನನ್ನಿಂದ ಕೊಡಲಾಗಲಿಲ್ಲ. ಈ ಘಟನೆಯನ್ನ ನೆನೆದು ನಾನು ರಾತ್ರಿಪೂರ್ತಿ ನಿದ್ರೆ ಬಿಟ್ಟಿದ್ದೇನೆ ಎಂದು ಆ ವ್ಯಕ್ತಿ ಹೇಳಿದ್ದಾರೆ. ಸ್ನೇಹಿತರೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ.