ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಂಗಳ ಸೂತ್ರಕ್ಕೆ ಎಷ್ಟು ಬೆಲೆಯನ್ನ ಕೊಡಲಾಗುತ್ತದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ಮದುವೆಯಾದ ಹೆಣ್ಣಿಗೆ ಮಂಗಳ ಸೂತ್ರ ಬಹಳ ಅವಶ್ಯಕ ಎಂದು ಹೇಳಬಹುದು. ಇನ್ನು ಮಂಗಳ ಸೂತ್ರವನ್ನ ಬರಿ ಹಿಂದೂ ಸಂಪ್ರದಾಯದಲ್ಲಿ ಮಾತ್ರವಲ್ಲದೆ ಬೇರೆ ಧರ್ಮದಲ್ಲಿ ಕೂಡ ಅಷ್ಟೇ ಬೆಲೆಯನ್ನ ಕೊಡಲಾಗಿದೆ ಎಂದು ಹೇಳಬಹುದು. ಇನ್ನು ಬಡವರು ಸ್ವಲ್ಪ ಕಡಿಮೆ ಬೆಲೆಯ ಮಂಗಳ ಸೂತ್ರವನ್ನ ಧರಿಸಿದರೆ ಶ್ರೀಮಂತರು ಜಾಸ್ತಿ ಬೆಲೆಯ ಮಂಗಳ ಸೂತ್ರವನ್ನ ಧರಿಸುತ್ತಾರೆ ಎಂದು ಹೇಳಬಹುದು. ಮಂಗಳ ಸೂತ್ರದ ಬೆಲೆ ಎಷ್ಟೇ ಆಗಿದ್ದರು ಅದಕ್ಕೆ ಇರುವ ಮಹತ್ವ ಒಂದೇ ಎಂದು ಹೇಳಬಹುದು.
ಇನ್ನು ವಿಷಯಕ್ಕೆ ಬರುವುದಾದರೆ ದೇಶದಲ್ಲಿ ದೊಡ್ಡ ದೊಡ್ಡ ಶ್ರೀಮಂತ ನಟಿಮಣಿಯರು ಧರಿಸುವ ಮಂಗಳ ಸೂತ್ರದ ಬೆಲೆ ಎಷ್ಟು ಎಂದು ತಿಳಿದರೆ ನಿಮಗೆ ಶಾಕ್ ಆಗುವುದು ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಹಾಗಾದರೆ ದೇಶದ ಶ್ರೀಮಂತ ನಟಿಮಣಿಯರು ಧರಿಸುವ ಮಂಗಳ ಸೂತ್ರದ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಐಶ್ವರ್ಯ ರಾಯ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ಅಂದರೆ ಅದೂ ಐಶ್ವರ್ಯ ರಾಯ್ ಎಂದು ಹೇಳಬಹುದು.
ಇನ್ನು ಈಗ ಐಶ್ವರ್ಯ ರಾಯ್ ಅವರಿಗೆ ಅಭಿಷೇಕ್ ಬಚ್ಚನ್ ಅವರ ಜೊತೆ ಮದುವೆಯಾಗಿ ಮುದ್ದಾದ ಮಗಳು ಕೂಡ ಇದ್ದಾಳೆ. ಇನ್ನು ಖ್ಯಾತ ನಟಿ ಐಶ್ವರ್ಯ ರಾಯ್ ಧರಿಸಿರುವ ಮಂಗಳ ಸೂತ್ರದ ಬೆಲೆ ಬರೋಬ್ಬರಿ 45 ಲಕ್ಷ ರೂಪಾಯಿ ಆಗಿದೆ. ಇನ್ನು ದೇಶದ ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಯಾರಿಗೆ ಗೊತ್ತಿಲ್ಲ ಹೇಳಿ. ಇನ್ನು ಅನುಷ್ಕಾ ಶರ್ಮಾ ಧರಿಸುವ ಮಂಗಳ ಸೂತ್ರದ ಮೌಲ್ಯ ಬರೋಬ್ಬರಿ 52 ಲಕ್ಷ ರೂಪಾಯಿ ಆಗಿದೆ. ಇನ್ನು ಕನ್ನಡದ ಹುಡುಗಿ ಮತ್ತು ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಧರಿಸುವ ಮಂಗಳ ಸೂತ್ರದಲ್ಲಿ ಬಾರಿ ಬೆಲೆ ಬಾಳುವ ವಜ್ರವಿದ್ದು ಅದರ ಮೌಲ್ಯ 20 ಲಕ್ಷ ರೂಪಾಯಿ ಆಗಿದೆ. ಇನ್ನು ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರು ಸಾಂಪ್ರದಾಯಿಕ ಮಂಗಳ ಸೂತ್ರವನ್ನ ಧರಿಸಿದ್ದು ಅದರಲ್ಲಿ ಚಿನ್ನ ಕರಿಮಣಿಯ ಜೊತೆಗೆ ದೊಡ್ಡ ವಜ್ರವಿದ್ದು ಅದರ ನಿಖರವಾದ ಬೆಲೆ ಇಲ್ಲಿಯ ತನಕ ತಿಳಿದು ಬಂದಿಲ್ಲ.
ಇನ್ನು ಬಳ್ಳಿಯಂತೆ ಬಳಕುವ ಬೆಡಗಿ ಶಿಲ್ಪಿ ಶೆಟ್ಟಿ ಅವರ ಮಂಗಳ ಸೂತ್ರದ ಬೆಲೆ ಬರೋಬ್ಬರಿ 30 ಲಕ್ಷ ರೂಪಾಯಿ ಆಗಿದೆ. ಇನ್ನು ಅಜಯ್ ದೇವಗನ್ ಅವರನ್ನ ಮದುವೆಯಾದ ಕಾಜಲ್ ಅವರ ಮಂಗಳ ಸೂತ್ರದ ಬೆಲೆ 21 ಲಕ್ಷ ರೂಪಾಯಿ ಆಗಿದೆ. ಇನ್ನು ಬಹಳ ಹಿಂದೆ ಮದುವೆಯನ್ನ ಮಾಡಿಕೊಂಡಿರುವ ಮಾಧುರಿ ದೀಕ್ಷಿತ್ ಅವರ ಮಂಗಳ ಸೂತ್ರದ ಮೌಲ್ಯ 9 ಲಕ್ಷ ರೂಪಾಯಿ ಆಗಿದೆ. ಹಿಂದೆ ಅರಿಶಿಣದ ಕೊಂಬಿನಲ್ಲಿ ನಡೆಯುತ್ತಿದ್ದ ಮದುವೆಗಳು ಈಗ ಚಿನ್ನ ಮತ್ತು ವಜ್ರಗಳಲ್ಲಿ ನಡೆಯುತ್ತಿದೆ ಎಂದು ಹೇಳಬಹುದು. ಸ್ನೇಹಿತರೆ ಮಂಗಳ ಸೂತ್ರದ ಮೌಲ್ಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.