ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿರುವ ವಿಷಯಗಳಲ್ಲಿ 20 ವರ್ಷದ ಯುವತಿ 45 ವರ್ಷದ ಪುರುಷನನ್ನ ಮದುವೆಯಾದ ವಿಷಯ ಕೂಡ ಒಂದಾಗಿದೆ ಎಂದು ಹೇಳಬಹುದು. ಇವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇವರ ಮದುವೆಯ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಕಂಡ ಜನರು ಆಶ್ಚರ್ಯವನ್ನ ಸೂಚಿಸಿದ್ದಾರೆ ಎಂದು ಹೇಳಬಹುದು. ಇನ್ನು ಕೆಲವರ ಮನದಲ್ಲಿ ಕಾಡುತ್ತಿರುವ ಪ್ರಶ್ನೆ ಏನು ಅಂದರೆ ಈ 25 ವರ್ಷದ ಯುವತಿ 45 ವರ್ಷದ ಪುರುಷನನ್ನ ಮದುವೆಯಾಗಲು ಕಾರಣ ಏನು ಅನ್ನುವುದು ಆಗಿದೆ. ಮದುವೆ ಅನ್ನುದು ಗಂಡು ಮತ್ತು ಹೆಣ್ಣಿನ ಜೀವನದಲ್ಲಿ ನಡೆಯುವ ಒಂದು ಸುಮದುರ ಕ್ಷಣ ಆಗಿದೆ ಮತ್ತು ಆ ದಿನವನ್ನ ಅವರು ಜೀವನಪರ್ಯಂತ ನೆನಪಿನಲ್ಲಿ ಇಟ್ಟಿಕೊಳ್ಳುತ್ತಾರೆ.
ಹಿಂದಿನ ಕಾಲದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ವರ ಮತ್ತು ವಧುವನ್ನ ಹುಡುಕಿ ಮದುವೆಯನ್ನ ಮಾಡುತ್ತಿದ್ದರು, ಆದರೆ ಈಗಿನ ಕಾಲದಲ್ಲಿ ಯುವಕ ಯುವತಿಯರು ತಮಗೆ ಬೇಕಾದ ವರ ಮತ್ತು ವಧುವನ್ನ ತಾವೇ ಹುಡುಕಿಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ 25 ವರ್ಷದ ಯುವತಿ 45 ವರ್ಷದ ಪುರುಷನನ್ನ ಮದುವೆಯಾಗಿದ್ದು ಯಾಕೆ ಮತ್ತು ಇದರ ಹಿಂದೆ ಇರುವ ಅಸಲಿ ಸತ್ಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ವಯಸ್ಸಿನಲ್ಲಿ ತನಗಿಂತ 20 ವರ್ಷ ದೊಡ್ಡವನಾದ ಪುರುಷನನ್ನ ಈ ಯುವತಿ ತಾನೇ ಇಷ್ಟಪಟ್ಟು ಮದುವೆಯನ್ನ ಮಾಡಿಕೊಂಡಿದ್ದಾಳೆ.
ಸ್ನೇಹಿತರೆ ನೀವು ಫೋಟೋದಲ್ಲಿ ನೋಡುತ್ತಿರುವ ಈ ಯುವತಿಯ ಹೆಸರು ಮೇಘನಾ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಗ್ರಾಮ ಇವರು ಪರಸ್ಪರ ಇಷ್ಟಪಟ್ಟು ಮದುವೆಯನ್ನ ಮಾಡಿಕೊಂಡಿದ್ದಾರೆ. ಇನ್ನು 45 ವರ್ಷದ ಈ ಪುರುಷರ ಹೆಸರು ಶಂಕರಣ್ಣ. ಈತನಿಗೆ 45 ವರ್ಷದವರು ಇನ್ನೂ ಕೂಡ ಮದುವೆಯಾಗಿಲ್ಲ ಮತ್ತು ಇವರ ಬಳಿ ಸ್ವತಃ ಮೇಘನಾ ಹೋಗಿ ತನ್ನನ್ನ ಮದುವೆಯಾಗಿ ಎಂದು ಪ್ರಸ್ತಾಪ ಇಟ್ಟಿದ್ದರಂತೆ ಮತ್ತು ಈ ಪ್ರಸ್ತಾವನೆಗೆ ಒಪ್ಪಿದ ಶಂಕರಣ್ಣ ಹತ್ತಿರದ ದೇವಾಲಯದಲ್ಲಿ ಸರಳವಾಗಿ ಮದುವೆಯನ್ನ ಮಾಡಿಕೊಂಡಿದ್ದಾರೆ.
ಇನ್ನು ಮೇಘನಾ ಈಗಾಗಲೇ ಬೇರೊಬ್ಬನ ಜೊತೆ ಮದುವೆಯಾಗಿದ್ದು ಕಳೆದ ಎರಡು ವರ್ಷಗಳಿಂದ ಆಕೆಯ ಪತಿ ಕಾಣೆಯಾಗಿದ್ದಾನೆ ಮತ್ತು ಆತ ತನ್ನ ಪತ್ನಿಯನ್ನ ಇಲ್ಲಿಯತನಕ ನೋಡಲು ಬರಲಿಲ್ಲವಂತೆ ಮತ್ತು ಈ ಕಾರಣಕ್ಕೆ ಜೀವನದಲ್ಲಿ ನೊಂದ ಮೇಘನಾ ಶಂಕರಣ್ಣನನ್ನ ಮದುವೆಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಸದ್ಯ ಇವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು ಟ್ರೋಲಿಗರು ಚನ್ನಾಗಿ ಟ್ರೊಲ್ ಮಾಡುತ್ತಿದ್ದಾರೆ ಎಂದು ಹೇಳಬಹುದು. ಸ್ನೇಹಿತರೆ ಇವರಿಬ್ಬರ ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.