ನೀರಜ್ ಚೋಪ್ರಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಮ್ಮ ದೇಶದ ಕೀರ್ತಿಯನ್ನ ಮೇಲಕ್ಕೆ ಎತ್ತಿದ ವ್ಯಕ್ತಿ ಅಂದರೆ ಅದು ನೀರಜ್ ಚೋಪ್ರಾ ಎಂದು ಹೇಳಬಹುದು ಒಲಂಪಿಕ್ ನಲ್ಲಿ ಭಾರತಕ್ಕೆ ಚಿನ್ನವನ್ನ ಗೆಲ್ಲಿಸಿಕೊಡುವುದರ ಮೂಲಕ ನಮ್ಮ ದೇಶದ ಘನತೆಯನ್ನ ಗಗನಕ್ಕೆ ಏರಿಸಿದ ನಮ್ಮ ಹೆಮ್ಮೆಯ ಕ್ರೀಡಾಪತಿ ನೀರಜ್ ಚೋಪ್ರಾ ದೇಶದಲ್ಲಿ ಅಪಾರವಾದ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. ಹಲವು ವರ್ಷಗಳ ನಂತರ ಭಾರತಕ್ಕೆ ಚಿನ್ನವನ್ನ ಗೆಲ್ಲಿಸಿಕೊಟ್ಟು ಹೊಸ ಇತಿಹಸವನ್ನ ಸೃಷ್ಟಿ ಮಾಡಿದ ಜನರ ಮನದಲ್ಲಿ ಸ್ಥಾನವನ್ನ ನೀರಜ್ ಚೋಪ್ರಾ ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು ಮೊನ್ನೆ ನೀರಜ್ ಚೋಪ್ರಾ ಅವರು ದೇಶದ ಪ್ರಧಾನಿಯಾಗಲಿರುವ ನರೇಂದ್ರ ಮೋದಿಯವರಿಗೆ ತಾವು ಚಿನ್ನದ ಗೆಲ್ಲಲು ಕಾರಣವಾದ ಜಾವೆಲಿನ್ ಅನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಿದರು.
ಹೌದು ಸ್ನೇಹಿತರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಈ ಹರಾಜಿನಲ್ಲಿ ನೀರಜ್ ಚೋಪ್ರಾ ಅವರ ಜಾವೆಲಿನ್ ಉನ್ನತ ಬೆಲೆಗೆ ಮಾರಾಟಗೊಂಡಿವೆ. ಹಾಗಾದರೆ ನಮ್ಮ ದೇಶಕ್ಕೆ ಹೆಮ್ಮೆ ತಂದುಕೊಟ್ಟ ಜಾವೆಲಿನ್ ಎಷ್ಟು ಬೆಲೆಗೆ ಮಾರಾಟವಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದಂತ ನೀರಜ್ ಚೋಪ್ರಾ ಅವರು ಜಾವೆಲಿನ್ ನಲ್ಲಿ ಚಿನ್ನವನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದರು.
ಇನ್ನು ಚಿನ್ನವನ್ನ ಗೆದ್ದು ಚಿನ್ನದ ಹುಡುಗ ಭಾರತಕ್ಕೆ ಮರಳಿದ ನಂತರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಸಂತಸ ಹಂಚಿಕೊಂಡಿದ್ದರು. ಇನ್ನು ಮೋದಿಯವರನ್ನ ಭೇಟಿಯಾದ ಸಮಯದಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದ ಜಾವೆಲಿನ್ ಅನ್ನುವ ಮೋದಿಗೆ ನೀಡಿದ್ದರು ಮತ್ತು ಈಗ ಆ ಜಾವೆಲಿನ್ ಅನ್ನು ಹರಾಜಿಗೆ ಇಡಲಾಗಿದ್ದು ಅತ್ಯಧಿಕ ಬೆಲೆಗೆ ಮಾರಾಟವಾಗಿದೆ. ಅಪ್ರತಿಮ ಜಾವೆಲಿನ್ ಹರಾಜಿನಲ್ಲಿ 15 ಮಿಲಿಯನ್ ಹಣವನ್ನ ಗಳಿಸಿಕೊಂಡಿದೆ ಮತ್ತು ಹರಾಜಿನಿಂದ ಬರುವ ಆದಾಯವು ನಮಾಮಿ ಗಂಗೆ ಉಪಕ್ರಮಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಭಾರತೀಯ ಸಂಸ್ಕೃತಿ ಸಚಿವಾಲಯ ಹೇಳಿದೆ.
ಇನ್ನು ಈ ಹರಾಜಿನಲ್ಲಿ ಒಟ್ಟು 1348 ಸ್ಮರಣಿಕೆಗಳನ್ನು ಮಾರಾಟ ಮಾಡಲಾಗಿದೆ ಮತ್ತು ಸುಮಾರು 8600 ಬಿಡ್ ಗಳನ್ನು ಸ್ವೀಕರಿಸಲಾಗಿದೆ. ಇನ್ನು ಚೋಪ್ರಾ ಅವರ ಜಾವೆಲಿನ್ ಹೊರತುಪಡಿಸಿ ಭವಾನಿ ದೇವಿಯ ಆಟೋಗ್ರಾಫ್ ಮಾಡಿದ ಬೇಲಿ (ರೂ 12.5 ಮಿಲಿಯನ್), ಸುಮಿತ್ ಆಂಟಿಲ್ ಅವರ ಜಾವೆಲಿನ್ (10 ದಶಲಕ್ಷ ರೂ.ಗೂ ಹೆಚ್ಚು) ಹರಾಜಿನಲ್ಲಿ ಜನಪ್ರಿಯ ವಸ್ತುಗಳಾಗಿದ್ದವು. ಸ್ನೇಹಿತರೆ ಭಾರತ ಕೀರ್ತಿ ಪತಾಕೆಯನ್ನ ಎತ್ತಿಹಿಡಿದ ನೀರಜ್ ಚೋಪ್ರಾ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.