ತಮ್ಮ ಸಾಮಾಜಿಕ ಕಾರ್ಯಗಳಿಗೆ ಸಮಸ್ಯೆ ಆಗಬಾರದೆಂದು ಪುನೀತ್ ಡೆಪಾಸಿಟ್ ಮಾಡಿದ ಹಣ ಎಷ್ಟು ಕೋಟಿ ಗೊತ್ತಾ, ನಿಜಕ್ಕೂ ಗ್ರೇಟ್ ನೋಡಿ.

ಅಪ್ಪು ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸಾಮಾನ್ಯವಾಗಿ ಇಡೀ ದೇಶವೇ ಇಷ್ಟಪಡುವ ವ್ಯಕ್ತಿಗಳಲ್ಲಿ ನಮ್ಮ ಪುನೀತ್ ರಾಜಕುಮಾರ್ ಕೂಡ ಒಬ್ಬರು ಎಂದು ಹೇಳಬಹುದು. ತನ್ನ ಸಾಮಾಜಿಕ ಕಾರ್ಯಗಳ ಮೂಲಕ ಪ್ರತಿಯೊಬ್ಬ ಮನುಷ್ಯನ ಮನದಲ್ಲಿ ಸ್ಥಾನವನ್ನ ಗಿಟ್ಟಿಸಿಕೊಂಡಿದ್ದಾರೆ ನಮ್ಮ ಪುನೀತ್ ರಾಜಕುಮಾರ್ ಅವರು. ಇನ್ನು ಪುನೀತ್ ಅವರು ನಮ್ಮನ್ನ ಅಗಲಿ ಎರಡು ವಾರಗಳು ಕಳೆದಿದೆ, ಆದರೆ ಅವರು ಇಂದಿಗೂ ನಮ್ಮಜೊತೆ ಇದ್ದಾರೆ ಅನ್ನುವುದಕ್ಕೆ ಹಲವು ಉದಾಹರಣೆಗಳು ಇದೆ ಎಂದು ಹೇಳಬಹುದು. ಇನ್ನು ನಿನ್ನೆ ಪುನೀತ್ ರಾಜಕುಮಾರ್ ಅವರ 11 ನೇ ದಿನದ ಪುಣ್ಯ ಸ್ಮರಣೆಯನ್ನ ಮಾಡಲಾಗಿದ್ದು ಇಂದು ಸುಮಾರು 25 ಸಾವಿರ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನ ಮಾಡಲಾಗಿದೆ.

ಇನ್ನು ವಿಷಯಕ್ಕೆ ಬರುವುದಾದರೆ ಪುನೀತ್ ರಾಜಕುಮಾರ್ ಅವರು ಬರಿ ಚಿತ್ರಗಳಲ್ಲಿ ಮಾತ್ರ ಹೀರೋ ಆಗಿರದೆ ಅದೆಷ್ಟೋ ಬಡಜನರ ಪಾಲಿಗೆ ಹೀರೋ ಎಂದು ಹೇಳಬಹುದು. ಹಲವು ಅನಾಥ ಆಶ್ರಮಗಳು, ವೃದ್ಧಾಶ್ರಮಗಳು, ಗೋಶಾಲೆಗಳು ಮತ್ತು ಅದೆಷ್ಟೋ ಮಕ್ಕಳಿಗೆ ಪುನೀತ್ ರಾಜಕುಮಾರ್ ಅವರು ವಿಧ್ಯಾಭ್ಯಾಸವನ್ನ ನೀಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಮುಂದಿನ ದಿನ ಹೇಗಿರುತ್ತದೆ ಅನ್ನುವುದನ್ನ ಯಾರಿಂದಲೂ ಊಹೆ ಮಾಡಲು ಸಾಧ್ಯವಿಲ್ಲ ಅನ್ನುವ ಕಾರಣಕ್ಕೆ ತನ್ನ ಸಾಮಾಜಿಕ ಕಾರ್ಯಗಳಿಗೆ ಯಾವುದೇ ಸಮಸ್ಯೆ ಉಂಟಾಗಬಾರದು ಅನ್ನುವ ಉದ್ದೇಶದಿಂದ ಪುನೀತ್ ರಾಜಕುಮಾರ್ ಅವರು ಅದಕ್ಕಾಗಿ ಹಣವನ್ನ ಕೂಡಿಟ್ಟಿದ್ದಾರೆ ಅನ್ನುವ ಮಾಹಿತಿ ಕೆಲವು ಮೂಲಗಳಿಂದ ತಿಳಿದು ಬಂದಿದೆ.

Great punit rajakumar

ಹಾಗಾದರೆ ಪುನೀತ್ ರಾಜಕುಮಾರ್ ಅವರು ತಮ್ಮ ಸಾಮಾಜಿಕ ಕಾರ್ಯಗಳಿಗಾಗಿ ಕೂಡಿಟ್ಟ ಹಣ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಪುನೀತ್ ರಾಜಕುಮಾರ್ ಅವರು ಅದೆಷ್ಟೋ ಸಾಮಾಜಿಕ ಕಾರ್ಯಗಳನ್ನ ಮಾಡಿ ಜನರ ಸೇವೆಯನ್ನ ಮಾಡಿದವರು ಎಂದು ಹೇಳಬಹುದು. ಬಲಗೈಯಲ್ಲಿ ಕೊಟ್ಟಿದ್ದು ಎಡಕೈಗೆ ಗೊತ್ತಾಗದ ಹಾಗೆ ಸಹಾಯವನ್ನ ಮಾಡುತ್ತಿದ್ದರು ಎಂದು ಹೇಳಬಹುದು. ಪುನೀತ್ ಅವರ ಅಗಲಿಕೆ ಇಡೀ ದೇಶಕ್ಕೆ ಅಪಾರವಾದ ನಷ್ಟವನ್ನ ಉಂಟುಮಾಡಿದೆ ಎಂದು ಹೇಳಬಹುದು.

ಇನ್ನು ಕೆಲವು ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ನಟ ಪುನೀತ್ ರಾಜಕುಮಾರ್ ಅವರು ತಮ್ಮ ಸಾಮಾಜಿಕ ಕಾರ್ಯಗಳಿಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಆಗಬಾರದು ಅನ್ನುವ ಉದ್ದೇಶದಿಂದ ಸುಮಾರು 8 ಕೋಟಿ ರೂಪಾಯಿಯನ್ನ ಡೆಪಾಸಿಟ್ ಮಾಡಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ. ಇನ್ನು ಪುನೀತ್ ರಾಜಕುಮಾರ್ ಅವರು ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳನನ್ನ ಇನ್ನುಮುಂದೆ ಶಿವಣ್ಣ ಮತ್ತು ಪುನೀತ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನೋಡಿಕೊಂಡು ಹೋಗುವ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಸ್ನೇಹಿತರೆ ನಮ್ಮ ನೆಚ್ಚಿನ ದೇವರ ಮನುಷ್ಯನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Great punit rajakumar

Join Nadunudi News WhatsApp Group