ಅಂದು ಅಂಬರೀಷ್ ಅವರು ಸತ್ಯಜಿತ್ ಗೆ ಚನ್ನಾಗಿ ಬೈದಿದ್ದು ಯಾಕೆ ಗೊತ್ತಾ, ಸತ್ಯಜಿತ್ ಮಾಡಿದ ಕೆಲಸ ಕೇಳಿದರೆ ಶಾಕ್ ಆಗುತ್ತದೆ.

ನಟ ಸತ್ಯಜಿತ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗ ಖ್ಯಾತ ವಿಲನ್ ನಟ ಮತ್ತು ಪೋಷಕ ನಟರಲ್ಲಿ ನಟ ಸತ್ಯಜಿತ್ ಅವರು ಕೂಡ ಒಬ್ಬರು ಎಂದು ಹೇಳಬಹುದು. ಕನ್ನಡದ 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಲನ್ ಮತ್ತು ಪೋಷಕ ನಟನ ಪಾತ್ರದಲ್ಲಿ ಮಿಂಚಿದ್ದ ನಟ ಸತ್ಯಜಿತ್ ಅವರು ಅಪಾರವಾದ ಅಭಿಮಾನಿಗಳನ್ನ ಕೂಡ ಗಳಿಸಿಕೊಂಡಿದ್ದರು ಎಂದು ಹೇಳಬಹುದು. ಅಂಬರೀಷ್, ವಿಷ್ಣುವರ್ಧನ್, ದರ್ಶನ್, ಸುದೀಪ್, ಪುನೀತ್, ಶಿವರಾಜಕುಮಾರ್, ದ್ವಾರಕೀಶ್ ಹೀಗೆ ಹತ್ತು ಹಲವು ನಾಯಕ ನಟರ ಜೊತೆ ನಟನೆಯನ್ನ ಮಾಡಿದ್ದ ನಟ ಸತ್ಯಜಿತ್ ಅವರು ತಮ್ಮ ಅಮೋಘವಾದ ನಟನೆಯ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಬಹಳ ಒಳ್ಳೆಯ ಸ್ಥಾನವನ್ನ ಗಿಟ್ಟಿಸಿಕೊಂಡಿದ್ದರು.

ನಿನ್ನೆ ರಾತ್ರಿ 2 ಘಂಟೆ ಸುಮಾರಿಗೆ ನಟ ಸತ್ಯಜಿತ್ ಅವರು ನಮ್ಮೆಲ್ಲರನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದು ಇಡೀ ಕನ್ನಡ ಚಿತ್ರರಂಗ ಸತ್ಯಜಿತ್ ಅವರ ಅಗಲಿಕೆಗೆ ಕಂಬನಿಯನ್ನ ಮಿಡಿದಿದೆ. ಸುಮಾರು 72 ವರ್ಷದ ನಟ ಸತ್ಯಜಿತ್ ಅವರು ಹಲವು ಸಮಯಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು ಅವರ ಕಾಲಿಗೆ ಗ್ಯಾಂಗ್ರಿನ್ ಆದಕಾರಣ ಅವರ ಒಂದು ಕಾಲನ್ನ ಕಟ್ ಮಾಡಲಾಗಿತ್ತು. ಕಳೆದ ಒಂದು ವಾರದಿಂದ ಅವರ ಆರೋಗ್ಯದಲ್ಲಿ ಬಹಳ ಏರುಪೇರು ಆದಕಾರಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸತ್ಯಜಿತ್ ಅವರು ನಿನ್ನೆ ಇಹಲೋಕವನ್ನ ತ್ಯಜಿಸಿದರು.

Great satyajit

ನಟ ಅಂಬರೀಷ್ ಮಟ್ಟಿ ಸತ್ಯಜಿತ್ ಅವರ ಬಹಳ ಒಳ್ಳೆಯ ಸ್ನೇಹಿತರಾಗಿದ್ದು ಒಮ್ಮೆ ಸತ್ಯಜಿತ್ ಅವರು ಮಾಡಲು ಹೊರಟಿತ್ತ ಕೆಲಸವನ್ನ ನೋಡಿ ನಟ ಅಂಬರೀಷ್ ಅವರು ಸತ್ಯಜಿತ್ ಅವರಿಗೆ ಚನ್ನಾಗಿ ಬೈದಿದ್ದರು. ಸ್ನೇಹಿತರೆ ನಟ ಸತ್ಯಜಿತ್ ಅವರು ಮಾಡಲು ಹೊರಟಿದ್ದ ಕೆಲಸ ಯಾವುದೆಂದು ತಿಳಿದರೆ ನಿಮ್ಮ ಎದೆ ಒಮ್ಮೆ ನಡುಗುತ್ತದೆ ಎಂದು ಹೇಳಬಹುದು. ಹಾಗಾದರೆ ನಟ ಸತ್ಯಜಿತ್ ಅವರು ಮಾಡಲು ಹೊರಟಿದ್ದ ಆ ಕೆಲಸ ಯಾವುದು ಮತ್ತು ಅಂಬರೀಷ್ ಅವರು ಸತ್ಯಜಿತ್ ಅವರಿಗೆ ಬೈದಿದ್ದು ಯಾಕೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಸ್ನೇಹಿತರೆ ಒಮ್ಮೆ ಸತ್ಯಜಿತ್ ಅವರು ಅಂಬರೀಷ್ ಅವರ ಜೊತೆ ಒಂದು ಚಿತ್ರದಲ್ಲಿ ನಟನೆಯನ್ನ ಮಾಡುವ ಸಮಯದಲ್ಲಿ ನಟ ಸತ್ಯಜಿತ್ ಅವರು ಚಿರತೆಯ ಜೊತೆ ಫೈಟ್ ಮಾಡಲು ಹೊರಟಿದ್ದರು. ನಿಜವಾದ ಚಿರತೆಯ ಜೊತೆ ಫೈಟ್ ಮಾಡಲು ಸತ್ಯಜಿತ್ ಅವರು ಹೊರಟಾಗ ಅದನ್ನ ಗಮನಿಸಿದ ಅಂಬರೀಷ್ ಅವರು ಸತ್ಯಜಿತ್ ಅವರಿಗೆ ಚನ್ನಾಗಿ ಬೈದಿದ್ದರು ಮತ್ತು ಚಿರತೆಯ ಜೊತೆ ಫೈಟ್ ಮಾಡುವುದನ್ನ ನಿಲ್ಲಿಸಿದ್ದರು. ಇಲ್ಲಿಯ ತನಕ ಈ ವಿಷಯ ಯಾರಿಗೂ ತಿಳಿದಿರಲಿಲ್ಲ, ನಿನ್ನೆ ಸತ್ಯಜಿತ್ ಅವರ ಬಗ್ಗೆ ಮಾತನಾಡಿದ ರಂಗಾಯಣ ರಘು ಅವರು ಈ ವಿಷಯವನ್ನ ಹೇಳಿಕೊಂಡರು. ಸ್ನೇಹಿತರೆ ನಟ ಸತ್ಯಜಿತ್ ಅವರ ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Great satyajit

Join Nadunudi News WhatsApp Group