Greaves Electric Scooter: ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದರೆ 30 ಸಾವಿರ ಮೌಲ್ಯದ ಎಲೆಕ್ಟ್ರಿಕ್ ಸೈಕಲ್ ಉಚಿತ, ಆಫರ್ ಕೆಲವು ದಿನಗಳು ಮಾತ್ರ.
Greaves Retail Electric Scooter Offer: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನು ಮಾರುಕಟ್ಟೆಗೆ ಹೊಸ ಹೊಸ ಮದಾರಿಯ ಎಲೆಕ್ಟ್ರಿಕ್ ವಾಹನಗಳು ಲಗ್ಗೆ ಇಡುತ್ತಿವೆ. ಇದೀಗ ವಿಶೇಷ ಆಫರ್ ನೊಂದಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ.
ಗ್ರೀವ್ಸ್ ಕಾಟನ್ ಒಡೆತನದ ಗ್ರೀವ್ಸ್ ರಿಟೇಲ್ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಖರೀದಿಯ ಮೇಲೆ ಗಮನ ಸೆಳೆಯುವ ಕೊಡುಗೆಯನ್ನು ಘೋಷಿಸಿದೆ. ಗ್ರೀವ್ಸ್ ರಿಟೇಲ್ ಶೋರೂಮ್ ಗೆ ಭೇಟಿ ನೀಡುವ ಮೂಲಕ ಈ ಕೊಡುಗೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಇದು ಸೀಮಿತ ಅವಧಿಯ ಕೊಡುಗೆಯಾಗಿದೆ.
ಗ್ರೀವ್ಸ್ ರಿಟೇಲ್ ಕಂಪನಿಯು ಫೇಸ್ಬುಕ್ ನ ಮೂಲಕ ಈ ಕೊಡುಗೆಯ ಬಗ್ಗೆ ಮಾಹಿತಿ ತಿಳಿಸಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದರೆ 30 ಸಾವಿರ ರೂ. ಮೌಲ್ಯದ ಉಚಿತ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಗೆಲ್ಲುವ ಅವಕಾಶವಿದೆ.
ಈ ಕೊಡುಗೆಯು ಪ್ರಾದೇಶಿಕ ಆಧಾರದ ಮೇಲೆ ಬದಲಾಗಬಹುದು. ಆದ್ದರಿಂದ ಆಫರ್ ನ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಲು ನಿಮ್ಮ ಹತ್ತಿರದ ಗ್ರೀವ್ಸ್ ಕಾಟನ್ ರಿಟೇಲ್ ಷೋರೂಮ್ ಗೆ ಭೇಟಿ ನೀಡುವ ಮೂಲಕ ಈ ಕೊಡುಗೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹದು.
ಕಂಪನಿಯು ಇತ್ತೀಚಿಗೆ ಆಂಪಿಯರ್ ಪ್ರೈಮಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದರ ಗರಿಷ್ಟ ವೇಗ ಗಂಟೆಗೆ 77 ಕಿಲೋಮೀಟರ್. ಕೇವಲ 4 .2 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಹೆಚ್ಚಿಸುತ್ತದೆ.
ಒಂದು ಬಾರಿ ಚಾರ್ಜ್ ಮಾಡಿದರೆ 107 ಕಿಲೋಮೀಟರ್ ವರೆಗೆ ಹೋಗಬಹುದು. ಈ ವಾಹನದಲ್ಲಿನ ಬ್ಯಾಟರಿಯನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಲು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆಂಪಿಯರ್ ಪ್ರೈಮಸ್ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ 109900 ರೂ. ಆಗಿದೆ.