Electric Scooter: 50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಈ ಎಲೆಕ್ಟ್ರಿಕ್ ಸ್ಕೂಟರ್, ಭರ್ಜರಿ 80 Km ಮೈಲೇಜ್.
ಒಂದೇ ಚಾರ್ಜ್ 80 ಕಿಲೋಮೀಟರ್ ಮೈಲೇಜ್ ನೀಡುವ Electric Scooter.
Greta Harper ZX Electric Scooter: ಸದ್ಯ ಮಾರುಕಟ್ಟೆಯಲ್ಲಿ Electric ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನಬಹುದು. ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್ , ಸ್ಕೂಟರ್ ಗಳನ್ನೂ ಪರಿಚಯಿಸುತ್ತಲೇ ಇರುತ್ತವೆ.
ಸದ್ಯ ಮರುಕಟ್ಟೆಯ್ಲಲಿ ಹೊಸ Electric Scooter ಬಿಡುಗಡೆಗೊಂಡು ಬಾರಿ ಸಂಚಲ ಮೂಡಿಸುತ್ತಿದೆ. ಈ ಸ್ಕೂಟರ್ ನ ಬೆಲೆ ಕೇಳಿದರೆ ಖರೀದಿಗೆ ಮನಸ್ಸಾಗುವುದಂತೂ ನಿಜ. ಏಕೆಂದರೆ ಈ ನೂತನ Electric Scooter 50 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಗ್ರಾಹಕರ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿರುವ ಬೈಕ್ ನ ಬಗ್ಗೆ ಸಂಪೂರ್ಣ ವಿವಿರ ಇಲ್ಲಿದೆ.
Greta Harper ZX Electric Scooter
ಶಕ್ತಿಯುತ ಬ್ಯಾಟರಿ ಪ್ಯಾಕಪ್ ನೊಂದಿಗೆ ಇದೀಗ ಮಾರುಕಅತ್ತೆಯಲ್ಲಿ Greta Harper ZX Electric Scooter ಬಿಡುಗಡೆಗೊಂಡಿದೆ. ಗ್ರಾಹಕರಿಗೆ ಕೆಡಿಮೆ ಬೆಲೆಯಲ್ಲಿ ಲಭ್ಯವಾಗುವ ಈ ಎಲೆಕ್ಟ್ರಿಕ್ ಮಾದರಿ ಹೆಚ್ಚಿನ ಮೈಲೇಜ್ ಜೊತೆಗೆ ನೂತನ ಸುಧಾರಿತ ಫೀಚರ್ ಅನ್ನು ಒಳಗೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನ ತೂಕ ಬಹಳ ಕಡಿಮೆಯಿದ್ದು ಇದರ ನಿರ್ವಹಣೆ ಇನ್ನಷ್ಟು ಸುಲಭವಾಗಲಿದೆ.
ಒಂದೇ ಚಾರ್ಜ್ 80 ಕಿಲೋಮೀಟರ್ ಮೈಲೇಜ್
ಕಂಪನಿಯ ಆಕರ್ಷಕ Greta Harper ZX Electric Scooter ನಲ್ಲಿ ಶಕ್ತಿಯುತ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದೆ. ಕಂಪನಿಯು BLDC ತಂತ್ರಜ್ಞಾನದ ಆಧಾರದ ಮೇಲೆ ಎಲೆಕ್ಟ್ರಿಕ್ ಮೋಟಾರ್ ನೊಂದಿಗೆ ಸಂಯೋಜಿಸಿದೆ.
ಈ ಸ್ಕೂಟರ್ ನಲ್ಲಿ ಅಳವಡಿಸಲಾದ ಬ್ಯಾಟರಿ ಪ್ಯಾಕ್ ಅನ್ನು ಸ್ಟ್ಯಾಂಡರ್ಡ್ ಚಾರ್ಜರ್ ನೊಂದಿಗೆ ಸಂಪೂರ್ಣವಾಗಿ ಚಾರ್ಜ್ ಮಾಡಲು ಕೇವಲ 3 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಈ ಸ್ಕೂಟರ್ 80 ಕಿಲೋಮೀಟರ್ ವ್ಯಾಪ್ತಿಯವರೆಗೆ ಚಲಿಸುತ್ತದೆ. ಇದನ್ನು ಗಂಟೆಗೆ 25 ಕಿಲೋಮೀಟರ್ ವೇಗದಲ್ಲಿ ಓಡಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ.
50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಸ್ಕೂಟರ್
ಇನ್ನು ಈ Electric Scooter ನಲ್ಲಿ Digital Speedometer, Digital Instrument Console, Digital Trip Meter, Fast Charging, Push Button Start, Anti-Theft Alarm, USB Charging Point, Multi Riding Modes, LED Headlight, LED Turn Signal Lamp and DRL ವೈಶಿಷ್ಟ್ಯವನ್ನು ನೋಡಬಹುದಾಗಿದೆ. ಈ ಎಲ್ಲಾ ಹತ್ತು ಹಲವು ವೈಶಿಷ್ಟ್ಯಗಳಿರುವ Greta Harper ZX Electric Scooter ಕೇವಲ 41999 ರೂ. ಗಳಲ್ಲಿ ಲಭ್ಯವಾಗಲಿದೆ.