Gruha Jyothi: ಗೃಹಜ್ಯೋತಿ ಯೋಜನೆಯಿಂದ ವಂಚಿತರಾದವರಿಗೆ ಗುಡ್ ನ್ಯೂಸ್, ಹೊಸ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.
ಗೃಹ ಜ್ಯೋತಿ ಯೋಜನೆಯಿಂದ ವಂಚಿತರಾದವರಿಗೆ ರಾಜ್ಯ ಸರ್ಕಾರ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ.
Gruha Jyothi Latest Update: Congress ಸರ್ಕಾರದ ಉಚಿತ ಗ್ಯಾರಂಟಿಗಳಲ್ಲಿ ಒಂದಾದ Gruha Jyothi ಯೋಜನೆ ಈಗಾಗಲೇ ಅನುಷ್ಠಾನಗೊಂಡು ರಾಜ್ಯದ ಜನತೆ ಈ ಯೋಜನೆ ಲಾಭ ಪಡೆಯುತ್ತಿದ್ದಾರೆ. ಇನ್ನು ಗೃಹ ಜ್ಯೋತಿ ಯೋಜನೆಯಡಿ ಅರ್ಹರು ಉಚಿತವಾಗಿ 200 ಯುನಿಟ್ ವಿದ್ಯುತ್ ಅನ್ನು ಪಡೆಯುತ್ತಿದ್ದಾರೆ. ಆದರೆ ಈ Gruha Jyothi ಯೋಜನೆಯ ಲಾಭ ರಾಜ್ಯದ ಎಲ್ಲರಿಗು ಲಭ್ಯವಾಗಿಲ್ಲ.
ಈ ಹಿಂದೆ 200 ಯುನಿಟ್ ಗಿಂತ ಹೆಚ್ಚಿನ ವಿದ್ಯುತ್ ಬಳಸುತ್ತಿದ್ದವರು ರಾಜ್ಯ ಸರಕಾರದ ಗೃಹ ಜ್ಯೋತಿ ಯೋಜನೆಯಿಂದ ವಂಚಿತರಿಗಿದ್ದರು. ಸದ್ಯ ರಾಜ್ಯ ಸರ್ಕಾರ ಗೃಹ ಜ್ಯೋತಿ ಯೋಜನೆ ಲಾಭ ಪಡೆಯದವರಿಗೆ ಸಿಹಿ ಸುದ್ದಿ ನೀಡಿದೆ. ಗೃಹ ಜ್ಯೋತಿ ಯೋಜನೆಯಿಂದ ವಂಚಿತರಾದವರಿಗೆ ರಾಜ್ಯ ಸರ್ಕಾರ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ.
ಗೃಹ ಜ್ಯೋತಿ ಯೋಜನೆ ಲಾಭ ಪಡೆಯದವರಿಗೆ ಸರ್ಕಾರದಿಂದ ಗುಡ್ ನ್ಯೂಸ್
ಸದ್ಯ ರಾಜ್ಯ ಸರ್ಕಾರ ಗೃಹ ಜ್ಯೋತಿ ಯೋಜನೆಯಡಿ ಲಾಭ ಪಡೆಯದವರಿಗೆ “ರಿಯಾಯಿತಿ ವಿದ್ಯುತ್ ದರ ಯೋಜನೆ”ಯನ್ನು ಪರಿಚಯಿಸಲು ಸಜ್ಜಾಗಿದೆ. ಈ ಯೋಜನೆಗೆ ಸೆಸ್ಕಾಂ ಅರ್ಜಿಯನ್ನು ಆಹ್ವಾನಿಸಿದೆ. ಈ ಕುರಿತು ಚಾಮುಂಡೇಶ್ವವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ರಿಯಾಯಿತಿ ವಿದ್ಯುತ್ ದರ ಯೋಜನೆಗೆ ಯಾರು ಅರ್ಹರು..?
ಸರಾಸರಿ ಮಾಸಿಕ ಬಳಕೆಗಿಂತ ಹೆಚ್ಚುವರಿ ಮಾಸಿಕ ಬಳಕೆಗೆ ಪ್ರತಿ ಯುನಿಟ್ ಗೆ ರೂ. 5 ರಿಯಾಯಿತಿ ದರದ ವಿದ್ಯುತ್ ಯೋಜನೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ರಿಯಾಯಿತಿ ವಿದ್ಯುತ್ ದರ ಯೋಜನೆಯು H.T ಹಾಗೂ L.T ಗ್ರಾಹಕರಿಗೆ ಅನ್ವಯಿಸಲಿದೆ. ಇಂತಹ ಸೆಸ್ಕಾಂ ವಿದ್ಯುತ್ ಗ್ರಾಹಕರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಯೋಜನೆಗೆ ವಿಧಿಸಲಾದ ಷರತ್ತುಗಳೇನು..?
*ರಿಯಾಯಿತಿ ವಿದ್ಯುತ್ ದರ ಯೋಜನೆಗೆ ಮುಕ್ತ ಮಾರ್ಗ, ವ್ಹೀಲಿಂಗ್, ಬ್ಯಾಂಕಿಂಗ್ ಹಾಗೂ ವಿಶೇಷ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ವಿದ್ಯುತ್ ಅನ್ನು ಪಡೆಯಲು ಅವಕಾಶ ಇರುವುದಿಲ್ಲ.
*ಸಮಯಾಧಾರಿತ ವಿದ್ಯುತ್ ದರಗಳು ರಿಯಾಯಿತಿ ವಿದ್ಯುತ್ ದರ ಯೋಜನೆಯಡಿಯಲ್ಲಿ ಬಳಸುವ ವಿದ್ಯುತ್ ಬಳಕೆಗೆ ಅನ್ವಯಿಸುವುದಿಲ್ಲ.