Gruha Jyothi: ಗೃಹ ಜ್ಯೋತಿ ಫಲಾನುಭವಿಗಳಿಗೆ ಶಾಕ್, ಸದ್ಯದಲ್ಲೇ ಸ್ಥಗಿತಗೊಳ್ಳಲಿದೆ ಉಚಿತ ಕರೆಂಟ್.

ಸದ್ಯದಲ್ಲೇ ಸ್ಥಗಿತಗೊಳ್ಳಲಿದೆ ಉಚಿತ ಕರೆಂಟ, ಗೃಹ ಜ್ಯೋತಿ ಫಲಾನುಭವಿಗಳಿಗೆ ಬೇಸರದ ಸುದ್ದಿ

Gruha Jyothi Scheme Stop: ಸದ್ಯ ಬೇಸಿಗೆಗಾಲ ಆರಂಭಗೊಂಡಿದೆ. ಆರಂಭದಲ್ಲಿಯೇ ಬೇಸಿಗೆಯ ಶೆಕೆ ಜನರಿಗೆ ತೊಂದರೆ ನೀಡುತ್ತಿದೆ. ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಜನರು ಹಲವು ರೀತಿಯಲ್ಲಿ ಪ್ರಯತ್ನಿಸುವಂತಾಗಿದೆ. ಇನ್ನು ಬಿಸಿಲಿನ ಶಾಖಕ್ಕೆ ಜನರು ಎಸಿ, ಕೂಲರ್, ಫ್ಯಾನ್ ಗಳ ಬಳಕೆ ಹೆಚ್ಚು ಮಾಡಲು ಆರಂಭಿಸಿದ್ದಾರೆ. ಇನ್ನು ಕಾಂಗ್ರೆಸ್ ಸರ್ಕಾರ ಪರಿಚಯಿಸಿರುವ Gruha jyothi ಯೋಜನೆಯ ಬಳಕೆದಾರರು ಕರೆಂಟ್ ಬಿಲ್ ನ ಬಗ್ಗೆ ಚಿಂತಿಸದೆ ವಿದ್ಯುತ್ ಬಳಸುತ್ತಿದ್ದಾರೆ.

ಉಚಿತ ಕರೆಂಟ್ ಲಬ್ಯವಿರುವ ಕಾರಣ ಅಷ್ಟೊಂದು ಬಿಲ್ ಬರುವುದಿಲ್ಲ ಎನ್ನುವ ಒಂದು ಕಾರಣಕ್ಕೆ ವಿದ್ಯುತ್ ಹೆಚ್ಚು ಬಳಕೆ ಮಾಡಿಕೊಳ್ಳಲಾಗುತ್ತಿದೆ. ನೀವು ಗೃಹ ಜ್ಯೋತಿ ಬಳಕೆದಾರರಾಗಿದ್ದು, ಹೆಚ್ಚಿನ ವಿದ್ಯುತ್ ಬಳಸುತ್ತಿದ್ದಾರೆ ಈ ಮಾಹಿತಿಯನ್ನು ತಪ್ಪದೆ ತಿಳಿದುಕೊಳ್ಳಿ. ಏಕೆಂದರೆ ನೀವು ಈ ತಪ್ಪು ಮಾಡಿದರೆ ಇನ್ನುಮುಂದೆ ಗೃಹ ಜ್ಯೋತಿ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಸಾದ್ಯವಾಗವುದಿಲ್ಲ.

Gruha Jyothi Scheme Stop
Image Credit: Oneindia

ಗೃಹ ಜ್ಯೋತಿ ಫಲಾನುಭವಿಗಳಿಗೆ ಶಾಕ್
ಈ ಬೇಸಿಗೆ ಕಾಲದಲ್ಲಿ ವಿದ್ಯುತ್ ಹೆಚ್ಚು ಬೇಕಾಗುತ್ತದೆ. ಎಲ್ಲರು ಕೂಡ ತಮ್ಮ ಮಿತಿಗಿಂತ ಹೆಚ್ಚಿನ ವಿದ್ಯುತ್ ಅನ್ನು ಬಳಸುತ್ತಾರೆ. ಈ ಮೂಲಕ ಉಚಿತ ವಿದ್ಯುತ್ ನ ಲಾಭ ಇದ್ದರು ಕೂಡ ಹೆಚ್ಚಿನ ಬಿಲ್ ಪಾವತಿ ಅನಿವಾರ್ಯವಾಗಿದೆ. ಸದ್ಯ ಗೃಹ ಜ್ಯೋತಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ. ರಾಜ್ಯದಲ್ಲಿ ಉಚಿತ ವಿದ್ಯುತ್ ಬಳಕೆದಾರರಿಗೆ 2022 -23 ನೇ ಸಾಲಿನ ವಾರ್ಷಿಕ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ನೀಡಲಾಗಿತ್ತು.

ಇನ್ನು ಆಯಾ ಬಳಕೆದಾರರಿಗೆ ನಿಗದಿಪಡಿಸಿದಷ್ಟು ಯುನಿಟ್ ಅನ್ನು ಬಳಕೆದಾರರು ಉಚಿತವಾಗಿ ಪಡೆಯುತ್ತಿದ್ದರು. ನಿಗದಿತ ಸರಾಸರಿ 150 ಉಚಿತ ಯೂನಿಟ್‌ ಗಳಿಗಿಂತ 50 ಯೂನಿಟ್‌ ಗಳನ್ನು ಹೆಚ್ಚು ಬಳಕೆ ಮಾಡಿದರೆ ಪ್ರತಿ ಯೂನಿಟ್‌ ಗೆ 7 ರೂ. ಪಾವತಿಸಬೇಕು. ಈಗ ಬಿಸಿಲಿನಿಂದಾಗಿ ಶೇ.20ರಷ್ಟು ವಿದ್ಯುತ್ ಬಳಕೆ ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಕೆಯಿಂದಾಗಿ ಗೃಹ ಜ್ಯೋತಿ ಬಳಕೆದಾರರೂ ಸಹ ಸಾಮಾನ್ಯ ಗ್ರಾಹಕರಂತೆ ಎಲ್ಲಾ ಘಟಕಗಳಿಗೆ ನಿಗದಿತ ದರದಂತೆ ಬಿಲ್ ಪಾವತಿಸಬೇಕಾಗಿದೆ.

Gruha Jyothi Scheme Latest Update
Image Credit: Hindustantimes

ಸದ್ಯದಲ್ಲೇ ಸ್ಥಗಿತಗೊಳ್ಳಲಿದೆ ಉಚಿತ ಕರೆಂಟ್
ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದ ಶೇ.20ಕ್ಕೂ ಹೆಚ್ಚು ಗೃಹಜ್ಯೋತಿ ಗ್ರಾಹಕರಿಗೆ ಶಾಕ್ ನೀಡಿದೆ. ಒಂದು ಕುಟುಂಬವು ಸರಾಸರಿ 200 ಯೂನಿಟ್‌ ಗಿಂತ ಹೆಚ್ಚು ವಿದ್ಯುತ್ ಬಳಸಿದರೆ, ಎಲ್ಲಾ ಘಟಕಗಳಿಗೆ ಬಿಲ್ ಪಾವತಿಸಬೇಕಾಗುತ್ತದೆ.

Join Nadunudi News WhatsApp Group

200 ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆದಾರರಿಗೆ ಮಾತ್ರ ಉಚಿತ ವಿದ್ಯುತ್ ನ ಲಾಭ ದೊರೆಯುತ್ತದೆ. ನೀವು ಈ ಬೇಸಿಗೆಗಾಲದಲ್ಲಿ ವಿದ್ಯುತ್ ಬಳಸುವ ಮುನ್ನ ಸ್ವಲ್ಪ ಎಚ್ಚರಿಕೆ ವಹಿಸಿ. ಅತಿಯಾದ ವಿದ್ಯುತ್ ಬಳಕೆಯಿಂದಾಗಿ ಉಚಿತ ವಿದ್ಯುತ್ ನ ಲಾಭದಿಂದ ವಂಚಿತರಾಗಬಹುದು. ನೀವು 200 ಯುನಿಟ್ ಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದರೆ ನೀವು ಫ್ರಿ ಕರೆಂಟ್ ನಿಂದ ವಂಚಿರಾಗಬೇಕಾಗುತ್ತದೆ.

Gruha Jyothi Scheme In karnataka
Image Credit: Kannada News

Join Nadunudi News WhatsApp Group