Gruha Jyoti: ಎಲ್ಲರೂ ಈ ತಿಂಗಳು ಕಟ್ಟಬೇಕು ಸಂಪೂರ್ಣ ಕರೆಂಟ್ ಬಿಲ್, ನಿಯಮದಲ್ಲಿ ಬದಲಾವಣೆ.
ಜನರು ಈ ತಿಂಗಳು ಕೂಡ ಕಟ್ಟಬೇಕು ಸಂಪೂರ್ಣ ಕರೆಂಟ್ ಬಿಲ್, ಆಕ್ರೋಶ ಹೊರಹಾಕಿದ ಜನರು.
Gruha Jyothi Update: ರಾಜ್ಯದಲ್ಲಿ ಇದೀಗ ಉಚಿತ ಯೋಜನೆಗಳ ಕುರಿತು ಚರ್ಚೆ ನಡೆಯುತ್ತಿದೆ. ಗೃಹಜ್ಯೋತಿ (Gruha Jyothi) ಯೋಜನೆಯ ಕುರಿತು ಈಗಾಗಲೇ ಸಾಕಷ್ಟು ಅಪ್ಡೇಟ್ ಗಳು ಬಂದಿದೆ. ಆಗಸ್ಟ್ ತಿಂಗಳಿನಲ್ಲಿ ರಾಜ್ಯದ ಜನತೆಗೆ ಉಚಿತ ವಿದ್ಯುತ್ ಪೂರೈಕೆಯ ಬಗ್ಗೆ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದಾರೆ. ಇನ್ನು ರಾಜ್ಯದಲ್ಲಿ ಈಗಾಗಲೇ 1 .41 ಕೋಟಿ ಜನರು ಉಚಿತ ವಿದ್ಯುತ್ ನ ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿದ್ದಾರೆ.
ಆಗಸ್ಟ್ 1 ರಿಂದ ಜಾರಿಯಾಗಲಿದೆ ಗೃಹಜ್ಯೋತಿ ಯೋಜನೆ
ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಆಗಸ್ಟ್ 1 ರಿಂದ ಜಾರಿಗೆ ತರಲು ತೀರ್ಮಾನಿಸಿದೆ. 12 ತಿಂಗಳ ಸರಾಸರಿ ಆಧಾರದ ಮೇಲೆ ವಿದ್ಯುತ್ ಫ್ರೀ ಕೊಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನೀವು ಸರಾಸರಿ 70 ಯೂನಿಟ್ ಕರೆಂಟ್ ಬಳಸಿದ್ದರೆ ಅಥವಾ 199 ಯೂನಿಟ್ ಕರೆಂಟ್ ಬಳಕೆ ಮಾಡಿದ್ದರೆ, ಅಂದರೆ 12 ತಿಂಗಳ ಸರಾಸರಿ ಮೇಲೆ ವಿದ್ಯುತ್ ಫ್ರೀ ಕೊಡಲಾಗುತ್ತದೆ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ ಕರ್ನಾಟಕ ರಾಜ್ಯದ ಪ್ರತಿಯೊಬ್ಬರೂ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಇನ್ನು ಸೇವಾ ಸಿಂಧು ಪೋರ್ಟಲ್ ನ ಮೂಲಕ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸಲಾಗಿದೆ.
ರಾಜ್ಯದ ಜನತೆಗೆ ಉಚಿತ ವಿದ್ಯುತ್ ಭಾಗ್ಯ
ಇನ್ನು ಗೃಹ ಜ್ಯೋತಿ ಯೋಜನೆಗೆ ಯಾರು ಅರ್ಹರು ಎನ್ನುವ ಬಗೆ ಈಗಾಗಲೇ ಸರ್ಕಾರ ಮಾಹಿತಿ ನೀಡಿದೆ. ಇನ್ನು ಜೂನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿ ಜುಲೈ ನಲ್ಲಿಯೇ ಗೃಹಜ್ಯೋತಿ ಲಾಭ ರಾಜ್ಯದ ಜನತೆಗೆ ದೊರೆಯಬೇಕಿತ್ತು. ಆದರೆ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಕೆಗೆ ತಡೆಉಂಟಾಗಿತ್ತು.
ಈ ಕಾರಣ ರಾಜ್ಯದ ಜನತೆ ಜೂನ್ ನಲ್ಲಿ ತಮ್ಮ ವಿದ್ಯುತ್ ಬಿಲ್ ಅನ್ನು ಪಾವತಿಸಬೇಕಾಗಿತ್ತು. ಇನ್ನು ಜುಲೈ ಬಿಲ್ ಆಗಸ್ಟ್ ನಲ್ಲಿ ಬರಲಿದೆ. ಹೀಗಾಗಿ ಜುಲೈ ಬಿಲ್ ಸಂಪೂರ್ಣ ಶೂನ್ಯ ಆಗಲಿದೆ ಎಂದು ಜನರು ಸಂತಸದಲ್ಲಿದ್ದರೂ, ಆದರೆ ಇದೀಗ ಸರ್ಕಾರ ಫ್ರೀ ವಿದ್ಯುತ್ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ನೀಡಿದೆ ಮತ್ತು ಇಂತಹ ಜನರು ಜುಲೈ ತಿಂಗಳ ಬಿಲ್ ಪಾವತಿಸಬೇಕಾಗಿದೆ.
ಇಂತವರು ಈ ತಿಂಗಳು ಕಟ್ಟಬೇಕು ಸಂಪೂರ್ಣ ಕರೆಂಟ್ ಬಿಲ್
ಗೃಹ ಜ್ಯೋತಿ ಯೋಜನೆಯಡಿ ನೋಂದಣಿಯಾಗಿರುವ ಕೆಲವು ಗ್ರಾಹಕರಿಗೆ ಜುಲೈ ತಿಂಗಳ ಬಿಲ್ ಕಟ್ಟಬೇಕಾಗಿದೆ. ಶೂನ್ಯ ಬಿಲ್ ನೀರಿಕ್ಷೆಯಲ್ಲಿದ್ದವರಿಗೆ ಶಾಕ್ ಎದುರಾಗಿದೆ.
ಶೂನ್ಯ ಬಿಲ್ ನ ಬದಲಾಗಿ ಬಳಕೆ ಮಾಡಿದ ವಿದ್ಯುತ್ ಬಿಲ್ ನೀಡಲಾಗಿದೆ. ಜುಲೈನಲ್ಲಿಯೇ ಉಚಿತ ವಿದ್ಯುತ್ ನೋಂದಾಯಿಸಿದ್ದರು ಶೂನ್ಯ ಬಿಲ್ ಲಭಿಸಿಲ್ಲ. ಜುಲೈ 27 ರ ನಂತರ ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿದ್ದರೆ ಅಂತವರು ಸಂಪೂರ್ಣ ಕರೆಂಟ್ ಬಿಲ್ ಪಾವತಿಸಬೇಕಾಗಿದೆ. ಜುಲೈನ ಬಿಲ್ ಪಾವತಿಸಬೇಕು ಹಾಗು ಆಗಸ್ಟ್ ನಿಂದ ಶೂನ್ಯ ಬಿಲ್ ಬರುತ್ತದೆ.