Gruha Lakshmi: ಮೊಬೈಲ್ ಗೆ ಈ ಮೆಸೇಜ್ ಬಂದರೆ ಮಾತ್ರ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ, ಈಗಲೇ ಮೊಬೈಲ್ ಚೆಕ್ ಮಾಡಿ.

ಇನ್ನು ಸರ್ಕಾರದಿಂದ ಈ ರೀತಿಯ ಸಂದೇಶ ಬಂದಿದ್ದರೆ ಮಾತ್ರ ನಿಮ್ಮ ಖಾತೆಗೆ 2000 ರೂ. ಜಮಾ ಆಗುತ್ತದೆ.

Gruha Lakshmi 2000 Credit Message: ಸಾಕಷ್ಟು ದಿನಗಳಿಂದ ಚರ್ಚೆಯನ್ನು ಹುಟ್ಟುಹಾಕಿದ್ದ ಗೃಹಲಕ್ಷ್ಮಿ ಯೋಜನೆ(Gruha Lakshmi Yojana) ಜಾರಿಯಾಗಿದೆ. ಎರಡು ಮೂರು ಬಾರಿ ಚಾಲನೆಯ ದಿನಾಂಕ ಮೂಡೂಡಲ್ಪಟ್ಟಿದ್ದು ಇದೀಗ ನಿನ್ನೆ ಗೃಹ ಲಕ್ಷ್ಮಿ ಯೋಜನೆಯ ಚಾಲನೆಗೆ ಮುಹೂರ್ತ ಲಭಿಸಿದೆ. ರಾಜ್ಯದಲ್ಲಿ 1.10 ಕೋಟಿ ಗೃಹಿಣಿಯರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದವರು ಹಣ ತಮ್ಮ ಖಾತೆಗೆ ಜಮಾ ಆಗುವುದನ್ನು ಕಾಯುತ್ತಿದ್ದರು. ಇದೀಗ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗುವ ಬಗ್ಗೆ ಬಿಗ್ ಅಪ್ಡೇಟ್ ಲಭಿಸಿದೆ.

Gruha Lakshmi scheme launch updates
Image Credit: Thehindu

ಅರ್ಹ ಮಹಿಳೆಯರ ಖಾತೆಗೆ ನಿನ್ನೆ 2000 ರೂ ಜಮಾ
ಪ್ರಸ್ತುತ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಲೋಕಾರ್ಪಣೆಗೊಂಡಿದೆ. ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆ ಬಹಳ ಅದ್ದೂರಿಯಾಗಿ ಚಾಲನೆಗೊಂಡಿದೆ. ಖಾತೆಗೆ ಲಕ್ಷ್ಮಿಯ ಬರುವಿಕೆಗೆ ಕಾಯುತ್ತಿದ್ದ ಕೋಟ್ಯಾಂತರ ಮಹಿಳೆಯರು ಕನಸು ನಿನ್ನೆ ನೆರವೇರಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಯೋಜನೆಗೆ ಚಾಲನೆ ನೀಡಲಾಗಿದೆ. ಇನ್ನು ಆಗಸ್ಟ್ 30 ರಂದು ರಾಜ್ಯದ ಅರ್ಹ ಗೃಹಿಣಿಯರ ಖಾತೆಗೆ 2000 ರೂ. ಜಮಾ ಮಾಡಲಾಗಿದೆ.

ಇಂತವಹ ಖಾತೆಗೆ ಮಾತ್ರ ಹಣ ಜಮಾ
ಅರ್ಜಿ ಸಲ್ಲಿಸಿದವರ ಖಾತೆಗೆ ಸರ್ಕಾರ್ ಹಣ ಜಮಾ ಮಾಡಿದೆ. ಆಗಸ್ಟ್ 15 ರೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಈ ತಿಂಗಳ 2000 ರೂ. ಜಮಾ ಆಗಿದೆ. ಆಗಸ್ಟ್ 15 ರ ನಂತರ ಅರ್ಜಿ ಸಲ್ಲಿಸಿದವರಿಗೆ ಮುಂದಿನ ತಿಂಗಳಿಂದ ಮಾಸಿಕ 2000 ರೂ ಜಮಾ ಆಗಲಿದೆ. ಇನ್ನು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದರು ಕೊಡ ಕೆಲ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ. ಹಣ ಜಮಾ ಆಗಿದೆಯಾ ಇಲ್ಲವ ಎಂದು ಮಹಿಳೆಯರು ಚಿಂತಿಸುವಂತಾಗಿದೆ. ಇನ್ನು ಸರ್ಕಾರದಿಂದ ಈ ರೀತಿಯ ಸಂದೇಶ ಬಂದಿದ್ದರೆ ಮಾತ್ರ ನಿಮ್ಮ ಖಾತೆಗೆ 2000 ರೂ. ಜಮಾ ಆಗುತ್ತದೆ.

Gruha Lakshmi 2000 Credit Message
Image Credit: Thequint

ಮೊಬೈಲ್ ಗೆ ಈ ಮೆಸೇಜ್ ಬಂದ್ರೆ ಮಾತ್ರ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ
ಗೃಹ ಲಕ್ಷ್ಮಿ ಯೋಜನೆಗೆ ಆಯ್ಕೆಯಾದವರಿಗೆ ಮಾತ್ರಾ ಹಣ ಜಮಾ ಆಗಿದೆ. ಯೋಜನೆಗೆ ಆಯ್ಕೆ ಆದವರಿಗೆ ಸರ್ಕಾರ ಸಂದೇಶವನ್ನು ಕಳುಹಿಸಿದೆ. ‘ಅಭಿನಂದನಗಳು, ನಿಮ್ಮ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ GL -XXXX ಅನ್ನು ಅನುಮೋದಿಸಲಾಗಿದೆ. ಆಗಸ್ಟ್ 2023 ರಿಂದ ರೂ. 2000 ಮೊತ್ತವನ್ನು ನೋಂದಾಯಿಸಿಕೊಂಡಿದ್ದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಧನ್ಯವಾದಗಳು- ನಿಮ್ಮ ಕರ್ನಾಟಕ ಸರ್ಕಾರ’ ಎಂದು ಸಂದೇಶ ಬಂದರೆ ಮಾತ್ರ ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ.

Join Nadunudi News WhatsApp Group

Join Nadunudi News WhatsApp Group