Gruha Lakshmi New: ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಇನ್ನುಮುಂದೆ ಈ ಖಾತೆಗೆ ಜಮಾ ಆಗಲಿದೆ 2000 ರೂಪಾಯಿ.
ಈ ಹೊಸ ಮಾರ್ಗದ ಮೂಲಕ ಸರ್ಕಾರ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಿದೆ.
Gruha Lakshmi 2000 Credit To Post Office Account: ಸದ್ಯ ರಾಜ್ಯದ ಗೃಹಿಣಿಯರಿಗೆ Gruha Lakshmi ಯೋಜನೆಯ ಹಣ ಜಮಾ ಆಗದೆ ಇರುವುದು ಚಿಂತೆಯಾಗಿದೆ. August ನಲ್ಲಿ ಅನುಷ್ಠಾನಗೊಂಡ Gruha Lakshmi ಯೋಜನೆ ಇನ್ನು ಕೂಡ ಸಂಪೂಣವಾಗಿ ಅನುಷ್ಠಾನಗೊಂಡಿಲ್ಲ. ಇದರಿಂದಾಗಿ ಸರಕಾರ ಗೃಹ ಲಕ್ಷ್ಮಿ ಯೋಜನೆಯ ಕುರಿತು ಒಂದೊಂದೇ ಅಪ್ಡೇಟ್ ಅಂಜುವು ನೀಡುತ್ತಲೇ ಇದೆ. ಅರ್ಹರು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡಿದ್ದರು ಕೂಡ ಯೋಜನೆಯ ಹಣ ಏಕೆ ಜಮಾ ಆಗುತ್ತಿಲ್ಲ ..? ಎನ್ನುವುದೇ ರಾಜ್ಯದ ಗೃಹಿಣಿಯರ ಸದ್ಯದ ಪ್ರಶ್ನೆಯಾಗಿದೆ.
ಗೃಹ ಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗದೆ ಇರುವ ಮಹಿಳೆಯರು ಸರ್ಕಾರಕ್ಕೆ ಮೇಲಿಂದ ಮೇಲೆ ಪ್ರಶ್ನೆ ಹಾಕುತ್ತಲೇ ಇದ್ದಾರೆ. ಈಗಾಗಲೇ ರಾಜ್ಯದಲ್ಲಿ 70 % ಮಹಿಳೆಯರಿಗೆ ಯೋಜನೆಯ ಹಣ ಜಮಾ ಆಗಿದ್ದರು, ಇನ್ನೂ 30 % ಮಹಿಳೆಯರಿಗೆ ಹಣ ಜಮಾ ಆಗುವುದು ಬಾಕಿ ಇದೆ. ಸದ್ಯ ಯೋಜನೆಯಿಂದ ಅರ್ಹರು ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಸರಕಾ ಪದೇ ಪದೇ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡುತ್ತಿದೆ. ಇದೀಗ ಮತ್ತೆ November 1 ರಿಂದ ಪಡಿತರ ಚೀಟಿ ತಿದ್ದುಪಡಿಗೆ ಸರಕಾರ ಅವಕಾಶ ಕೊಟ್ಟಿದೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ
ಇದೀಗ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗದೆ ಇರುವ ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ಯೋಜನೆಯಲ್ಲಿ ದೊಡ್ಡ ಬದಲಾವಣೆ ತರುವ ಮೂಲಕ ಅರ್ಹರ ಖಾತೆಗೆ ಹಣ ಜಮಾ ಮಾಡುವಂತೆ ಮಾಡಲು ಸರ್ಕಾರ ಮುಂದಾಗಿದೆ.
ನಿಮಗೆ ಇನ್ನು ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ ಎಂದಾದರೆ ಇನ್ನುಮುಂದೆ ಚಿಂತಿಸುವ ಅಗತ್ಯ ಇಲ್ಲ. ಸರ್ಕಾರ ಈಗ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದಕ್ಕೆ ಪರ್ಯಾಯ ಮಾರ್ಗವನ್ನು ಕಂಡು ಹಿಡಿದಿದೆ. ಈ ಹೊಸ ಮಾರ್ಗದ ಮೂಲಕ ಸರ್ಕಾರ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಿದೆ.
ಇನ್ನುಮುಂದೆ ಈ ಖಾತೆಗೆ ಜಮಾ ಆಗಲಿದೆ 2000 ರೂಪಾಯಿ
ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇದೀಗ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗದೆ ಇರುವ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಗೃಹ ಲಕ್ಷ್ಮಿ ಹಣ ಜಮಾ ಮಾಡುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಹಣವನ್ನು ನೇರವಾಗಿ ಅಂಚೆ ಖಾತೆಗೆ ಜಮಾ ಮಾಡಲಾಗುತ್ತದೆ.