Gruha Lakshmi 23rd Installment: ಗೃಹಲಕ್ಷ್ಮಿ ಯೋಜನೆ ಇದು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದ ಒಂದು ಮಹತ್ವಪೂರ್ಣ ಯೋಜನೆಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಹಿಳೆಯರು ತಿಂಗಳಿಗೆ 2000 ರೂ. ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೆಲವು ತಾಂತ್ರಿಕ ದೋಷದ ಕಾರಣ ಕೆಲವು ತಿಂಗಳ ಹಣ ಬಾಕಿ ಉಳಿದುಕೊಂಡಿದೆ. ಇದೀಗ ನಾವು 23ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತದೆ ಅನ್ನುವ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಗೃಹಲಕ್ಷ್ಮಿ ಯೋಜನೆಯ ಹಿನ್ನಲೆ
ಈ ಗೃಹಲಕ್ಷ್ಮಿ ಯೋಜನೆಯನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ 2023 ರ ಆಗಸ್ಟ್ ನಲ್ಲಿ ಜಾರಿಗೆ ತಂದಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಘೋಷಣೆ ಮಡಿದ 5 ಯೋಜನೆಯಲ್ಲಿ ಈ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಇದರ ಮುಖ್ಯ ಗುರಿ ಮಹಿಳೆಯರ ಸಬಲೀಕರಣ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ತಾಂತ್ರಿಕ ದೋಷದ ಕಾರಣ ಕೆಲವು ಕಂತಿನ ಹಣ ಹಲವು ಮಹಿಳೆಯರ ಖಾತೆಗೆ ಜಮಾ ಆಗಿಲ್ಲ.
23ನೇ ಕಂತಿನ ಹಣ ಯಾವಾಗ ಬಿಡುಗಡೆ?
ಗೃಹಲಕ್ಷ್ಮಿ 22ನೇ ಕಂತಿನ ಹಣವನ್ನು ಅಕ್ಟೋಬರ್ 20 2025 ರಂದು ಬಿಡುಗಡೆ ಮಾಡಿತ್ತು. ಆದರೆ ಇನ್ನು ಕೂಡ 23ನೇ ಕಂತಿನ ಹಣ ಬಿಡುಗಡೆ ಆಗಿಲ್ಲ. ನವೆಂಬರ್ 25 ರ ನಂತರ ಬಿಡುಗಡೆ ಆಗಬಹುದು ಎಂದು ಸರ್ಕಾರೀ ಮೂಲಗಳಿಂದ ತಿಳಿದುಬಂದಿದೆ. 23ನೇ ಕಂತಿನ ಹಣ DBT ಮೂಲಕ ಜಮಾ ಅಗಲಿದ್ದು, ಆಧಾರ್ ಲಿಂಕ್ ಆದ ಖಾತೆಗಳಿಗೆ ಮಾತ್ರ ಬರಲಿದೆ.
ಯಾರು ಈ ಯೋಜನೆಯ ಲಾಭ ಪಡೆಯಬಹುದು..?
* ಕರ್ನಾಟಕದ ಶಾಶ್ವತ ನಿವಾಸಿ ಆಗಿರಬೇಕು
* ಕುಟುಂಬದ ಮುಖ್ಯಸ್ಥೆ ಮಹಿಳೆ ಆಗಿರಬೇಕು
* ಆದಾಯದ ಮಿತಿ 2.5 ಲಕ್ಷಕ್ಕಿಂತ ಕಡಿಮೆ ಆಗಿರಬೇಕು
* ಸರ್ಕಾರೀ ಹುದ್ದೆಯಲ್ಲಿರುವವರು ಹಾಗೆ ಇನ್ಕಮ್ ಟ್ಯಾಕ್ಸ್ ಪಾವತಿ ಮಾಡುವವರು ಈ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯವಿಲ್ಲ.
ಹೊಸ ಅರ್ಜಿದಾರರಿಗೆ ನೋಂದಣಿ ಆರಂಭ
ಇನ್ನು ಕೂಡ ಹೊಸ ಅರ್ಜಿ ದಾರರಿದ್ದಾರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸೇವಾ ಸಿಂಧು ಪೋರ್ಟಲ್ (https://sevasindhu.karnataka.gov.in/Sevasindhu/Kannada?ReturnUrl=%2F) ಅಥವಾ ಗ್ರಾಂ ಒನ್ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿದೆ,
– ಆಧಾರ್ ಕಾರ್ಡ್
– ಬ್ಯಾಂಕ್ ಪಾಸ್ ಬುಕ್
– ಆದಾಯ ಪ್ರಮಾಣ ಪತ್ರ
– ವಿಳಾಸ ಪುರಾವೆ
– ರೇಷನ್ ಕಾರ್ಡ್
ಹೊಸ ನಿಯಮದ ಪ್ರಕಾರ, ekyc ಕಡ್ಡಾಯವಾಗಿದೆ, ಇದು ಹಣವನ್ನು ಪಡೆದುಕೊಳ್ಳಲು ಸುಲಭವಾಗುತ್ತದೆ. ಸಮಸ್ಯೆಗಳಿದ್ದರೆ ಹೆಲ್ಪ್ ಲೈನ್ ನಂಬರ್ 1902 ಅಥವಾ 080-43702727 ಗೆ ಕರೆ ಮಾಡಿ. ನಿಮಗೆ 23ನೇ ಕಾಂತಿಮ ಹಣ ಬರುತ್ತದೆಯೇ..? ಇಲ್ಲವೇ..? ಎಂದು ತಿಳಿಯಲು ಕರ್ನಾಟಕ DBT ಆಪ್ಡೌನ್ಲೋಡ್ ಮಾಡಿಕೊಂಡು ಮೊಬೈಲ್ ನಂಬರ್ ಹಾಕಿ ಲಾಗಿನ್ ಮಾಡಿ ಒಟಿಪಿ ನಮೂದಿಸಿ, ಸ್ಟೇಟಸ್ DBT Pushed ಎಂದು ತೋರಿಸಿದರೆ ನಿಮಗೆ ಸ್ವಲ್ಪ ದಿನದಲ್ಲೇ ಹಣ ಜಮಾ ಆಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

