Gruha Lakshmi Installment: ಗೃಹಲಕ್ಷ್ಮಿ ಯೋಜನೆಯ 3 ನೇ ಕಂತಿನ ಹಣ ಬಿಡುಗಡೆ, ಈ ಮಹಿಳೆಯರ ಖಾತೆಗೆ ಮೊದಲು ಜಮಾ.

ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಮೊದಲು ಈ ಮಹಿಳೆಯರ ಖಾತೆಗೆ ಜಮಾ.

Gruha Lakshmi 3rd Installment Amount Credit: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ Gruha Lakshmi ಯೋಜನೆ ಜಾರಿಗೆ ಬಂದು 3 ತಿಂಗಳು ಕಳೆದಿದೆ. ಅರ್ಹ ಮಹಿಳೆಯರ ಖಾತೆಗೆ ಈಗಾಗಲೇ 2 ತಿಂಗಳ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ.

ಅದರೆ ಕೆಲವೊಂದು ಮಹಿಳೆಯರ ಬ್ಯಾಂಕ್ ಖಾತೆ ನಿಷ್ಕ್ರಿಯ ಗೊಂಡಿರುವುದರಿಂದ ಖಾತೆಗೆ ಹಣ ಕೂಡ ಜಮೆ ಯಾಗಿಲ್ಲ. ಇದೀಗ 3 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿ ಫಲಾನುಭವಿ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

Gruha Lakshmi 3rd Installment
Image Credit: Hosa Kannada

ಗೃಹಲಕ್ಷ್ಮಿ ಯೋಜನೆಯ 3 ನೇ ಕಂತಿನ ಹಣ ಬಿಡುಗಡೆ
ಹೌದು Gruha Lakshmi ಯೋಜನೆಯ ಹಣವನ್ನು ಅರ್ಹ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು 15 ರಿಂದ 20ನೇ ತಾರೀಕಿನ ಜಮಾ ಮಾಡಲಾಗುತ್ತದೆ. ಈಗಾಗಲೇ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಕಳೆದ 2 ಕಂತಿನ ಹಣ ಪಡೆಯದ ಮಹಿಳೆಯರಿಗೆ ಒಟ್ಟು 6000 ಜಮಾ ಆಗಲಿದೆ.

ಈ ಮಹಿಳೆಯರ ಖಾತೆಗೆ ಮೊದಲು ಹಣ ಜಮಾ
ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಮೊದಲು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೊಪ್ಪಳ, ಕೊಡಗುಚಾಮರಾಜನಗರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೋಲಾರ, ಬೀದರ್ ನಲ್ಲಿರುವ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ. ನಂತರ ಉಳಿದ ಜಿಲ್ಲೆಗಳ ಮಹಿಳೆಯರಿಗೆ ಹಣವನ್ನ ಜಮಾ ಮಾಡಲಾಗುತ್ತದೆ.

Gruha Lakshmi 3rd Installment Amount Credit
Image Credit: Pinterest

ಇಲ್ಲಿ ಖಾತೆ ತೆರೆದರೆ ಆದಷ್ಟು ಬೇಗ ಹಣ ಜಮಾ ಆಗಲಿದೆ
ರಾಜ್ಯದಲ್ಲಿ ಸುಮಾರು 33 IPPB (India Post Payments Bank ) ಶಾಖೆಗಳಿವೆ. ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆದರೆ ಆದಷ್ಟು ಬೇಗ ಹಣ ಜಮಾ ಆಗುತ್ತದೆ. ಈಗಾಗಲೇ ಖಾತೆ ತೆರೆದ ಕೆಲವೇ ಗಂಟೆಗಳಲ್ಲಿ ಹಲವು ಮಹಿಳೆಯರಿಗೆ ಜಮಾ ಆಗಿದೆಯಂತೆ. ಹಾಗಾಗಿ ಮಹಿಳೆಯರು ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚನೆ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group