Gruha Lakshmi: ಗೃಹ ಲಕ್ಷ್ಮಿ ಫಲಾನುಭವಿಗಳಿಗೆ ಹೊಸ ರೂಲ್ಸ್, 5 ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ.
ಗೃಹ ಲಕ್ಷ್ಮಿ ಫಲಾನುಭವಿಗಳು 5 ನೇ ಕಂತಿನ ಹಣ ಪಡೆಯಬೇಕಿದ್ದರೆ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.
Gruha Lakshmi 5th Installment Money: ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ Gruha Lakshmi ಯೋಜನೆಯನ್ನು ಪರಿಚಯಿಸಿ, ಈ ಯೋಜನೆಯಡಿ ಮಾಸಿಕ 2000 ರೂಪಾಯಿ ಹಣವನ್ನು ಅರ್ಹ ಮಹಿಳೆಯರ ಖಾತೆಗೆ ಜಮಾ ಮಾಡುತ್ತಿದೆ. ಆಗಸ್ಟ್ ನಲ್ಲಿ ಅನುಷ್ಠಾನಗೊಂಡ ಗೃಹ ಲಕ್ಷ್ಮಿ ಯೋಜನೆಯು ಈಗಾಗಲೇ ನಾಲ್ಕು ಕಂತುಗಳು ಯಶಸ್ವಿಯಾಗಿ ಅರ್ಹ ಫಲಾನುಭವಿಗಳ ಖಾತೆಗೆ ತಲುಪಿದೆ. ಆದರೆ ಯೋಜನೆಗೆ ಅರ್ಜಿ ಸಲ್ಲಿಸಿದ ಸಂಪೂರ್ಣ ಅರ್ಹರಿಗೆ ತಾಂತ್ರಿಕ ದೋಷದ ಕಾರಣ ಹಣ ತಲುಪುತ್ತಿಲ್ಲ.
ಗೃಹ ಲಕ್ಷ್ಮಿ ಫಲಾನುಭವಿಗಳಿಗೆ ಹೊಸ ರೂಲ್ಸ್
ಈ ತಿಂಗಳ ಅಂತ್ಯದೊಳಗೆ ಗೃಹ ಯೋಜನೆಯನ್ನು ಸಂಪೂರ್ಣ 100 % ಯಶಸ್ವಿಯಾಗಿಸಲು ಸರ್ಕಾರ ವಿವಿಧ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಅರ್ಹ ಫಲಾನುಭವಿಗಳು ನಾಲ್ಕು ಕಂತುಗಳ ಹಣ ಒಟ್ಟಾಗಿ 8000 ರೂಪಾಯಿ ಮೊತ್ತ ಜಮಾ ಆಗಿದೆ.
ಸದ್ಯ ಇನ್ನೇನು ಕೆಲವೇ ದಿನಗಳಲ್ಲಿ ಗೃಹ ಲಕ್ಷ್ಮಿ 5 ನೇ ಕಂತಿನ ಹಣ ಕೂಡ ಬಿಡುಗಡೆಯಾಗಲಿದೆ. ಆದರೆ ಸರ್ಕಾರ 5 ನೇ ಕಂತಿನ ಹಣ ಬಿಡುಗಡೆಗೂ ಮುನ್ನ ಗೃಹ ಲಕ್ಷ್ಮಿ ಅರ್ಹ ಫಲಾನುಭವಿಗಳಿಗೆ ಮಹತ್ವದ ಆದೇಶವನ್ನು ಹೊರಡಿಸಿದೆ. ಗೃಹ ಲಕ್ಷ್ಮಿ ಫಲಾನುಭವಿಗಳು 5 ನೇ ಕಂತಿನ ಹಣ ಪಡೆಯಬೇಕಿದ್ದರೆ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.
ಗೃಹ ಲಕ್ಷ್ಮಿ 5 ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ
ಪ್ರಸ್ತುತ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ 5 ನೇ ಕಂತಿನ ಹಣ ಬಿಡುಗಡೆಗೂ ಮುನ್ನ ಹೊಸ ನಿಯಮವನ್ನು ಪರಿಚಯಿಸಿದೆ. ಗೃಹ ಲಕ್ಷ್ಮಿ ಯೋಜನೆಯ ನೋಂದಣಿ ಮಾಡಿಕೊಂಡಿರುವ ಮಹಿಳೆಯರು ತಮ ಖಾತೆಗೆ E – KYC ಮಾಡಿಸುವುದು ಕಡ್ಡಾಯವಾಗಿದೆ.
ಗೃಹ ಲಕ್ಷ್ಮಿ 5 ನೇ ಕಂತಿನ ಹಣ ಪಡೆಯಬೇಕಿದ್ದರೆ ರೇಷನ್ ಕಾರ್ಡ್ ನಲ್ಲಿ ಇರುವ ಪ್ರತಿಯೊಬ್ಬ ಸದಸ್ಯರು ಕೂಡ E -KYC ಮಾಡಿಸಬೇಕಿದೆ. ಇನ್ನು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಬ್ಯಾಂಕ್ ಖಾತೆಯ E -KYC ಅಪ್ಡೇಟ್ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.