Gruha Lakshmi: ಈ ದಿನದಂದು ಗೃಹಲಕ್ಷ್ಮಿ ಯೋಜನೆಯ 7 ಕಂತಿನ 2000 ರೂಪಾಯಿ ಜಮಾ, ಬಿಗ್ ಅಪ್ಡೇಟ್

ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ₹2,000 ಹಣ ಯಾವಾಗ? ಇಲ್ಲಿದೆ ಮಾಹಿತಿ

Gruha Lakshmi 7th Installment Money Credit Date: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಜನತೆಗೆ 5 ಗ್ಯಾರಂಟಿ ಯೋಜನೆಯನ್ನ ಘೋಷಣೆ ಮಾಡಿತ್ತು. ಕೊಟ್ಟ ಮಾತಿನಂತೆ 5 ಗ್ಯಾರಂಟಿ ಯೋಜನೆಯನ್ನು ವರ್ಷದೊಳಗೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ.

ಇದೀಗ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ Gruha Lakshmi ಯೋಜನೆ ಜಾರಿಗೆ ಬಂದು 5-6 ತಿಂಗಳು ಕಳೆದಿದೆ. ಗೃಹ ಲಕ್ಷ್ಮಿ ಯೋಜನೆ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಈ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಹಲವು ಮಾರ್ಗವನ್ನ ಜಾರಿಗೆ ತಂದಿದೆ.

ಪ್ರತಿ ತಿಂಗಳ 20 ನೇ ತಾರೀಕಿನೊಳಗೆ ರಾಜ್ಯ ಸರ್ಕಾರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುತ್ತಿದ್ದು, ಸದ್ಯ ಯಜಮಾನಿಯರು 7 ನೇ ಕಂತಿನ ಹಣ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇದೀಗ ನಾವು ಗೃಹ ಲಕ್ಷ್ಮಿ 7 ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Gruha Lakshmi 7th Installment Money
Image Credit: Karnataka Times

ಈ ದಿನದಂದು ನಿಮ್ಮ ಖಾತೆಗೆ 7 ನೇ ಕಂತಿನ ಹಣ ಜಮಾ
ಈಗಾಗಲೇ ರಾಜ್ಯದ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಯಡಿ 12,000 ರೂಪಾಯಿಯನ್ನ ಪಡೆದುಕೊಂಡಿದ್ದಾರೆ. ಇನ್ನು 7 ನೇ ಕಂತಿನ ಹಣ ಮಾರ್ಚ್ 2-3 ನೇ ವಾರದಲ್ಲಿ ಜಮಾ ಮಾಡಲಾಗುತ್ತದೆ. ಎಲ್ಲ ಮಹಿಳೆಯರ ಖಾತೆಗೆ ಒಂದೇ ದಿನ ಹಣ ಜಮಾ ಮಾಡಲು ಸಾಧ್ಯವಿಲ್ಲ ಹೀಗಾಗಿ ಮಾರ್ಚ್ ಕೊನೆ ದಿನಾಂಕದೊಳಗೆ ಜಮಾ ಮಾಡುವುದಾಗಿ ಮಾಹಿತಿ ತಿಳಿದು ಬಂದಿದೆ. ಒಂದು ವೇಳೆ ಹಣ ಜಮೆ ಆಗದಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ.

Gruha Lakshmi 7th Installment Money Credit Date
Image Credit: Kannada News Today

ಬಾಕಿ ಇರುವ ಹಣವನ್ನು ಕೂಡ ಜಮಾ ಮಾಡಲಾಗುತ್ತದೆ
ಮಹಿಳೆಯರ ಖಾತೆಯಲ್ಲಿರುವ ಸಮಸ್ಯೆ ಪರಿಹಾರ ಆದರೆ ಅವರ ಖಾತೆಗೆ ಪೆಂಡಿಂಗ್ ಇರುವ ಹಣವನ್ನ ಜಮಾ ಮಾಡಲಾಗುತ್ತದೆ. ಗೃಹ ಲಕ್ಷ್ಮಿ ಹಣವನ್ನು ಮಹಿಳೆಯರ ಖಾತೆಗೆ ಹಾಕುವ ಪ್ರಕ್ರಿಯೆ ಆಟೋ ಮ್ಯಾಟಿಕ್ ಆಗಿದ್ದು, ನಿಮ್ಮ ಅಕೌಂಟ್ ಸರ್ಕಾರದ ಡಾಟಾದಲ್ಲಿ ಕನೆಕ್ಟ್ ಆಗಿದ್ದರೆ ನಿಮ್ಮ ಖಾತೆಗೆ ಹಣ ಬರುವುದು ಮಿಸ್ ಆಗುವುದಿಲ್ಲ. ಇದಕ್ಕಾಗಿ ನೀವು ಖಾತೆಗೆ ಸಂಬಂಧಪಟ್ಟ EKYC, NPCI ಮ್ಯಾಪಿಂಗ್ ಅನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

Join Nadunudi News WhatsApp Group

Join Nadunudi News WhatsApp Group