Gruha Lakshmi: ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುತ್ತಿರುವ ಮಹಿಳೆಯರಿಗೆ ದೀಪಾವಳಿ ಗಿಫ್ಟ್, ಸರ್ಕಾರದ ಇನ್ನೊಂದು ಘೋಷಣೆ.
ಗೃಹ ಲಕ್ಷ್ಮಿ ಹಣದ ವಿಷಯವಾಗಿ ಸರ್ಕಾರದ ಇನ್ನೊಂದು ಘೋಷಣೆ.
Gruha Lakshmi Amount Credit Date: ಸದ್ಯ ರಾಜ್ಯದಲ್ಲಿ Gruha Lakshmi ಯೋಜನೆಯ ಕುರಿತಾಗಿ ಬರಿ ಗೊಂದಲ ಸೃಷ್ಟಿಯಾಗುತ್ತಿದೆ ಎನ್ನಬಹುದು. ಯೋಜನೆ ಅನುಷ್ಠಾನಗೊಂಡು ಮೂರು ತಿಂಗಳು ಕಳೆದರು ಕೂಡ ಗೃಹ ಲಕ್ಷ್ಮಿ ಯೋಜನೆ ಇನ್ನು ಕೂಡಾ ಸಂಪೂರಣಗೊಂಡಿಲ್ಲ. ಗೃಹ ಲಕ್ಷ್ಮಿ ಯೋಜನೆ ಸರ್ಕಾರ ಒಂದು ರೀತಿಯಲ್ಲಿ ದೊಡ್ಡ ಸಮಸ್ಯೆಯನ್ನು ನೀಡುತ್ತಿದೆ ಎನ್ನಬಹುದು.
ದಾಖಲೆಗಳನ್ನು ಸರಿಪಡಿಸಿಕೊಂಡರು ಯೋಜನೆ ಹಣ ಜಮಾ ಆಗದೆ ಇರುವುದ್ಕಕೆ ರಾಜ್ಯದ ಮಹಿಳೆಯರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ 7.9 ಲಕ್ಷ ಅರ್ಹ ಮಹಿಳೆಯರ ಖಾತೆಗೆ ಇನ್ನು ಕೂಡ ಗೃಹ ಲಕ್ಷ್ಮಿ ಯೋಜನೆಯಾ ಹಣ ಜಮಾ ಆಗಿಲ್ಲ. ಸದ್ಯ ಸಚಿವೆ Lakshmi Hebbalkar ಗೃಹ ಲಕ್ಷ್ಮಿ ಹಣ ಜಮಾ ಆಗುವ ಬಗ್ಗೆ ಮಹಿಳೆಯರಿಗೆ ಭರವಸೆ ನೀಡಿದ್ದಾರೆ.
15 ದಿನದೊಳಗೆ ಖಾತೆಗೆ ಜಮಾ ಆಗಲಿದೆ ಗೃಹ ಲಕ್ಷ್ಮಿ ಹಣ
ಸರ್ಕಾರ ಈ ತಿಂಗಳು 1.10 ಕೋಟಿ ಜನರಿಗೆ ಹಣವನ್ನು ಬಿಡುಗಡೆ ಮಾಡಿದೆ. ಕೆವೈಸಿ ವಿವರ ಮತ್ತು ತಾಂತ್ರಿಕ ಸಮಸ್ಯೆಯಿಂದಾಗಿ ಯೋಜನೆಯ ಹಣ ಜಮಾ ಆಗಲು ವಿಳಂಭವಾಗುತ್ತಿದೆ. ಪ್ರತಿ ತಿಂಗಳು 15 ರಿಂದ 20 ದಿನದ ಒಳಗೆ ಅರ್ಹರಿಗೆ ಹಣವನ್ನು ವರ್ಗಯಿಸಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಹಣ ಬಿಡುಗಡೆಯಾದ 25 ದಿನದ ನಂತರ ಖಾತೆಗೆ ಹಣ ಜಮಾ ಆಗುತ್ತಿತ್ತು, ಸದ್ಯ ಹಣ ಜಮಾ ಆಗಲು ಕೇವಲ 6 ದಿನಕ್ಕೆ ಇಳಿಸಲಾಗಿದೆ.
ಅರ್ಜಿದಾರರ ದಾಖಲೆಯ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಿ ಇನ್ನು 15 ದಿನದೊಳಗೆ ಹಣ ಜಮಾ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ. ಅರ್ಹ ಫಲಾನುಭವಿಗಳು ಇನ್ನು 15 ದಿನ ತಮ್ಮ ಖಾತೆಗೆ ಲಕ್ಷ್ಮಿ ಆಗಮನವಾಗಲು ಕಾಯಬೇಕಿದೆ. ಇನ್ನು 15 ದಿನದ ಬಳಿಕವಾದರೂ ಹಣ ಖಾತೆಗೆ ಜಮಾ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಮಹಿಳೆಯರು ಕಾಯುವಂತಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದಂತೆ ಗೃಹ ಲಕ್ಷ್ಮಿ ಹಣ 15 ದಿನದೊಳಗೆ ಖಾತೆಗೆ ಜಮಾ ಆಗುತ್ತದಾ..? ಇಲ್ಲವಾ..? ಎನ್ನುವುದಕ್ಕೂ ಕಾದು ನೋಡಬೇಕಿದೆ.
ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವುದು ಅಗತ್ಯ
ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗದೆ ಇರುವ ಮಹಿಳೆಯರಿಗೆ ಪರ್ಯಾಯ ಮಾರ್ಗವನ್ನು ಕಂಡುಹಿಡಿದಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಹಣವನ್ನು ನೇರವಾಗಿ ಅಂಚೆ ಖಾತೆಗೆ ಜಮಾ ಮಾಡಲಾಗುತ್ತದೆ. ಹೀಗಾಗಿ ರಾಜ್ಯದ ಮಹಿಳೆಯರು ಅಂಚೆ ಇಲಾಖೆಯಲ್ಲಿ ಖಾತೆ ತೆರೆಯುವಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯದ ಗೃಹಿಣಿಯರಿಗೆ ಮಾಹಿತಿ ನೀಡಿದ್ದಾರೆ.