Gruha Lakshmi: ಗೃಹಲಕ್ಷ್ಮಿ ಯೋಜನೆಯ ಹಣ ಗಂಡನ ಖಾತೆಗೆ ಬರುವಂತೆ ಮಾಡುವುದು ಹೇಗೆ…? ಈ ಕೆಲಸ ಮಾಡಿ ಸಾಕು

ಈ ಕೆಲಸ ಮಾಡಿದರೆ ಗೃಹ ಲಕ್ಷ್ಮಿ ಹಣ ನಿಮ್ಮ ಗಂಡನ ಖಾತೆಗೆ ಜಮಾ ಆಗಲಿದೆ

Gruha Lakshmi Amount Credit Update: ಸದ್ಯ ರಾಜ್ಯದಲ್ಲಿ Gruha Lakshmi ಯೋಜನೆ ಅನುಷ್ಠಾನಗೊಂಡರು ಕೂಡ ಬಗೆಹರಿಯದ ಸಮಸ್ಯೆಯಾಗಿ ಉಳಿದಿದೆ. ಹೌದು ಸಾಕಷ್ಟು ಮಹಿಳೆಯರ ಖಾತೆಗೆ ಯೋಜನೆಯ ಹಣ ಜಮಾ ಆಗದ ಕಾರಣ ಮಹಿಳೆಯರು ಸರ್ಕಾರಕ್ಕೆ ಒತ್ತಡವನ್ನ ಹೇರುತ್ತಿದ್ದಾರೆ ಎಂದು ಹೇಳಬಹುದು.

ಯೋಜನೆ ಅನುಷ್ಠಾನಗೊಂಡು ಮೂರ್ನಾಲ್ಕು ತಿಂಗಳಾದರೂ ಕೂಡ ಇನ್ನು ಕೂಡ ಗೃಹ ಯೋಜನೆಯ ಲಾಭ 100% ಅರ್ಹರಿಗೆ ಲಭ್ಯವಾಗುತ್ತಿಲ್ಲ. ಹಣ ಜಮಾ ಮಾಡಲು ತಾಂತ್ರಿಕ ದೋಷಗಳು ಎದುರಾಗುತ್ತಿದ್ದು ಶೀಘ್ರದಲ್ಲೇ ಪರಿಹರಿಸಿ ಹಣ ಜಮಾ ಮಾಡುವುದಾಗಿ ಸರ್ಕಾರ ಭರವಸೆ ನೀಡುತ್ತಿದೆ.

Gruha Lakshmi Amount
Image Credit: Original Source

ಗೃಹ ಲಕ್ಷ್ಮಿ ಹಣ ಖಾತೆಗೆ ಜಮಾ ಆಗುವಲ್ಲಿ ಮಹತ್ವದ ಬದಲಾವಣೆ
ಸರ್ಕಾರ ಯಾವುದೇ ರೀತಿಯಾ ಭರವಸೆಯ ಹೇಳಿಕೆಯನ್ನು ನೀಡಿತ್ತಿದ್ದರು ಕೂಡ ಯೋಜನೆಯ ಲಾಭ ಅರ್ಹರ ಖಾತೆಗೆ ತಲುಪುತ್ತಿಲ್ಲ. ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆ ನಡೆಸಿದ ಪ್ರತಿ ಬಾರಿ ಗೃಹ ಲಕ್ಷ್ಮಿ ಹಣ ಜಮಾ ಆಗುವ ಬಗ್ಗೆ ಚರ್ಚಿಸುತ್ತದೆ. ಸಭೆ ಮುಗಿದ ಬಳಿಕ ಸಚಿವರು ಅರ್ಹರಿಗೆ ಹಣ ಜಮಾ ಆಗುವ ಆಶ್ವಾಸನೆ ನೀಡುತ್ತಾ ಬಂದಿದ್ದಾರೆ. ಇನ್ನು ಗೃಹ ಲಕ್ಷ್ಮಿ ಹಣ ಅರ್ಜಿದಾರರ ಬದಲಾಗಿ ಇವರ ಖಾತೆಗೆ ಜಮಾ ಮಾಡುವುದಾಗಿ ಸರ್ಕಾರ ಮಾಹಿತಿ ನೀಡಿದೆ. ಈಗಲಾದರೂ ಖಾತೆಗೆ ಹಣ ಜಮಾ ಆಗುತ್ತದಾ ಅಥವಾ ಇಲ್ಲವ ಎನ್ನುದನ್ನು ನೋಡಬೇಕಿದೆ.

ಗೃಹ ಲಕ್ಷ್ಮಿ ಹಣ ಅರ್ಜಿದಾರರ ಗಂಡನ ಖಾತೆಗೆ ಜಮಾ
ಇದೀಗ ರಾಜ್ಯ ಸರ್ಕಾರ ಮಹಿಳೆಯರ ಖಾತೆಗೆ ಹಣ ಜಮಾ ಮಾಡುವಲ್ಲಿ ಮಹತ್ವದ ಬದಲಾವಣೆಯನ್ನು ತರಲು ನಿರ್ಧರಿಸಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಯ ಬದಲು ಮನೆ ಯಜಮಾನ ಅಂದರೆ ಅರ್ಜಿದಾರರ ಗಂಡ ಖಾತೆಗೆ ಹಣ ಜಮಾ ಆಗಲಿದೆ. ಮನೆಯ ಯಜಮಾನಿಯ ಖಾತೆಯಲ್ಲಿ ಸಮಸ್ಯೆ ಇದ್ದರೆ ಮನೆಯ ಎರಡನೇ ಸದಸ್ಯರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ರೇಷನ್ ಕಾರ್ಡ್ ಆಧಾರದ ಮೇಲೆ ಮನೆಯ ಎರಡನೇ ಹಿರಿಯ ಸದಸ್ಯ ಯಾರೆಂದು ಗುರುತಿಸಿ ಯೋಜನೆಯ ಹಣ ಜಮಾ ಮಾಡಲಾಗುತ್ತದೆ.

Gruha Lakshmi Amount Credit Update
Image Credit: Live Mint

ಗೃಹಲಕ್ಷ್ಮಿ ಯೋಜನೆಯ ಹಣ ಗಂಡನ ಖಾತೆಗೆ ಬರುವಂತೆ ಮಾಡುವುದು ಹೇಗೆ…?
ಎರಡನೇ ಮುಖ್ಯ ಸದಸ್ಯ ಗಂಡ ಆಗಿರುವುದರಿಂದ ಗೃಹ ಲಕ್ಷ್ಮಿ ಯೋಜನೆಯ ಹಣ ನೇರವಾಗಿ ಅರ್ಜಿದಾರರ ಗಂಡನ ಖಾತೆಗೆ ಜಮಾ ಆಗಲಿದೆ. ಇನ್ನು ಗೃಹ ಲಕ್ಷ್ಮಿ ಯೋಜನೆಯ ಹಣ ಗಂಡನ ಖಾತೆಗೆ ಜಮಾ ಆಗಲು ನೀವು ಮಾಡಬೇಕಿರುವುದು ಇಷ್ಟೇ. ಅರ್ಜಿದಾರರ ಗಂಡನ ಬ್ಯಾಂಕ್ ಆಕೌಂಟ್ ಲಿಂಕ್, ಆಧಾರ್ E -KYC ಕಡ್ಡಾಯವಾಗಿದೆ. ಎಲ್ಲ ದಾಖಲೆಗಳು ಸರಿ ಇದ್ದರೆ ಅರ್ಜಿದಾರರ ಗಂಡನ ಖಾತೆಗೆ ಗೃಹ ಲಕ್ಷ್ಮಿ ಹಾಗೂ ಅನ್ನ ಭಾಗ್ಯ ಯೋಜನೆಯ ಹಣ ನೇರವಾಗಿ DBT ಮೂಲಕ ವರ್ಗಾವಣೆ ಆಗಲಿದೆ.

Join Nadunudi News WhatsApp Group

Join Nadunudi News WhatsApp Group