Ads By Google

Anna Bhagya 4th Installment: ಡಿಸೆಂಬರ್ ತಿಂಗಳ ಗೃಹ ಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಹಣ ಜಮಾ, ರೀತಿ ರೀತಿಯಲ್ಲಿ ಚಕ್ ಮಾಡಿಕೊಳ್ಳಿ

Anna Bhagya 4th Installment

Image Source: Times Now

Ads By Google

Gruha Lakshmi And Anna Bhagya 4th Installment Money Will Be Deposited On This Day: ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಪರಿಚಯಿಸಿರುವ Gruha Lakshmi ಯೋಜನೆ ಕುರಿತು ದಿನಕ್ಕೊಂದು ಅಪ್ಡೇಟ್ (Update) ಹೊರಬರುತ್ತಿದೆ. ಸಾಕಷ್ಟು ತಾಂತ್ರಿಕ ಸಮಸ್ಯೆಯನ್ನು ನಿವಾರಿಸಿ ರಾಜ್ಯ ಸರ್ಕಾರ ಶೇ. 80 ರಷ್ಟು ಅರ್ಹ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡುತ್ತಿದೆ.

ಇನ್ನು ಕೇವಲ 20 % ಮಹಿಳೆಯರ ಖಾತೆಗೆ ಡಿಸೇಂಬರ್ ಅಂತ್ಯದೊಳಗೆ ಹಣ ಜಮಾ ಮಾಡಲು ವಿವಿಧ ಕ್ರಮ ಕೈಗೊಳ್ಳುತ್ತಿದೆ. ಸದ್ಯ ಇದೀಗ ರಾಜ್ಯ ಸರ್ಕಾರದಿಂದ Gruha Lakshmi 4th Installment Money ಬಿಡುಗಡೆಯಾಗಿರುವ ಬಗ್ಗೆ ವರದಿಯಾಗಿದೆ. ಈ ದಿನಾಂಕದಂದು ಅರ್ಹ ಮಹಿಳೆಯರ ಖಾತೆಗೆ 4 ನೇ ಕಂತಿನ 2000 ರೂ ಹಣ ಜಮಾ ಆಗಲಿದೆ. ಫಲಾನುಭವಿ ಮಹಿಳೆಯರು ತಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಬೇಕಿದೆ.

Image Credit: Oneindia

ಡಿಸೆಂಬರ್ ತಿಂಗಳ ಗೃಹ ಲಕ್ಷ್ಮಿ ಅನ್ನಭಾಗ್ಯ ಯೋಜನೆಯ ಹಣ ಜಮಾ
ರಾಜ್ಯದಲ್ಲಿ ಗೃಹ ಲಕ್ಷ್ಮಿ ಹಾಗೂ ಅನ್ನ ಭಾಗ್ಯ ಯೋಜನೆಯ ಹಣ ಮಾಸಿಕವಾಗಿ ಅರ್ಹರ ಖಾತೆಗೆ ತಲುಪಬೇಕಿದೆ. ಸದ್ಯ ರಾಜ್ಯ ಸರ್ಕಾರದಿಂದ ಈ ತಿಂಗಳಿನ ಹಣ ಬಿಡುಗಡೆ ಆಗಿದೆ. ಗೃಹ ಲಕ್ಷ್ಮಿ 4 ನೇ ಕಂತಿನ ಹಣ ಕೂಡ ಬಿಡುಗಡೆಯಾಗಿದೆ. ಡಿಸೇಂಬರ್ 15 ರಿಂದ 20 ನೇ ತಾರೀಕಿನೊಳಗೆ Gruha Lakshmi ಹಾಗೂ Anna Bhagya ಯೋಜನೆಗಳ ಹಣ ಖಾತೆಗೆ ಜಮಾ ಆಗಲಿದೆ. ಕೆಲವೊಮ್ಮೆ ನಿಮ್ಮ ಖಾತೆಗೆ ಹಣ ಜಮಾ ಆಗಿದ್ದರು ಕೂಡ ಮೊಬೈಲ್ ಗೆ ಸಂದೇಶ ಬರದೇ ಇರಬಹುದು. ಹೀಗಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಪರಿಶೀಲನೆ ಮಾಡಿಕೊಳ್ಳಬಹುದು.

ಯೋಜನೆಯ ಹಣ ಖಾತೆಗೆ ಜಮಾ ಆಗಿರುವ ಬಗ್ಗೆ ಈ ರೀತಿಯಾಗಿ ಪರಿಶೀಲಿಸಿಕೊಳ್ಳಿ
*ಗ್ಯಾರಂಟಿ ಯೋಜನೆಯ ಹಣ ಖಾತೆಗೆ ಜಮಾ ಆಗಿರುವ ಬಗ್ಗೆ ತಿಳಿಯಲು ನೀವು Play Store ನಲ್ಲಿ DBT Karnataka App ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

*ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ತಕ್ಷಣ ನಿಮಗೆ ಕೆಲವು ಪರ್ಮಿಷನ್ ಅನ್ನು ಕೇಳಲಾಗುತ್ತದೆ. ಎಲ್ಲದಕ್ಕೂ Allow ಕ್ಲಿಕ್ ಮಾಡಿಕೊಳ್ಳಿ.

Image Credit: News Next Live

* ನೀವು ಯಾರ ಖಾತೆ ಸ್ಟೇಟಸ್ ಚೆಕ್ ಮಾಡಲು ಬಯಸುತ್ತೀರೋ ಅವರ ಆಧಾರ್ ಕಾರ್ಡ್ ಸಂಖ್ಯೆ ಮತ್ತು ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

*ನಂತರ ನೋಂದಾಯಿತ ಮೊಬೈಲ್ ಸಂಖ್ಯೆಯೇ OTP ಬರುತ್ತದೆ. ಆ OTP ನಮೂದಿಸಿ.

*ನಂತರ mPIN ಕ್ರಿಕೆಟ್ ಮಾಡಲು ಕೇಳಿದಾಗ ನಾಲ್ಕು ಅಂಕಿಯ ಸೆಕ್ಯೂರಿಟಿ ಕೋಡ್ ಸೆಲೆಕ್ ಮಾಡಿ, ನಮೂದಿಸಿ ಮತ್ತು ಕನ್ಫರ್ಮ್ ಮಾಡಿ.

*ನಿಮ್ಮ ಬಯಸುವ ಫಲಾನುಭವಿಯ ಆಧಾರ್ ವಿವರ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಓಕೆ ಆರಿಸಿ.

*ಇದಾದ ಬಳಿಕ Payment Status ಆಯ್ಕೆಯನ್ನು ಆರಿಸಿದರೆ, ನಿಮಗೆ ಸರ್ಕಾರದ ಯೋಜನೆಗಳಿಂದ ಬಂದ ಹಣದ ಬಗ್ಗೆ ಸಂಪೂರ್ಣಾ ವಿವರ ಕಾಣಿಸುತ್ತದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in