Gruha Lakshmi Apply: ವಾಟ್ಸಾಪ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಇಲ್ಲಿದೆ ಅರ್ಜಿ ಸಲ್ಲಿಸುವ ಸುಲಭ ವಿಧಾನ.
ಇದೀಗ ಮನೆಯಲ್ಲೇ ಕುಳಿತು ವಾಟ್ಸಾಪ್ ಮೂಲಕ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಬಗ್ಗೆ ಒಂದಿಷ್ಟು ಮಾಹಿತಿ.
Gruha Lakshmi Apply By Using WhatsApp: ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ. ಸದ್ಯ ಗೃಹ ಲಕ್ಷ್ಮಿ ಯೋಜನೆಯ ಕುರಿತು ಅಪ್ಡೇಟ್ ಹೊರಬೀಳುತ್ತಿದೆ. ಗೃಹ ಲಕ್ಷ್ಮಿ (Gruha Lakshmi) ಯೋಜನೆಯ ಲಾಭ ಪಡೆಯಲು ರಾಜ್ಯದ ಮಹಿಳೆಯರು ಕಾಯುತ್ತಿದ್ದಾರೆ.
ಮಾಸಿಕ 2000 ಹಣ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದ್ದು ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಯೋಜನೆಯ ಲಾಭ ಪಡೆಯಲು ಈಗಾಗಲೇ ಲಕ್ಷಾಂತರ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 70 ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆ ಪೂರ್ಣಗೊಂಡಿದೆ. ಅರ್ಜಿ ಸಲ್ಲಿಸಿದವರು ಯೋಜನೆಯ ಲಾಭ ಪಡೆಯಲು ಕಾಯುತ್ತಿದ್ದಾರೆ. ಇದೀಗ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಸಹಾಯವಾಗಲು ಸರ್ಕಾರ ಹೊಸ ಸೌಲಭ್ಯವನ್ನು ನೀಡುತ್ತಿದೆ. ಈ ಸುಲಭ ವಿಧಾನದ ಮೂಲಕ ನೀವು ಮನೆಯಲ್ಲಿಯೇ ಅರ್ಜಿ ಸಲ್ಲಿಸಿಕೊಳ್ಳಬಹುದಾಗಿದೆ.
ಈಗ ವಾಟ್ಸಾಪ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಸಾಧ್ಯ
ಇನ್ನು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಅರ್ಜಿ ಸಲ್ಲಿಕೆಗೆ ಸಾಕಷ್ಟು ಬಾರಿ ಸರ್ವರ್ ಸಮಸ್ಯೆ ಎದುರಾಗಿದೆ. ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯು ಸರ್ವರ್ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ಅರ್ಜಿ ಸಲ್ಲಿಕೆಗೆ ವಾಟ್ಸಾಪ್ ಸೌಲಭ್ಯ ನೀಡುವ ಬಗ್ಗೆ ಮಾಹಿತಿ ಲಭಿಸಿದೆ.
ಸಾಮಾನ್ಯವಾಗಿ ಎಲ್ಲರು ವಾಟ್ಸಾಪ್ ಅನ್ನು ಬಳಸೆ ಬಳಸುತ್ತಾರೆ.ಈಗಂತೂ ವಾಟ್ಸಾಪ್ ಹೆಚ್ಚಿನ ಫೀಚರ್ ಅನ್ನು ಗ್ರಾಹಕರಿಗೆ ನೀಡುತ್ತಿದೆ. ಈಗಾಗಲೇ ವಾಟ್ಸಾಪ್ ನಲ್ಲಿ ಮೊಬೈಲ್ ಬ್ಯಾಂಕಿಂಗ್ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಸೇರಿದಂತೆ ಇನ್ನಿತರ ಸೇವೆಗಳು ಲಭ್ಯವಿದೆ. ಇನ್ನುಮುಂದೆ ಕಾಂಗ್ರೆಸ್ ನ ಈ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಕೂಡ ಸಾಧ್ಯವಾಗಲಿದೆ.
ವಾಟ್ಸಾಪ್ ನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ
ಸರ್ಕಾರ ಚಾಟ್ ಬಾಟ್ ಲಿಂಕ್ ಆಗಿರುವ 8147500500 ಸಂಖ್ಯೆಯನ್ನು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ನೀಡಿದೆ.ಈ ವಾಟ್ಸಾಪ್ ಸಂಖ್ಯೆಯ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬಳಕೆದಾರರು ಈ ಸಂಖ್ಯೆಗೆ ತಮ್ಮ ವಿವರವನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಚಾಟ್ ಬಾಟ್ ಈ ಅರ್ಜಿಯನ್ನು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕಚೇರಿಗಳಿಗೆ ಮಾಹಿತಿ ಕಳುಹಿಸುತ್ತದೆ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
ಇನ್ನು ಅರ್ಜಿದಾರರು ತಮ್ಮ ಆಧಾರ್ ಕಾರ್ಡ್ ನ ಜೊತೆಗೆ ತಮ್ಮ ಪಡಿತರ ಚೀಟಿ (ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್) ಅನ್ನು ಒದಗಿಸಬೇಕಾಗುತ್ತದೆ. ಇನ್ನು ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗದಿದ್ದರೆ ಬ್ಯಾಂಕ್ ಪಾಸ್ ಬುಕ್ ಮಾಹಿತಿಯನ್ನು ನೀಡಬೇಕಾಗುತ್ತದೆ. ಈಗಾಗಲೇ ಚಾಟ್ ಬ್ಯಾಟ್ ನ ಮೂಲಕ ಏಳು ಲಕ್ಷಕ್ಕೂ ಅಧಿಕ ಅಪ್ಲಿಕೇಶನ್ ಸಲ್ಲಿಕೆಯಾಗಿವೆ. ನೀವು ಇನ್ನು ಕೂಡ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸದಿದ್ದರೆ ಈ ಕೂಡ ವಾಟ್ಸಾಪ್ ನ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಿರಿ.