Gruha Lakshmi Bank Details: ದೇಶದಲ್ಲಿ ಮಹಿಳೆಯರನ್ನು ಸಬಲೀಕರಣ ಗೊಳಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಹೊಸ ಯೋಜನೆ ಯೊಂದನ್ನು ಜಾರಿಗೆ ತಂದಿದ್ದು, ಇದರಲ್ಲಿ ರಾಜ್ಯದ ಮಹಿಳೆಯರು 3 ಲಕ್ಷದ ತನಕ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ನಾವೀಗ ಈ ಯೋಜನೆ ಯಾವುದು ಅನ್ನುವ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿದುಕೊಳ್ಳೋಣ.
ಗೃಹ ಲಕ್ಷ್ಮಿ ಯೋಜನೆ
ಇದು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದ ಮಾಸಿಕ ಆರ್ಥಿಕ ನೆರವು ಕಾರ್ಯಕ್ರಮವಾಗಿದೆ. ಇದರಲ್ಲಿ ಮನೆಯ ಮಹಿಳಾ ಮುಖ್ಯಸ್ಥೆ ಪ್ರತಿತಿಂಗಳು 2000 ರೂ. ಹಣವನ್ನು ಪಡೆದುಕೊಳ್ಳಬಹುದಾಗಿದೆ. ಈ ಹಣವನ್ನು DBT ಮೂಲಕ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಇದೀಗ ಈ ಯೋಜನೆಯನ್ನು ವಿಸ್ತರಿಸಿ ರಾಜ್ಯ ಸರ್ಕಾರ, ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ಗೃಹ ಲಕ್ಷ್ಮಿ ಸಹಕಾರಿ ಬ್ಯಾಂಕನ್ನು ತೆರೆಯಲು ಆದೇಶವನ್ನು ಹೊರಡಿಸಿದೆ.
ಗೃಹ ಲಕ್ಷ್ಮಿ ಸಹಕಾರಿ ಬ್ಯಾಂಕ್
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಗೃಹ ಲಕ್ಷ್ಮಿ ಸಹಕಾರಿ ಬ್ಯಾಂಕ್ ಅನ್ನು ಆರಂಭಿಸಲಾಗುತ್ತಿದೆ. ತುಮಕೂರಿನಲ್ಲಿ ನೆಡೆದ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬ್ಯಾಂಕ್ ಅನ್ನು ಮಹಿಳೆಯರನ್ನು ಉದ್ಯಮಿಗಳಾಗಿ ರೂಪಿಸುವ ಗುರಿಯನ್ನು ಹೊಂದಿದೆ, ಹಾಗೆ ಖಾಸಗಿ ಫೈನಾನ್ಸ್ ಕಂಪನಿ ಗಳ ತೊಂದರೆಯಿಂದ ಮಹಿಳೆಯರು ಮುಕ್ತರಾಗುವಂತೆ ಮಾಡುವುದು. ಈ ಗೃಹ ಲಕ್ಷ್ಮಿ ಸಹಕಾರಿ ಬ್ಯಾಂಕನ್ನು ನವೆಂಬರ್ 28 ರಂದು ಬೆಂಗಳೂರಿನಲ್ಲಿ ICDS ಸುವರ್ಣ ಮಹೋತ್ಸ್ವದೊಂದಿಗೆ ಚಾಲನೆ ನೀಡಲಾಗುತ್ತದೆ.
1000 ರೂ ಕೊಟ್ಟು ಶೇರ್ ಹೋಲ್ಡರ್ ಆಗಬೇಕು
ಗೃಹಲಕ್ಷ್ಮಿ ಬ್ಯಾಂಕಿನಿಂದ 3 ಲಕ್ಷ ರೂಪಾಯಿಯ ತನಕ ಸಹಾಯಧನ ಪಡೆದುಕೊಳ್ಳಬೇಕು ಅಂದರೆ ಮಹಿಳೆಯರು ಕಡ್ಡಾಯವಾಗಿ ಗೃಹಲಕ್ಷ್ಮಿ ಬ್ಯಾಂಕಿಗೆ 1000 ರೂ ಕೊಟ್ಟು ಶೇರ್ ಪಡೆದುಕೊಳ್ಳಬೇಕು. ಗೃಹಲಕ್ಷ್ಮಿ ಬ್ಯಾಂಕಿಗೆ ಸೇರಿ 6 ತಿಂಗಳು ಕಳೆದ ನಂತರ ಮಹಿಳೆಯರು ಬ್ಯಾಂಕಿನಿಂದ ಸ್ವಂತ ಉದ್ಯಮ ಮಾಡಲು 30 ಸಾವಿರದಿಂದ 3 ಲಕ್ಷ ರೂಪಾಯಿಯ ತನಕ ಸಾಲ ಪಡೆದುಕೊಳ್ಳಬಹುದು. ಖಾಸಗಿ ಬ್ಯಾಂಕ್ ಮತ್ತು ಕೆಲವು ಸರ್ಕಾರೀ ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಗೃಹಲಕ್ಷ್ಮಿ ಬ್ಯಾಂಕಿನ ಬಡ್ಡಿದರ ಬಹಳ ಕಡಿಮೆ ಆಗಿರುತ್ತದೆ.
ಗೃಹಲಕ್ಷ್ಮಿ ಬ್ಯಾಂಕಿನ ನಿಯಮಗಳು
* ಬ್ಯಾಂಕ್ ಗೆ ಸೇರಲು ಸ್ವಯಂ ಪ್ರೇರಣೆ ಮುಖ್ಯ
* ಬ್ಯಾಂಕ್ ಗೆ ಸೇರಲು 1000 ಮೊದಲು ಡೆಪಾಸಿಟ್ ಮಾಡಬೇಕು
* ಶೇರ್ ಹೋಲ್ಡರ್ ಆದ ನಂತರ ಪ್ರತಿ ತಿಂಗಳು 500 ರೂಪಾಯಿ ಪಾವತಿ ಮಾಡಬೇಕು
* ಬ್ಯಾಂಕ್ ಗೆ ಸೇರಿದ 6 ತಿಂಗಳ ನಂತರ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
* ಗುಂಪು ಸಾಲ ಇಲ್ಲ. ವಯಕ್ತಿಕ ಸಾಲ ಮಾತ್ರ ಲಭ್ಯ
ಗೃಹಲಕ್ಷ್ಮಿ ಬ್ಯಾಂಕಿನ ಸಾಲದ ಲಾಭ
ಗೃಹ ಲಕ್ಷ್ಮಿ ಸಹಕಾರಿ ಬ್ಯಾಂಕ್ ನಲ್ಲಿ 30,000 ದಿಂದ 3 ಲಕ್ಷ ರೂ. ವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ನೀವು ಕಡಿಮೆ ಬಡ್ಡಿಗೆ ಸಾಲವನ್ನು ಪಡೆದುಕೊಂಡು ಕೃಷಿ, ಹೈನುಗಾರಿಕೆ, ವಾಹನ ಖರೀದಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೆ ಇತ್ಯಾದಿ ಕೆಲಸಕ್ಕೆ ಬಳಸಿಕೊಳ್ಳಬಹುದಾಗಿದೆ. ಈ ಬ್ಯಾಂಕ್ ಮಹಿಳೆಯರ ಸಬಲೀಕರಣದ ಮೂಲಕ ಕುಟುಂಬಗಳನ್ನು ಬಲಪಡಿಸುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

