Gruha Lakshmi: ಮಗಳು ಅಥವಾ ಮಗ ತೆರಿಗೆ ಪಾವತಿಸುತ್ತಿದ್ದರೆ ಗೃಹಲಕ್ಷ್ಮಿ ಹಣ ಸಿಗುತ್ತಾ, ನಿಯಮ ತಿಳಿದುಕೊಳ್ಳಿ.
ಗೃಹಲಕ್ಷ್ಮಿ ಯೋಜನೆಗೆ ಅರ್ಹರಿರುವ ಯಜಮಾನಿಯ ಮಕ್ಕಳು ತೆರಿಗೆ ಪಾವತಿಸುತಿದ್ದರೆ ಗೃಹಲಕ್ಷ್ಮಿ ಹಣ ಪಡೆಯಲು ಸಾಧ್ಯವೇ ?
Gruha Lakshmi And Income Tax: ಕರ್ನಾಟಕದಲ್ಲಿ ಗೃಹಲಕ್ಷ್ಮಿ (Gruha Lakshmi) ಯೋಜನೆಯನ್ನು ಕಾಂಗ್ರೆಸ್ ಪಕ್ಷ ಘೋಷಿಸಿದೆ. ಪ್ರತಿ ತಿಂಗಳು ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯ ಹೆಸರಲ್ಲಿ 2000 ರೂಪಾಯಿ ನೀಡುವುದಾಗಿ ತಿಳಿಸಿದೆ. 18 ವರ್ಷ ಮೇಲ್ಪಟ್ಟ ಕುಟುಂಬದ ಮುಖ್ಯಸ್ಥೆಗೆ ಈ ಗೃಹಲಕ್ಷ್ಮಿ ಯೋಜನೆ ಲಭ್ಯವಾಗಲಿದೆ. ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಬಳಕೆದಾರರಾದ ಪ್ರತಿ ಮಹಿಳೆಯು ಯೋಜನೆಯ ಫಲಾನುಭವಿ ಆಗಲಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್
ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಬೇಕಾದರೆ ಅರ್ಹರು ಅಥವಾ ಅವರ ಪತಿ ತೆರಿಗೆ ಪಾವತಿದಾರರಾಗಿರಬಾರದು. ತೆರಿಗೆ ಪಾವತಿಸುವವರು ಹೆಚ್ಚಾಗಿ ಏ ಪಿ ಎಲ್ ಕಾರ್ಡ್ ಹೊಂದಿರುತ್ತಾರೆ. ಈ ಏ ಪಿ ಎಲ್ ಕಾರ್ಡ್ ಹೊಂದಿರುವ ಜನರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ಅವರಿಗೆ ಗೃಹಲಕ್ಷ್ಮಿ ಹಣ ಸಿಗುವ ಸಾಧ್ಯತೆ ಕಡಿಮೆ ಆಗಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಹರಿರುವ ಯಜಮಾನಿಯ ಮಗ ಅಥವಾ ಮಗಳು ತೆರಿಗೆ ಪಾವತಿದಾರರಾಗಿದ್ದರೆ ಅವರು ಏ ಪಿ ಎಲ್ ಕಾರ್ಡ್ ಅನ್ನು ಹೊಂದಿರುತ್ತಾರೆ. ಈ ಕಾರಣದಿಂದ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವ ಸಾಧ್ಯತೆ ಕಡಿಮೆ ಆಗಿದೆ.
ತೆರಿಗೆ ಪಾವತಿ ಮಾಡುವವರಿಗೆ ಸಿಗುತ್ತಾ ಗೃಹಲಕ್ಷ್ಮಿ ಯೋಜನೆಯ ಹಣ
ಗೃಹಲಕ್ಷ್ಮಿ ಯೋಜನೆಯಿಂದ ಲಾಭ ಪಡೆಯುವವರಿಗೆ ಇದೀಗ ಸರ್ಕಾರನಿಂದ ಶಾಕಿಂಗ್ ಸುದ್ದಿ ಒಂದು ಹೊರ ಬಿದ್ದಿದೆ. ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಬೇಕಾದರೆ ಸರ್ಕಾರದ ಕೆಲವು ನಿಯಮಗಳನ್ನು ತಿಳಿದುಕೊಳ್ಳಬೇಕು.
ಸಾಮಾನ್ಯವಾಗಿ ತೆರಿಗೆ ಪಾವತಿ ಮಾಡುವವರ ರೇಷನ್ ಕಾರ್ಡ್ APL ಕಾರ್ಡ್ ಆಗಿರುತ್ತದೆ. apl ರೇಷನ್ ಕಾರ್ಡ್ ಹೊಂದಿರುವ ಜನರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಅವರಿಗೆ ಹಣ ಬರುವ ಸಾಧ್ಯತೆ ಕಡಿಮೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ ಮತ್ತು ಇದರ ಬಗ್ಗೆ ಮಾಹಿತಿಯನ್ನ ಮುಂದಿನ ದಿನಗಳಲ್ಲಿ ಸರ್ಕಾರವೇ ತಿಳಿಸಿಕೊಡಲಿದೆ. ಸದ್ಯ ಗೃಹಲಕ್ಷ್ಮಿ ಯೋಯಾನೆಗೆ apl ಮತ್ತು BPL ಹೊಂದಿರುವ ಎಲ್ಲಾ ಜನರು ಅರ್ಜಿ ಸಲ್ಲಿಸುತ್ತಿದ್ದು ಹಣ ಖಾತೆಗೆ ಬಂದಮೇಲೆ ಯೋಜನೆಯ ಬಗ್ಗೆ ತಿಳಿದುಕೊಳ್ಳಬಹದು
ಆಗಸ್ಟ್ 15 ರಂದು ಜಾರಿಗೆ ಬರಲಿದೆ ಗೃಹಲಕ್ಷ್ಮಿ ಯೋಜನೆ
ಗೃಹಲಕ್ಷ್ಮಿ ಯೋಜನೆಯು ಆಗಸ್ಟ್ 15 ಸ್ವತಂತ್ರ ದಿನಾಚರಣೆಯ ದಿನದಂದು ಜಾರಿಗೆ ಬರುವುದಾಗಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಪ್ರತಿ ಮನೆಯ ಒಡತಿಗೆ ಮಾಸಿಕ 2,000 ರೂ. ಖಾತೆಗೆ ಜಮಾ ಆಗಲಿದೆ.