Gruha Lakshmi: ಗೃಹ ಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಿರುವ ಬಗ್ಗೆ ಈ ರೀತಿಯಾಗಿ ಪರಿಶೀಲಿಸಿಕೊಳ್ಳಿ
ಗೃಹ ಲಕ್ಷ್ಮಿ ಇನ್ನು ನಿಮ್ಮ ಖಾತೆಗೆ ಯೋಜನೆಯ ಹಣ ಜಮಾ ಆಗಿದೆಯಾ..? ಇಲ್ಲವಾ..? ಎನ್ನುವುದನ್ನು ಈ ಸುಲಭ ವಿಧಾನದ ಮೂಲಕ ತಿಳಿದುಕೊಳ್ಳಿ.
Gruha Lakshmi Amount Status Check: ರಾಜ್ಯದಲ್ಲಿ August 30 ರಂದು ಅನುಷ್ಠಾನಗೊಂಡಿರುವ Gruha Lakshmi ಯೋಜನೆ ಈಗಾಗಲೇ ಅರ್ಹ ಫಲಾನುಭವಿಗಳಿಗೆ ತಲುಪುತ್ತಿದೆ. Gruha Lakshmi ಯೋಜನೆಯ ಎರಡು ಕಂತುಗಳ ಹಣ ಕೆಲ ಮಹಿಳೆಯರ ಖಾತೆಗೆ ಜಮಾ ಆಗಿದೆ.
ಇನ್ನು ಮೂರನೇ ಕಂತಿನ October ತಿಂಗಳ ಹಣ ಖಾತೆಗೆ ಜಮಾ ಆಗುವುದು ಬಾಕಿ ಇದೆ. ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ ಮೂರನೇ ಕಂತಿನ 2000 ರೂ. ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಿದೆ. ಯಾವ ಮಹಿಳೆಯರ ಖಾತೆಗೆ ಇನ್ನು ಕೂಡ ಯೋಜನೆಯ ಹಣ ಜಮಾ ಆಗಿಲ್ಲ ಅಂತವರ ಖಾತೆಗೆ ಮೂರು ಕಂತುಗಳ ಹಣ ಒಟ್ಟಿಗೆ ಜಮಾ ಆಗಲಿದೆ.
ಗೃಹ ಲಕ್ಷ್ಮಿ ಯೋಜನೆಯ 3 ಕಂತಿನ ಹಣ ಅರ್ಹರ ಖಾತೆಗೆ ಜಮಾ
ಸದ್ಯ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಜಮಾ ಆಗುವ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. November ತಿಂಗಳ 15 ರಿಂದ 20 ನೇ ತಾರೀಕಿನೊಳಗೆ ಮೂರನೇ ಕಂತಿನ ಹಣ ಜಮಾ ಆಗುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಇನ್ನು August 30 ರಂದು ಮೊದಲ ಕಂತಿನ ಹಣ ಬಿಡುಗಡೆಯಾಗಿದ್ದು, October 15 ನೇ ತಾರೀಕಿನಂದು ಮೂರನೇ ಕಂತಿನ ಹಣ ಬಿಡುಗಡೆ ಆಗಿದೆ.
ಇನ್ನು ಮೂರನೇ ಕಂತಿನ ಹಣ November 15 ರೊಳಗೆ ಬಿಡುಗಡೆಯಾಗುವುದಾಗಿ ಸರ್ಕಾರ ಘೋಷಣೆ ಹೊರಡಿಸಿದೆ. ಈಗಾಗಲೇ ಅರ್ಹ ಮಹಿಳೆಯರ ಖಾತೆಗೆ ಮೂರನೇ ಕಂತಿನ ಹಣ ಜಮಾ ಆಗಿದ್ದು, ಇನ್ನು ಕೂಡ ಒಂದು ಕಂತಿನ ಹಣ ಜಮಾ ಆಗದವರ ಖಾತೆಗೆ ಒಟ್ಟಾಗಿ ಮೂರು ತಿಂಗಳ ಹಣ ಜಮಾ ಆಗಲಿದೆ. ಇನ್ನು ನಿಮ್ಮ ಖಾತೆಗೆ ಯೋಜನೆಯ ಹಣ ಜಮಾ ಆಗಿದೆಯಾ..? ಇಲ್ಲವಾ..? ಎನ್ನುವುದನ್ನು ಈ ಸುಲಭ ವಿಧಾನದ ಮೂಲಕ ತಿಳಿದುಕೊಳ್ಳಿ.
ಯೋಜನೆಯ ಹಣ ಖಾತೆಗೆ ಜಮಾ ಆಗಿರುವ ಬಗ್ಗೆ ಈ ರೀತಿಯಾಗಿ ಪರಿಶೀಲಿಸಿಕೊಳ್ಳಿ
*ಗೃಹ ಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಿರುವ ಬಗ್ಗೆ ತಿಳಿಯಲು ನೀವು Play Store ನಲ್ಲಿ DBT Karnataka App ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
*ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ತಕ್ಷಣ ನಿಮಗೆ ಕೆಲವು ಪರ್ಮಿಷನ್ ಅನ್ನು ಕೇಳಲಾಗುತ್ತದೆ. ಎಲ್ಲದಕ್ಕೂ Allow ಕ್ಲಿಕ್ ಮಾಡಿಕೊಳ್ಳಿ.
* ನೀವು ಯಾರ ಖಾತೆ ಸ್ಟೇಟಸ್ ಚೆಕ್ ಮಾಡಲು ಬಯಸುತ್ತೀರೋ ಅವರ ಆಧಾರ್ ಕಾರ್ಡ್ ಸಂಖ್ಯೆ ಮತ್ತು ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
*ನಂತರ ನೋಂದಾಯಿತ ಮೊಬೈಲ್ ಸಂಖ್ಯೆಯೇ OTP ಬರುತ್ತದೆ. ಆ OTP ನಮೂದಿಸಿ.
*ನಂತರ mPIN ಕ್ರಿಕೆಟ್ ಮಾಡಲು ಕೇಳಿದಾಗ ನಾಲ್ಕು ಅಂಕಿಯ ಸೆಕ್ಯೂರಿಟಿ ಕೋಡ್ ಸೆಲೆಕ್ ಮಾಡಿ, ನಮೂದಿಸಿ ಮತ್ತು ಕನ್ಫರ್ಮ್ ಮಾಡಿ.
*ನಿಮ್ಮ ಬಯಸುವ ಫಲಾನುಭವಿಯ ಆಧಾರ್ ವಿವರ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಓಕೆ ಆರಿಸಿ.
*ಇದಾದ ಬಳಿಕ Payment Status ಆಯ್ಕೆಯನ್ನು ಆರಿಸಿದರೆ, ನಿಮಗೆ ಸರ್ಕಾರದ ಯೋಜನೆಗಳಿಂದ ಬಂದ ಹಣದ ಬಗ್ಗೆ ಸಂಪೂರ್ಣಾ ವಿವರ ಕಾಣಿಸುತ್ತದೆ.