Gruha Lakshmi Update: ಈ ದಿನದಂದು ಗೃಹಲಕ್ಷ್ಮಿ ಯೋಜನೆಯ ಹಣ ಜಮಾ, ಈ ದಿನದಂದು ಖಾತೆ ಚೆಕ್ ಮಾಡಿಕೊಳ್ಳಿ.

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರು ಯಾವಾಗ ಪಡೆಯಬಹುದು ಎನ್ನುವ ಬಗ್ಗೆ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.

Gruha Lakshmi  Latest News: ಗೃಹ ಲಕ್ಷ್ಮಿ (Gruha Lakshmi) ಯೋಜನೆಯ ಲಾಭ ಪಡೆಯಲು ರಾಜ್ಯದ ಮಹಿಳೆಯರು ಕಾಯುತ್ತಿದ್ದಾರೆ. ಮಾಸಿಕ 2000 ಹಣ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದ್ದು ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಇನ್ನು ಗೃಹ ಲಕ್ಷ್ಮಿ ಯೋಜನೆಯ ಅನುಷ್ಠಾನದ ಕುರಿತಾಗಿ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಲೇ ಇದೆ.

ಯೋಜನೆಯ ಲಾಭ ಪಡೆಯಲು ಈಗಾಗಲೇ ಲಕ್ಷಾಂತರ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ 70 ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆ ಪೂರ್ಣಗೊಂಡಿದೆ. ಅರ್ಜಿ ಸಲ್ಲಿಸಿದವರು ಯೋಜನೆಯ ಲಾಭ ಪಡೆಯಲು ಕಾಯುತ್ತಿದ್ದಾರೆ.

CM siddaramaiah about gruha lakshmi scheme
Image Credit: Oneindia

ಯೋಜನೆಯ ಲಾಭ ಪಡೆಯಲು ಕಾಯುತ್ತಿರುವ ರಾಜ್ಯದ ಮಹಿಳೆಯರು
ಪ್ರತಿ ಮನೆಯ ಒಡತಿಯರಿಗೆ ಮಾಸಿಕ 2000 ಹಣ ನೀಡುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಹೊರಡಿಸಿದ್ದರು. ಮನೆ ಒಡತಿಯರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ತೊಂದರೆ ಆಗಬಾರದೆಂದು ಕೆಲವು ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಮನೆ ಯಜಮಾನಿಗೆ ಗೃಹ ಲಕ್ಷ್ಮಿ ಯೋಜನೆಯ ಲಾಭ ನೀಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಇನ್ನು ಗೃಹ ಲಕ್ಷ್ಮಿ ಯೋಜನೆಯು ರಾಜ್ಯದ 12.8 ಮಿಲಿಯನ್ ಕುಟುಂಬಗಳಿಗೆ ಲಾಭವನ್ನು ನೀಡಲಿದೆ. ಜುಲೈ 21 ರಂದು ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆಯನ್ನು ನೀಡಿದ್ದಾರೆ.

CM siddaramaiah about gruha lakshmi scheme
Image Credit: Zeebiz

ಎಪಿಎಲ್, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಆದರೆ ಆದಾಯ ತೆರಿಗೆ ಮತ್ತು ಜಿಎಸ್ ಟಿ ಪಾವತಿದಾರರು ಈ ಗೃಹ ಲಕ್ಷ್ಮಿ ಯೋಜನೆಗೆ ಅರ್ಹರಾಗಿರುವುದಿಲ್ಲ.

Join Nadunudi News WhatsApp Group

ಈ ದಿನದಂದು ಗೃಹಲಕ್ಷ್ಮಿ ಯೋಜನೆಯ ಹಣ ಜಮಾ
ಇನ್ನು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು 8147500500 ಸಂಖ್ಯೆಗೆ ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿರುವ ಮೊಬೈಲ್ ನಿಂದ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು SMS ನ ಮೂಲಕ ಕಳುಹಿಸಬೇಕು.ನಿಮ್ಮ ಸಂದೇಶ ತಲುಪಿದ ಕೆಲವೇ ಕ್ಷಣದಲ್ಲಿ ನಿಮಗೆ VM -SEVSIN ಕರ್ನಾಟಕ ಸರ್ಕಾರದ ವತಿಯಿಂದ ನೀವು ಯಾವ ದಿನಾಂಕದಲ್ಲಿ ಯಾವ ಸಮಯಕ್ಕೆ ಯಾವ ಸ್ಥಳದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎನ್ನುವ ಮೆಸೇಜ್ ನಿಮಗೆ ತಲುಪುತ್ತದೆ.

Gruha Lakshmi  Latest News
Image Credit: Hindustantimes

ಗ್ರಾಮ ಒನ್, ಕರ್ನಾಟಕ ಆನ್, ಬಾಪೂಜಿ ಕೇಂದ್ರಗಳಲ್ಲಿ ಕೂಡ ಅರ್ಜಿ ಸಲ್ಲಿಸಬಹುದು. ಇನ್ನು ಈ ಯೋಜನೆ ಯಾವಾಗ ಜಾರಿಗೆ ಬರುತ್ತದೆ ಎಂದು ಅರ್ಜಿದಾರರು ಕಾಯುತ್ತಿದ್ದಾರೆ. ಇದೀಗ ಯೋಜನೆಯ ಜಾರಿಯ ಬಗ್ಗೆ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆಯನ್ನು ಹೊರಡಿಸಿದ್ದಾರೆ. ಆಗಸ್ಟ್ 17 ರಂದು ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಮಹಿಳೆಯರು ಪಡೆಯಬಹುದು ಎಂದು ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group