Gruha Lakshmi: ಇಂತವರು ಗೃಹಲಕ್ಷ್ಮಿ ಅರ್ಜಿ ಹಾಕಿದರೂ ಕೂಡ ಹಣ ಸಿಗೋಲ್ಲ, ಕಡೆ ಕ್ಷಣದಲ್ಲಿ ಹೊಸ ನಿಯಮ
ಸದ್ಯದಲ್ಲೇ ಬಿಡುಗಡೆಯಾಗಲಿದೆ ಗೃಹ ಲಕ್ಷ್ಮಿ ಯೋಜನೆ, ಈ ಯೋಜನೆಗೆ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ತಿಳಿಯಿರಿ.
Gruha Lakshmi Scheme Update: ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಈಗಾಗಲೇ ಸಾಕಷ್ಟು ಅಪ್ಡೇಟ್ ಗಳು ಹೊರ ಬಿದ್ದಿವೆ. ಗೃಹಲಕ್ಷ್ಮಿ ಯೋಜನೆಯು ಪ್ರತಿ ಮನೆಯ ಯಜಮಾನಿಗೆ ಸಿಗಲಿದೆ. ಆಗಸ್ಟ್ 15 ರಿಂದ ತಿಂಗಳಿಗೆ ಮನೆಯ ಯಜಮಾನಿಯ ಖಾತೆಗೆ 2,000 ಹಣ ಬರಲಿದೆ.
ಇನ್ನು ಈ ಯೋಜನೆಗೆ ಸಂಬಂಧಪಟ್ಟಂತೆ ಅರ್ಜಿ ಇಂದು ಜುಲೈ 19 ರಿಂದ ಪ್ರಾರಂಭವಾಗಲಿದೆ. ಗೃಹಲಕ್ಷ್ಮಿ ಯೋಜನೆಯ ಅರ್ಜಿ ಇಂದು ಆರಂಭವಾಗಲಿದೆ. ಇಂದು ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಸಕಲ ಸಿದ್ಧತೆ ನಡೆದಿದ್ದು, ಇದಕ್ಕೆ ಅರ್ಜಿಗೆ ಬೇಕಾದ ಲಿಂಕ್ ಸದ್ಯದಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್
ಇಂದು ಮದ್ಯಾಹ್ನದೊಳಗಡೆ ಗೃಹಲಕ್ಷ್ಮಿ ಯೋಜನೆಗೆ ಅದ್ದೂರಿ ಚಾಲನೆ ಸಿಗಲಿದೆ. ಇದಕ್ಕಾಗಿ ವಿಧಾನಸೌಧದ ಬ್ಯಾಕ್ವೆಟ್ ಹಾಲ್ ಸಿದ್ಧವಾಗಿದೆ. ಇಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ನಂತರ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೂ ಆಗಸ್ಟ್ 16 ರಿಂದ 20 ರೊಳಗೆ ತಲಾ 2000 ರೂಪಾಯಿ ಹಣ ವರ್ಗಾವಣೆ ಆಗಲಿದೆ. ಇನ್ನು ಗೃಹಲಕ್ಷ್ಮಿ ಯೋಜನೆಗೆ ಯಾವ ದಾಖಲೆಗಳು ಬೇಕು, ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವ ಮಾಹಿತಿ ತಿಳಿಯೋಣ.
ಗೃಹಲಕ್ಷ್ಮಿ ಯೋಜನೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಇಲ್ಲಿದೆ ಮಾಹಿತಿ
* ಗೃಹಲಕ್ಷ್ಮಿ ಯೋಜನೆಗೆ ಪಡಿತರ ಕಾರ್ಡ್ ನಲ್ಲಿ ಮನೆಯ ಮುಖ್ಯೆಸ್ತೆಯಾಗಿರುವ ಮಹಿಳೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
* ಯಾರ ಕಾರ್ಡ್ ನಲ್ಲಿ ಮಹಿಳೆರನ್ನು ಮನೆಯ ಮುಖ್ಯೆಸ್ತೆಯನ್ನಾಗಿ ಮಾಡಿಲ್ಲವೋ ಅಂತಹವರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.
* ಪಡಿತರ ಕಾರ್ಡ್ ನಲ್ಲಿ ಮನೆ ಒಡತಿ ಎಂದು ನಮೂದಿಸಿದ ನಂತರ ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರು ಅರ್ಜಿ ಸಲ್ಲಿಸಲು ಸೂಚನೆ.
* ಆಹಾರ ಇಲಾಖೆಗೆ ಮನವಿ ಸಲ್ಲಿಸಿದ ನಂತರ ಗೃಹಲಕ್ಷ್ಮಿ ಯೋಜನೆಗೆ ಅಂತಹ ಮಹಿಳೆಯರು ಅರ್ಜಿ ಸಲ್ಲಿಸಬಹುದು.
* ಮಹಿಳೆ ಅಥವಾ ಅವರ ಪತಿ GST ನಂಬರ್ ಹೊಂದಿದ್ದರೆ ಅವರಿಗೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಸಿಗುವುದಿಲ್ಲ.