Ads By Google

Gruha Lakshmi: ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಬದಲಾವಣೆ, ಈ ಮಹಿಳೆಯರಿಗಿಲ್ಲ ಇನ್ಮುಂದೆ 2000 ರೂ.

Gruha Lakshmi Latest News

Image Credit: Original Source

Ads By Google

Gruha Lakshmi Latest Update: ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಸಾಕಷ್ಟು ಅಪ್ಡೇಟ್ ಹೊರಬೀಳುತ್ತಿದೆ. ರಾಜ್ಯ ಸರ್ಕಾರ ಈಗಲೂ ಕೂಡ ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಸಂಪೂರ್ಣ ಅರ್ಹರಿಗೆ ತಲುಪಿಸುವ ಉದ್ದೇಶದಿಂದ ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಿದೆ.

ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯಡಿ 8 ಕಂತುಗಳ ಹಣ ಬಿಡುಗಡೆ ಆಗಿದೆ. ಏಪ್ರಿಲ್ ನಲ್ಲಿ 8 ನೇ ಕಂತಿನ ಹಣ ಜಮಾ ಆಗಿದ್ದು, ಇನ್ನು ಜಮಾ ಆಗದ ಮಹಿಳೆರ ಖಾತೆಗೆ ಮೇ ಮೊದಲ ವಾರದೊಳಗೆ ಹಣ ಜಮಾ ಆಗಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಇನ್ನು ನೀವು ಗ್ರಹ ಲಕ್ಷ್ಮಿ ಯೋಜನೆಯಡಿ ಎಲ್ಲ ಕಂತುಗಳ ಹಣವನ್ನು ಪಡೆಯಲು ಒಂದಿಷ್ಟು ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವುದು ಅಗತ್ಯವಿದೆ.

Image Credit: Live Mint

ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಬದಲಾವಣೆ
ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಸಮಸ್ಯೆಯೇ ಪರಿಹಾರಕ್ಕೆ ಕಂಡುಕೊಳ್ಳಲು ವಿವಿಧ ರೀತಿಯ ಕ್ರಮ ಕೈಗೊಂಡಿದೆ. ಆದರು ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನಬಹುದು. ಇನ್ನು ಯೋಜನೆಯ ಲಾಭ ಯಾರ ಖಾತೆಗೆ ಜಮಾ ಆಗುತ್ತಿದೆಯೋ ಅಂತವರಿಗೆ ಸರ್ಕಾರ ಮಾಸಿಕ ಹಣ ಬಿಡುಗಡೆ ಮಾಡುತ್ತಲೇ ಇದೆ.

ಸದ್ಯ ರಾಜ್ಯ ಸರ್ಕಾರ 8ನೇ ಕಂತಿನ ಹಣ ಬಿಡುಗಡೆಗೆ ದಿನಾಂಕವನ್ನು ನಿಗದಿ ಮಾಡಿದೆ. ಮೇ ಮೊದಲ ವಾರದಲ್ಲಿ ಫಲಾನುಬಾಹಿಗಳು 8 ನೇ ಕಂತಿನ ಹಣ ಜಮಾ ಆಗಲಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಮಹಿಳೆಯರು ಇಲ್ಲಿಯವರೆಗೆ 16,000 ಹಣವನ್ನು ಪಡೆದಿದ್ದಾರೆ. ಇನ್ನು ಯಾರು ಹಣವನ್ನು ಪಡೆದಿಲ್ಲವೋ ಅಂತವರು ಆದಷ್ಟು ಬೇಗ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಯೋಜನೆಯ ಫಲಾನುಭವಿಗಳು 8 ನೇ ಕಂತಿನ ಹಣ ಪಡೆಯಲು ತಕ್ಷಣ ಈ ಕೆಲಸ ಮಾಡಬೇಕಾಗಿದೆ. ಇನ್ನು 8 ನೇ ಕಂತಿನ ಬಳಿಕ ಮೇ ತಿಂಗಳಿನಲ್ಲಿ 9 ನೇ ಕಂತಿನ ಹಣ ಕೂಡ ಬಿಡುಗಡೆಯಾಗಲಿದೆ.

Image Credit: Kannadanews

ಈ ಮಹಿಳೆಯರಿಗಿಲ್ಲ ಇನ್ಮುಂದೆ 2000 ರೂ
•ಈಗಾಗಲೇ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಫಲಾನುಭವಿಗಳಿಗೆ KYC ಅಪ್ಡೇಟ್ ಅನ್ನು ಕಡ್ಡಾಯಗಳಿಸಿದೆ. KYC ನವೀಕರಣ ಆಗದ ಮಹಿಳೆಯರ ಖಾತೆಗೆ ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದಿಲ್ಲ. ನೀಡಿರುವ ಬ್ಯಾಂಕ್ ಖಾತೆಗೆ ನೀವು ಮತ್ತೆ KYC ಮಾಡಬೇಕು. ಅಂದರೆ ಬ್ಯಾಂಕ್ ಖಾತೆಗೆ ಮತ್ತೊಮ್ಮೆ ಆಧಾರ್ ಸೀಡಿಂಗ್ ಮಾಡಿ ನಂತರ ಹಣ ಜಮೆಯಾಗುತ್ತದೆ.

•ಇನ್ನು KYC Update ನ ಜೊತೆಗೆ NPCI Link ಕೂಡ ಅಗತ್ಯವಾಗಿದೆ. ಫಲಾನುಭವಿಗಳು ತಕ್ಷಣ NPCI ಲಿಂಕ್ ಮಾಡಬೇಕಿದೆ. ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೀವು ಈ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಬಹುದು.

•ಇನ್ನು ನಿಮ್ಮ ಮೊಬೈಲ್ ನಂಬರ್ ಗೆ ಬ್ಯಾಂಕ್ ಅಕೌಂಟ್ ಹಗೂ ಆಧಾರ್ ಲಿಂಕ್ ಆಗುವುದು ಕೂಡ ಮುಖ್ಯವಾಗಿದೆ. ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಆಗದೆ ಇದ್ದರೆ ನಿಮ್ಮ ಖಾತೆಗೆ ಯೋಜನೆಯ ಹಣ ಜಮಾ ಆಗಿದೆಯಾ ಅಥವಾ ಇಲ್ಲವ ಎನ್ನುವ ಬಗ್ಗೆ ನಿಮಗೆ ಸಂದೇಶ ರವಾನೆ ಆಗುವುದಿಲ್ಲ.

•ಇನ್ನು ಅರ್ಜಿ ಸಲ್ಲಿಕೆಯ ವೇಳೆ ನೀವು ನೀಡಿದ ಬ್ಯಾಂಕ್ ಅಕೌಂಟ್ ಸರಿಯಾಗಿದೆಯೇ ಎನ್ನುವುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ನಿಮ್ಮ ಖಾತೆ ಕ್ಲೋಸ್ ಆಗಿದ್ದರೆ ಹಣ ಜಮಾ ಆಗುವುದು ಕಷ್ಟ.

Image Credit: Kannada News
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in