Gruha Lakshmi: ಗೃಹಲಕ್ಷ್ಮಿ 2000 ರೂ ಗಾಗಿ ಕಾಯುತ್ತಿದ್ದ ಮಹಿಳೆಯರಿಗೆ ಬೇಸರದ ಸುದ್ದಿ, ಸರ್ಕಾರದ ಇನ್ನೊಂದು ಘೋಷಣೆ.

ಸರ್ಕಾರ ಇದೀಗ ಗೃಹಿಣಿಯರಿಗೆ ಶಾಕ್ ನೀಡಿದೆ, ಗೃಹ ಲಕ್ಷ್ಮಿ ಯೋಜನೆಯ ಜಾರಿಯ ಕುರಿತು ಮಹತ್ವದ ಬದಲಾವಣೆ ತಂದಿದೆ.

Gruha Lakshmi Latest Update: ಕಾಂಗ್ರೆಸ್ ಸರ್ಕಾರದ ಗೃಹ ಲಕ್ಷ್ಮಿ (Gruha Lakshmi)  ಯೋಜನೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಮಾಸಿಕ 2000 ಹಣ ಪಡೆಯಲು ರಾಜ್ಯದ ಗೃಹಣಿಯರು ಕಾಯುತ್ತಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಇವರಿಗೆ 1.5 ಕೋಟಿ ಗೃಹಿಣಿಯರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಕೂಡ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ.

ಈಗಾಗಲೇ ಅರ್ಜಿ ಸಲ್ಲಿಕೆಗೆ ಸಹಾಯವಾಗಲು ಸರ್ಕಾರ ವಿವಿಧ ಸೌಲಭ್ಯವನ್ನು ನೀಡಿದೆ. ಇತ್ತೀಚೆಗಷ್ಟೇ ವಾಟ್ಸಾಪ್ ನ ಮೂಲಕ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಇನ್ನು ಗೃಹ ಯೋಜನೆಯ ಹಣ ಯಾವಾಗ ಜಾರಿಯಾಗುತ್ತದೆ ಎಂದು ಸಿದ್ದರಾಮಯ್ಯ (Siddaramaiah) ಅವರು ಘೋಷಣೆ ಹೊರಡಿಸಿದ್ದರು. ಯೋಜನೆಯ ಲಾಭ ಪಡೆಯಲು ಕಾಯುತ್ತಿದ್ದ ರಾಜ್ಯದ ಗೃಹಣಿಯರಿಗೆ ಇದೀಗ ಸರ್ಕಾರ ಶಾಕ್ ನೀಡಿದೆ.

Gruha Lakshmi yojana launch date postponed
Image Credit: Hindustantimes

ಗೃಹಲಕ್ಷ್ಮಿ 2000 ರೂ ಗಾಗಿ ಕಾಯುತ್ತಿದ್ದ ಮಹಿಳೆಯರಿಗೆ ಬೇಸರದ ಸುದ್ದಿ
ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಸರ್ಕಾರ ಯಾವುದೇ ಶುಲ್ಕವನ್ನು ವಿಧಿಸಿಲ್ಲ. ಉಚಿತವಾಗಿ ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಕೇಂದ್ರಗಳಲ್ಲಿ ಗೃಹ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಅರ್ಜಿದಾರರು ತಮ್ಮ ಆಧಾರ್ ಕಾರ್ಡ್ ನ ಜೊತೆಗೆ ತಮ್ಮ ಪಡಿತರ ಚೀಟಿ ಅನ್ನು ಒದಗಿಸಬೇಕಾಗುತ್ತದೆ.

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡದೆ ಇದ್ದರೆ, ಇ- ಕೆವೈಸಿ ಅಪ್ಡೇಟ್ ಮಾಡೇ ಇದ್ದರೆ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ. ಯೋಜನೆಯ ಲಾಭ ಪಡೆಯಲು ಇ ಕೆವೈಸಿ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. ಇನ್ನು 2000 ರೂ. ಹಣ ಯಾವಾಗ ಖಾತೆಗೆ ಜಮಾ ಆಗುತ್ತದೆ ಎಂದು ಕಾಯುತ್ತಿದ್ದರು. ಆದರೆ ಸರ್ಕಾರ ಇದೀಗ ಗೃಹಿಣಿಯರಿಗೆ ಶಾಕ್ ನೀಡಿದೆ. ಗೃಹ ಲಕ್ಷ್ಮಿ ಯೋಜನೆಯ ಜಾರಿಯ ಕುರಿತು ಮಹತ್ವದ ಬದಲಾವಣೆ ತಂದಿದೆ.

Sad news for women who were waiting for Gruha Lakshmi Yojana
Image Credit: News9live

ಯೋಜನೆ ಚಾಲನೆಯ ದಿನಾಂಕ ಮುಂದೂಡಿಕೆ
ಗೃಹ ಲಕ್ಷ್ಮಿ ಯೋಜನೆ ಲಭ್ಯವಾಗುವ ಬಗ್ಗೆ ಸಿದ್ದರಾಮಯ್ಯ ಅವರು ಘೋಷಣೆ ಹೊರಡಿಸಿದ್ದಾರೆ. ಆಗಸ್ಟ್ 27 ರಂದು ಯೋಜನೆಗೆ ಚಾಲನೆ ನೀಡಲಾಗಿದ್ದು ಅದೇ ದಿನ ರಾಜ್ಯದ ಗೃಹಿಣಿಯರ ಖಾತೆಗೆ 2000 ಹಣ ಜಮಾ ಆಗುತ್ತದೆ ಎಂದು ಸಿದ್ದರಾಮಯ್ಯ ಅವರು ಅಧಿಕೃತ ಘೋಷಣೆ ಹೊರಡಿಸಿದ್ದರು. ಆದರೆ ಇದೀಗ ಯೋಜನೆ ಚಾಲನೆಯ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ. ಆಗಸ್ಟ್ 27 ಅಲ್ಲ ಬದಲಾಗಿ ಆಗಸ್ಟ್ 30 ರಂದು ಗೃಹ ಲಕ್ಷ್ಮಿ ಯೋಜನೆ ಮಾಸಿಕ 2000 ಗೃಹಣಿಯರ ಖಾತೆಗೆ ಜಮಾ ಆಗಲಿದೆ.

Join Nadunudi News WhatsApp Group

Join Nadunudi News WhatsApp Group