Gruha lakshmi New: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಿದ ಬೆನ್ನಲ್ಲೇ ಇನ್ನೊಂದು ಗುಡ್ ನ್ಯೂಸ್, ಸರ್ಕಾರದ ಘೋಷಣೆ.

ಗೃಹಲಕ್ಷ್ಮಿ ಹಣ ಇನ್ನು ಪಡೆಯದೇ ಜನರಿಗೆ ಮತ್ತೊಂದು ಅವಕಾಶ ನೀಡಿದ ಸರ್ಕಾರ.

Gruha lakshmi New Update: ರಾಜ್ಯದಲ್ಲಿ ಆಗಸ್ಟ್ 30 ರಂದು Gruha lakshmi ಚಾಲನೆಗೊಂಡಿದೆ
ಅರ್ಹ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯಡಿ 2000 ರೂ ಹಣ ಜಮಾ ಆಗಿದೆ. ರಾಜ್ಯ ಗೃಹಿಣಿಯರು ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಕಾಯುತ್ತಿದೆ. ರಾಜ್ಯದ ಲಕ್ಷಾಂತರ ಗೃಹಿಣಿಯರ ಕನಸು ಆಗಸ್ಟ್ 30 ರಂದು ನನಸಾಗಿದೆ.

ಇನ್ನು ಕೆಲ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದರು ಕೂಡ ಯೋಜನೆಯ ಹಣ ಖಾತೆಗೆ ಜಮಾ ಆಗಿಲ್ಲ. ಈ ಬಗ್ಗೆ ಗೃಹಿಣಿಯರು ಚಿಂತಿಸುತ್ತಿದ್ದಾರೆ. ಇದೀಗ ರಾಜ್ಯ ಸರಕಾರ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗದೆ ಇದ್ದವರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ನಿಮಗೆ ಗೃಹ ಲಕ್ಷ್ಮಿ ಹಣ ಪಡೆಯಲು ಸರ್ಕಾರ ಉತ್ತಮ ಅವಕಾಶವನ್ನು ನೀಡಲು ಮುಂದಾಗಿದೆ.

Gruha Lakshmi latest news update
Image Credit: Scroll

ಗೃಹ ಲಕ್ಷ್ಮಿ ಯೋಜನೆಯಡಿ 2000 ರೂ ಖಾತೆಗೆ ಜಮಾ
ರಾಜ್ಯದಲ್ಲಿ 1.10 ಕೋಟಿ ಗೃಹಿಣಿಯರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದವರ ಖಾತೆಗೆ ಆಗಸ್ಟ್ 30 ರಂದು ಸರ್ಕಾರ ಹಣ ಜಮಾ ಮಾಡಿದೆ. ಆಗಸ್ಟ್ 15 ರೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಈ ತಿಂಗಳ 2000 ರೂ. ಜಮಾ ಆಗಿದೆ. ಆಗಸ್ಟ್ 15 ರ ನಂತರ ಅರ್ಜಿ ಸಲ್ಲಿಸಿದವರಿಗೆ ಮುಂದಿನ ತಿಂಗಳಿಂದ ಮಾಸಿಕ 2000 ರೂ ಜಮಾ ಆಗಲಿದೆ. ಇನ್ನು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದರು ಕೊಡ ಕೆಲ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ.

ಅರ್ಜಿ ಸಲ್ಲಿಸಿದರು ಇಂತವರ ಖಾತೆಗೆ ಹಣ ಜಮಾ ಆಗಿಲ್ಲ
ಗೃಹ ಲಕ್ಷ್ಮಿ ಯೋಜನೆಯಡಿ 2000 ಹಣವನ್ನು ಪಡೆದವರಿಗೆ ಸರ್ಕಾರ ಸಂದೇಶವನ್ನು ಕಳುಹಿಸುತ್ತದೆ. ಅರ್ಜಿ ಸಲಿಕೆಯಲ್ಲಿ ಯಾವುದೇ ರೀತಿಯ ತಪ್ಪಾದರೂ ಕೂಡ ಯೋಜನೆ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಪಡಿತರ ಚೀಟಿಯಲ್ಲಿ ಮನೆಯ ಮುಖ್ಯಸ್ಥೆ ಮಹಿಳೆಯಾಗಿಲ್ಲದೆ ಪುರುಷರಾಗಿದ್ದರೆ ಅಂತವರ ಖಾತೆಗೆ ಹಣ ಜಮಾ ಆಗುವುದಿಲ್ಲ. ಇದೀಗ ಸರ್ಕಾರ ಇಂತವರಿಗೆ ಒಳ್ಳೆಯ ಅವಕಾಶವನ್ನು ನೀಡಿದೆ. ಪಡಿತರ ಚೀಟಿ ತಿದ್ದುಪಡಿಗೆ ಸರ್ಕಾರ ಇನ್ನಷ್ಟು ಸಮಯಾವಕಾಶವನ್ನು ನೀಡಿದೆ.

Gruha lakshmi New Update
Image Credit: Other Source

ಪಡಿತರ ತಿದ್ದುಪಡಿಗೆ ದಿನಾಂಕ ವಿಸ್ತರಣೆ
ಈ ಹಿಂದೆ ಗೃಹ ಲಕ್ಷ್ಮಿ ಯೋಜನೆಯಡಿ ಅರ್ಹರು ಲಾಭವನ್ನು ಪಡೆಯಲು ರೇಷನ್ ಕಾರ್ಡ್ ನ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿತ್ತು. ಇನ್ನು ಕೊಡ ಕೆಲವರ ಪಡಿತರ ಚೀಟಿ ತಿದ್ದುಪಡಿ ಆಗಿಲ್ಲ. ಮನೆಯ ಮುಖ್ಯಸ್ಥೆ ಮಹಿಳೆ ಆಗಿಲ್ಲದಿದ್ದರೆ ಅದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕಿದೆ.

Join Nadunudi News WhatsApp Group

ಈ ಹಿಂದೆ ಸರ್ಕಾರ ಪಡಿತರ ಚೀಟಿ ತಿದ್ದುಪಡಿಗೆ ಸೆಪ್ಟೆಂಬರ್ 9 ಕೊನೆಯ ದಿನಾಂಕವನ್ನು ನಿಗದಿಪಡಿಸಿತ್ತು. ಇದೀಗ ಈ ದಿನಾಂಕವನ್ನು ಸರಕಾರ ವಿಸ್ತರಿಸಿದೆ. ಪಡಿತರ ಚೀಟಿ ತಿದ್ದುಪಡಿಗೆ ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 14 ರವರೆಗೆ ಸರ್ಕಾರ ಕಾಲಾವಕಾಶವನ್ನು ನೀಡಿದೆ. ರಾಜ್ಯದ ಅರ್ಹ ಗೃಹಿಣಿಯರು ಗೃಹ ಲಕ್ಷ್ಮಿ ಯೋಜನೆ ಸೆಪ್ಟೆಂಬರ್ ತಿಂಗಳ 2000 ರೂ ಹಣ ಪಡೆಯಲು ಇಂದೇ ಪಡಿತರ ಚೀಟಿ ತಿದ್ದುಪಡಿ ಮಾಡುವುದು ಉತ್ತಮ.

Join Nadunudi News WhatsApp Group