NPCI Check: 11 ನೇ ಕಂತಿನ ಹಣ ಇನ್ನು ಬಂದಿಲ್ವಾ…? ಹಾಗಾದರೆ ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ

ಹನ್ನೊಂದನೇ ಕಂತಿನ ಹಣ ಜಮಾ ಆಗದೆ ಇದ್ದರೆ ಇಂದೇ ಈ ಕೆಲಸ ಮಾಡಿ.

Gruha Lakshmi New Rule:  ರಾಜ್ಯ ಸರ್ಕಾರ ರಾಜ್ಯದ ಎಲ್ಲ ಅರ್ಹರ ಫಲಾನುಭವಿಗಳಿಗೆ ಮಾಸಿಕವಾಗಿ 2000 ಹಣವನ್ನು ಬಿಡುಗಡೆ ಮಾಡುತ್ತಿದೆ. ಆಗಸ್ಟ್ ನಲ್ಲಿ ಅನುಷ್ಠಾನಗೊಂಡ ಗೃಹ ಲಕ್ಷ್ಮಿ ಯೋಜನೆ ಸದ್ಯ 11 ಕಂತುಗಳ ಹಣ ಅರ್ಹರ ಖಾತೆಗೆ ತಲುಪಿದೆ ಎನ್ನಬಹುದು. ಆದರೆ ಸರ್ಕಾರದ ಈ ಯೋಜನೆಯ ಲಾಭ ಎಲ್ಲ ಅರ್ಹರ ಖಾತೆಗೆ ತಲುಪುತ್ತಿಲ್ಲ ಎನ್ನುವುದು ದೊಡ್ಡ ಸಮಸ್ಯೆಯಾಗಿದೆ. ಸರಕಾರ ಎಲ್ಲ ಅರ್ಹರ ಖಾತೆಗೆ ಹಣ ಜಮಾ ಮಾಡಲು ಎಷ್ಟೇ ಕ್ರಮ ಕೈಗೊಳ್ಳುತ್ತಿದ್ದರು ಕೂಡ ಹಣ ಅರ್ಹರ ಖಾತೆಗೆ ಜಮಾ ಆಗುತ್ತಿಲ್ಲ.

ಈ ನಿಟ್ಟಿನಲ್ಲಿ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ನಿಯಮಗಳನ್ನು ಬದಲಿಸುತ್ತಾ ಬಂದಿದೆ. ಸದ್ಯ ಹಣ ಜಮಾ ಆಗದವರ ಖಾತೆಗೆ ಹಣವನ್ನು ಜಮಾ ಮಾಡಲು ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆ. ನೀವು ಸರ್ಕಾರದ ಈ ನಿಯಮವನ್ನು ಪಾಲಿಸಿದರೆ ಯಾವುದೇ ತೊಂದರೆ ಇಲ್ಲದೆ ನಿಮ್ಮ ಖಾತೆಗೆ ಗೃಹ ಲಕ್ಷ್ಮಿ ಎಲ್ಲ ಕಂತುಗಳ ಹಣ ಜಮಾ ಆಗಲಿದೆ.

Gruha Lakshmi New Rule
Image Credit: Karnataka Times

ಹನ್ನೊಂದನೇ ಕಂತಿನ ಹಣ ಜಮಾ ಆಗದೆ ಇದ್ದರೆ ಇಂದೇ ಈ ಕೆಲಸ ಮಾಡಿ
*ಜೂನ್ ತಿಂಗಳ ಹಣ ಜಮಾ ಆಗಿದ್ದು, ಹಣ ಜಮೆ ಆಗದೇ ಇದ್ದಲ್ಲಿ ಎನ್ ಪಿಸಿಐ (NPCI Link) ಪರಿಶೀಲನೆ ನಡೆಸುವಂತೆ NPCI ಸೂಚಿಸಿದೆ. ರಾಜ್ಯ ಸರ್ಕಾರ ಈಗಾಗಲೇ NPCI Link ಮಾಡಿಸುವಂತೆ ಆದೇಶ ಹೊರಡಿಸಿತ್ತು. ಹನ್ನೊಂದನೇ ಕಂತಿನ ಹಣ ಬಿಡುಗಡೆಯಾಗಿದ್ದರು ಜಮಾ ಆಗದೆ ಇರುವುದು ಇದೆ ಮುಖ್ಯ ಕಾರಣವಾಗಿದೆ.

*ಗೃಹ ಲಕ್ಷ್ಮಿ ಯೋಜನೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗದಿದ್ದರೆ, ನೀವು ಒಮ್ಮೆ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು ಮತ್ತು ಆಧಾರ್ KYC ಮಾಡಿಸಬೇಕಾಗುತ್ತದೆ. ಯಾವುದೇ ತೊಂದರೆ ಇಲ್ಲದೆ ಹಣ ಜಮಾ ಆಗಲು Aadhaar KYC ಕೂಡ ಮುಖ್ಯವಾಗಿದೆ.

Gruha Lakshmi Yojana Latest
Image Credit: Oneindia

ಹಣ ಜಮಾ ಆಗಿದೆಯಾ ಇಲ್ಲವ ಎಂದು ಈ ರೀತಿ ಖಾತೆ ಚೆಕ್ ಮಾಡಿಕೊಳ್ಳಿ
•Google Play Store ನಿಂದ ಅಧಿಕೃತ DBT Karnataka Mobile App ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

Join Nadunudi News WhatsApp Group

•ನಂತರ ಅರ್ಜಿದಾರರು ತಮ್ಮ 12 ಅಂಕಿಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.

•ನಿಮ್ಮ ಆಧಾರ್‌ ನಲ್ಲಿರುವಂತೆ ಹೆಸರನ್ನು ನಮೂದಿಸಬೇಕು ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ 6 ಅಂಕಿಯ OTP ಅನ್ನು ನಮೂದಿಸಬೇಕು.

•OTP ಅನ್ನು ನಮೂದಿಸಿದ ನಂತರ, ನಾಲ್ಕು (4) ಅಂಕಿಯ ಪಾಸ್‌ ವರ್ಡ್ ಅನ್ನು ರಚಿಸಿ.

•ನಂತರ ಇಲ್ಲಿ ಅರ್ಜಿದಾರರು ಅಂದರೆ ನಿಮ್ಮ ವೈಯಕ್ತಿಕ ವಿವರಗಳು ತೋರುತ್ತದೆ. ಕೊನೆಯ ಕಲಾಂ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಮತ್ತು “ಸರಿ” ಬಟನ್ ಅನ್ನು ಕ್ಲಿಕ್ ಮಾಡಿ.

•ನಂತರ “ಲಾಗಿನ್” ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಈಗಾಗಲೇ ರಚಿಸಲಾದ ಪಾಸ್ವರ್ಡ್ ಅನ್ನು ಹಾಕಿ.

•ನಂತರ “ಪಾವತಿ ಸ್ಥಿತಿ” ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಗೃಹ ಲಕ್ಷ್ಮಿ ಎಂಬ ಬಟನ್ ಅನ್ನು ಕ್ಲಿಕ್ ಮಾಡಿದರೆ, ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಯಾವ ದಿನಾಂಕವನ್ನು ಹಣ ಠೇವಣಿ ಮಾಡಲಾಗಿದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ತಿಳಿಯುತ್ತದೆ.

Gruha Lakshmi Scheme Status Check
Image Credit: Ainlivenews

Join Nadunudi News WhatsApp Group