Gruha Lakshmi: ಈ 16 ಜಿಲ್ಲೆಗಳಿಗೆ ಪೆಂಡಿಂಗ್ ಇರುವ ಗೃಹಲಕ್ಷ್ಮಿ ಹಣ ಬಿಡುಗಡೆ, ನಿಮ್ಮ ಜಿಲ್ಲೆಯ ಹೆಸರು ಇದೆಯಾ ನೋಡಿ.

ಈ 16 ಜಿಲ್ಲೆಗಳಿಗೆ ಪೆಂಡಿಂಗ್ ಇರುವ ಗೃಹಲಕ್ಷ್ಮಿ ಹಣ ಬಿಡುಗಡೆ

Gruha Lakshmi Pending Amount: ಕಾಂಗ್ರೆಸ್ ಖಾತರಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ 20,000 ರೂಪಾಯಿಗಳನ್ನು ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗಿದೆ. ಗೃಹಿಣಿಯರು ಕಳೆದ ಹತ್ತು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ ಗೃಹಿಣಿಯರು ಪ್ರತಿ ತಿಂಗಳು 2000 ರೂಪಾಯಿಗಳನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಈ ತಿಂಗಳಿನಲ್ಲಿ ಮುಂದಿನ ಕಂತಿನ ಹಣ ಕೂಡ ಬಿಡುಗಡೆಯಾಗಲಿದೆ.

Gruha Lakshmi Big Update
Image Credit: Starofmysore

ಈ 16 ಜಿಲ್ಲೆಗಳಿಗೆ ಪೆಂಡಿಂಗ್ ಇರುವ ಗೃಹಲಕ್ಷ್ಮಿ ಹಣ ಬಿಡುಗಡೆ
ಸದ್ಯ ರಾಜ್ಯ ಸರ್ಕಾರ 11 ನೇ ಕಂತಿನ ಹಣವನ್ನು ಈಗಾಗಲೇ ಎಲ್ಲ ಅರ್ಹರ ಖಾತೆಗೆ ಜಮಾ ಮಾಡಿಸಿದೆ. ಆದಾಗ್ಯೂ, ತಾಂತ್ರಿಕ ದೋಷದ ಕಾರಣ ಅದೆಷ್ಟೋ ಫಲಾನುಭವಿಗಳು ಎಲ್ಲ ಕಂತುಗಳ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಜೂನ್ ನಲ್ಲಿ ರಾಜ್ಯ ಸರ್ಕಾರ ಫಲಾನುಭವಿಗಳಿಗೆ 11 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಆದರೆ ಆಧಾರ್ ಸೀಡಿಂಗ್, NPCI ಮ್ಯಾಪಿಂಗ್, ಬ್ಯಾಂಕ್ ಆಕೌಂಟ್ ಸಮಸ್ಯೆ ಇಂದಾಗಿ ಸಾಕಷ್ಟು ಫಲಾನುಭವಿಗಳು ಹಣವನ್ನು ಪಡೆಯಲು ಸಾಧ್ಯವಾಗಿಲ್ಲ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

ಸರ್ಕಾರ ಎಲ್ಲ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲು ವಿವಿಧ ಕ್ರಮ ಕೈಗೊಳ್ಳುತ್ತಿದ್ದರು ಕೂಡ ಒಂದೊಂದೇ ಸಮಸ್ಯೆ ಎದುರಾಗುತ್ತಿದೆ ಎನ್ನಬಹುದು. ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪೆಂಡಿಂಗ್ ಇರುವ 16 ಜಿಲ್ಲೆಗಳಲ್ಲಿ ಗೃಹ ಲಕ್ಷ್ಮಿ 11 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ರಾಜ್ಯ ಸರಕಾರ ಯಾವ ಯಾವ ಜಿಲ್ಲೆಯಲ್ಲಿ ಹಣವನ್ನು ಬಿಡುಗಡೆ ಮಾಡಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Gruha Lakshmi Pending Amount
Image Credit: Karnatakatimes

ನಿಮ್ಮ ಜಿಲ್ಲೆಯ ಹೆಸರು ಇದೆಯಾ ನೋಡಿ
•ಚಿಕ್ಕಮಗಳೂರು
•ಉಡುಪಿ
•ದಕ್ಷಿಣ ಕನ್ನಡ
•ಹುಬ್ಬಳ್ಳಿ
•ಬೆಳಗಾವಿ
•ಧಾರವಾಡ
•ಬೆಂಗಳೂರು ನಗರ
•ಬೆಂಗಳೂರು ಗ್ರಾಮಾಂತರ
•ಕೊಡಗು
•ಮೈಸೂರು
•ದಾವಣಗೆರೆ
•ಚಿತ್ರದುರ್ಗ
•ಕೋಲಾರ
•ವಿಜಯಪುರ
•ಗುಲ್ಬರ್ಗ
•ತುಮಕೂರು

Join Nadunudi News WhatsApp Group

Gruha Lakshmi New Update
Image Credit: Karnatakatimes

Join Nadunudi News WhatsApp Group