Gruha Lakshmi Scheme Quarterly Payment: ಕರ್ನಾಟಕದ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸುತ್ತಿದ್ದು, ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2,000 ರೂಪಾಯಿ ಒದಗಿಸಲಾಗುತ್ತದೆ. ಆದರೆ ಕೆಲವು ತಾಂತ್ರಿಕ ದೋಷದ ಕಾರಣ ಕೆಲವು ತಿಂಗಳ ಹಣ ಬಾಕಿ ಉಳಿದುಕೊಂಡಿದೆ. ಇದೀಗ ಬೆಳಗಾವಿಯಲ್ಲಿ ಮುಖ್ಯ ಮಂತ್ರಿ ಅವರ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯ ರೆಡ್ಡಿ ಅವರು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಇನ್ನೊಂದು ಹೇಳಿಕೆ ಕೊಟ್ಟಿದ್ದು ಸದ್ಯ ಈ ಹೇಳಿಕೆ ರಾಜ್ಯದ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರ ಬೇಸರಕ್ಕೆ ಕಾರಣವಾಗಿದೆ.
ಗೃಹಲಕ್ಷ್ಮಿ ಯೋಜನೆಯ ಹಿನ್ನಲೆ
ಈ ಗೃಹಲಕ್ಷ್ಮಿ ಯೋಜನೆಯನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ 2023 ರ ಆಗಸ್ಟ್ ನಲ್ಲಿ ಜಾರಿಗೆ ತಂದಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಘೋಷಣೆ ಮಾಡಿದ 5 ಯೋಜನೆಯಲ್ಲಿ ಈ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಇದರ ಮುಖ್ಯ ಗುರಿ ಮಹಿಳೆಯರ ಸಬಲೀಕರಣ. ಈ ಯೋಜನೆಯ ಅಡಿಯಲ್ಲಿ ಕುಟುಂಬದ ಸದಸ್ಯೆಗೆ ಪ್ರತಿ ತಿಂಗಳು 2000 Rs ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಯೋಜನೆಯ ಮೂಲ ಉದ್ದೇಶವೇ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುವುದು. ಕರ್ನಾಟಕ ರಾಜ್ಯ ಸರ್ಕಾರ ಸುಮಾರು 28,608 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತಂದಿದೆ.
ಇನ್ನುಮುಂದೆ 3 ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಜಮಾ
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ರಾಯ ರೆಡ್ಡಿ ಅವರು ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. ನಾವು ಆರ್ಥಿಕವಾಗಿ ಸ್ಟ್ರಾಂಗ್ ಆಗಿದ್ದೇವೆ, GST ಕಲೆಕ್ಷನ್ ಆದರೆ ಕೇಂದ್ರ ಸರ್ಕಾರ ಅರ್ಧ ಹಣ ಕೊಡಬೇಕು, ಅವರು ಕೊಡುದು 1 ಅಥವಾ 2 ತಿಂಗಳು ತಡವಾಗಬಹುದು ಈ ಕಾರಣಕ್ಕೆ ಮೂರೂ ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಅರ್ಹತೆ
* ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
* ಮಹಿಳೆ ಮನೆಯ ಮುಖ್ಯಸ್ಥೆ ಆಗಿರಬೇಕು
* ಮಹಿಳೆ ಅಥವಾ ಅವಳ ಪತಿ ಆದಾಯ ತೆರಿಗೆಯನ್ನು ಪಾವತಿಸಬಾರದು.
ಗೃಹ ಲಕ್ಷ್ಮಿ ಹಣ ಜಮಾ ಆಗದೆ ಇರಲು ಕಾರಣ
* ಕೆಲವು ಮಹಿಳೆಯರು ಬ್ಯಾಂಕ್ ಖಾತೆಗೆ ಇನ್ನೂ ಕೂಡ ಆಧಾರ್ ಸಂಖ್ಯೆ ಲಿಂಕ್ ಮಾಡದೆ ಇರುವುದು
* ಆಧಾರ್, ರೇಷನ್ ಕಾರ್ಡ್ ನಲ್ಲಿ ಹೆಸರಿನ ವ್ಯತ್ಯಾಸ
* KYC ನವೀಕರಣ ಮಾಡದೆ ಇರುವುದು
* ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಲಕ್ಷಾಂತರ ಅನರ್ಹ ಕುಟುಂಬಗಳ ರೇಷನ್ ಕಾರ್ಡ್ ಡಿಲೀಟ್ ಮಾಡಿರುವ ಕಾರಣ ಸಾಕಷ್ಟು ಮಹಿಳೆಯರ ಹೆಸರನ್ನು ಗೃಹಲಕ್ಷ್ಮಿ ಯೋಜನೆಯಿಂದ ಡಿಲೀಟ್ ಮಾಡಲಾಗಿದೆ.
* ಸರ್ಕಾರದ ದೋಷ ಮತ್ತು ಕೆಲವು ತಾಂತ್ರಿಕ ದೋಷಗಳ ಕಾರಣ
* ಮಹಿಳೆಯರ ಬ್ಯಾಂಕ್ ಖಾತೆಯ ವಿವರ ತಪ್ಪಾಗಿರುವುದು
ಈ ರೀತಿಯಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ
ಮೊದಲು https://gruhalakshmischeme.in/ ಅಥವಾ https://dwcd.karnataka.gov.in/41/gruhalakshmi-scheme/en ಗೆ ಭೇಟಿ ಕೊಟ್ಟು, ಮೊಬೈಲ್ ನಂಬರ್ ಹಾಕಿ OTP ನಮೂದಿಸಿ ಲಾಗಿನ್ ಮಾಡಬೇಕು. ನಂತರ Apply for Services ಆಯ್ಕೆ ಮಾಡಿ ಗೃಹ ಲಕ್ಷ್ಮಿ ಯೋಜನೆ ಮೇಲೆ ಕ್ಲಿಕ್ ಮಾಡಬೇಕು. ವಯಕ್ತಿಕ ವಿವರವನ್ನು ಭರ್ತಿ ಮಾಡಿ, ಅಗತ್ಯ ದಾಖಲೆಯನ್ನು (ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್ ಬುಕ್, ಇತ್ಯಾದಿ) ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಸಬೇಕು.

