Gruha Lakshmi: ರೇಷನ್ ಕಾರ್ಡ್ ಇಲ್ಲದವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ…? ಸುಲಭ ವಿಧಾನ.

ರೇಷನ್ ಕಾರ್ಡ್ ಇಲ್ಲದೆ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ.

Gruha Lakshmi Scheme Latest Update: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರುವ ಮುಂಚೆ ಕೆಲವು ಘೋಷಣೆಗಳನ್ನು ಮಾಡಿತ್ತು. ಸಿದ್ದರಾಮಯ್ಯ (Siddaramaiah)ಸರ್ಕಾರ ಘೋಷಣೆ ಮಾಡಿದ 5 ಗ್ಯಾರಂಟಿ ಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.
ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಇನ್ನಷ್ಟು ಸುಲಭಗೊಂಡಿದೆ.

ಈಗ ನೀವು ನೇರವಾಗಿ ಗೃಹ ಲಕ್ಷ್ಮಿ (Gruha Lakshmi)ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದೀಗ ರೇಷನ್ ಕಾರ್ಡ್ (Ration Card)ಇಲ್ಲದವರು ಸಹ ಗೃಹ ಲಕ್ಷ್ಮಿ ಯೋಜನೆಯ ಹಣ ಪಡೆಯುವ ಬಗ್ಗೆ ಮಾಹಿತಿ ಲಭಿಸಿದೆ. 

Gruha Lakshmi Scheme Latest Update
Image Credit: News9live

ರೇಷನ್ ಕಾರ್ಡ್ ಇಲ್ಲದೆ ಗೃಹ ಲಕ್ಷ್ಮಿ ಹಣ ಪಡೆಯುದು ಹೇಗೆ
ರೇಷನ್ ಕಾರ್ಡ್ ಇಲ್ಲದವರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಯಾವುದೇ ಫಲಾನುಭವಿಗಳು ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ, ಗೃಹ ಲಕ್ಷ್ಮಿ ಯೋಜನೆಗೆ ಯಾವುದೇ ಕಡೆ ದಿನಾಂಕ ಇಲ್ಲ, ಇದು ನಿರಂತರವಾದ ಪ್ರಕ್ರಿಯೆ ಆಗಿದೆ.

ಯಾರೆಲ್ಲ ಪಡಿತರ ಚೀಟಿ ಹೊಂದಿಲ್ಲ ಅಥವಾ ಪಡಿತರ ಚೀಟಿಯಲ್ಲಿ ಮಿಸ್ಟೇಕ್ ಇರುವ ಕಾರಣಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಅಂತವರು ರೇಷನ್ ಕಾರ್ಡ್ ತಿದ್ದುಪಡಿಯ ನಂತರ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದಿದ್ದಾರೆ. ಹಾಗೆ ರೇಷನ್ ಕಾರ್ಡ್ ಇಲ್ಲದವರು ಹೊಸದಾಗಿ ರೇಷನ್ ಕಾರ್ಡ್ ಮಾಡಿಸಿಕೊಂಡು ತದನಂತರ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇನ್ನು ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

How to get Gruha Lakshmi money without ration card
Image Credit: Hindustantimes

BPL ಕಾರ್ಡ್ ವಿತರಣೆ

Join Nadunudi News WhatsApp Group

BPL ಪಡಿತರ ಚೀಟಿ ಗೆ ಅರ್ಜಿ ಸಲ್ಲಿಸಿದವರಿಗೆ ಆದಷ್ಟು ಬೇಗ ಕಾರ್ಡ್ ನೀಡುವ ಪ್ರಕ್ರಿಯೆಯನ್ನು ಸರ್ಕಾರ ಮಾಡಲಿದೆ. ಹಾಗೆ ಎಲ್ಲ ಅರ್ಜಿ ಗಳ್ಳನ್ನು ಪರಿಶೀಲನೆ ಮಾಡಿ ವಿತರಿಸಲಾಗುದು ಎಂದು ಸಚಿವ ಮುನಿಯಪ್ಪ (K. H. Muniyappa) ಅವರು ಮಾಹಿತಿ ನೀಡಿದ್ದಾರೆ. ಆದರೆ ಮುಂದಿನ ಆದೇಶದ ವರೆಗೆ ಹೊಸ ರೇಷನ್ ಕಾರ್ಡ್ ಅನ್ನು ಮಂಜೂರು ಮಾಡದಂತೆ ಸರ್ಕಾರ ಆದೇಶ ಹೊರಡಿಸಿದೆ.

Join Nadunudi News WhatsApp Group