Gruha Lakshmi: ರೇಷನ್ ಕಾರ್ಡ್ ನಲ್ಲಿ ಅತ್ತೆ ಅಥವಾ ಸೊಸೆಗೆ ಹಣ ನೀಡುವ ಬಗ್ಗೆ ಸರ್ಕಾರದ ಹೊಸ ಸ್ಪಷ್ಟನೆ
ರೇಷನ್ ಕಾರ್ಡ್ ನಲ್ಲಿ ಅತ್ತೆ ಮತ್ತು ಸೊಸೆ ಇಬ್ಬರು ಇದ್ದರೆ ಗೃಹ ಲಕ್ಷ್ಮಿ ಯೋಜನೆಯ ಹಣ ಯಾರು ಪಡೆದುಕೊಳ್ಳಬೇಕು.
Gruha Lakshmi Latest Update: ಗೃಹ ಲಕ್ಷ್ಮಿ (Gruha Lakshmi) ಯೋಜನೆಯ ಲಾಭ ಪಡೆಯಲು ರಾಜ್ಯದ ಮಹಿಳೆಯರು ಕಾಯುತ್ತಿದ್ದಾರೆ. ಮಾಸಿಕ 2000 ಹಣ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದ್ದು ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.
ಇನ್ನು ಗೃಹ ಲಕ್ಷ್ಮಿ ಯೋಜನೆಯ ಅನುಷ್ಠಾನದ ಕುರಿತಾಗಿ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಲೇ ಇದೆ. ಯೋಜನೆಯ ಲಾಭ ಪಡೆಯಲು ಈಗಾಗಲೇ ಲಕ್ಷಾಂತರ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಈ ಯೋಜನೆಯ ವಿಚಾರವಾಗಿ ಮನೆ ಒಡತಿಯರು ಗೊಂದಲದಲ್ಲಿರುತ್ತಾರೆ.
ಜುಲೈ 20 ರಿಂದ ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಆರಂಭ
ಮನೆ ಒಡತಿಯರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ತೊಂದರೆ ಆಗಬಾರದೆಂದು ಕೆಲವು ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಮನೆ ಯಜಮಾನಿಗೆ ಗೃಹ ಲಕ್ಷ್ಮಿ ಯೋಜನೆಯ ಲಾಭ ನೀಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಲಕ್ಷಾಂತರ ಜನರು ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇನ್ನು ಗೃಹ ಲಕ್ಷ್ಮಿ ಯೋಜನೆಯು ರಾಜ್ಯದ 12.8 ಮಿಲಿಯನ್ ಕುಟುಂಬಗಳಿಗೆ ಲಾಭವನ್ನು ನೀಡಲಿದೆ.
ಪಡಿತರ ಚೀಟಿ, ಆಧಾರ್ ಸಂಖ್ಯೆ, ಪತಿಯ ಆಧಾರ್ ಸಂಖ್ಯೆ, ಬ್ಯಾಂಕ್ ಪಾಸ್ ಪುಸ್ತಕದ ಮಾಹಿತಿ ನೀಡುವ ಮೂಲಕ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಯೋಜನೆಗೆ ಅರ್ಜಿ ಸಲ್ಲಿಸಲು 8147500500 ಸಂಖ್ಯೆಗೆ ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿರುವ ಮೊಬೈಲ್ ನಿಂದ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು SMS ನ ಮೂಲಕ ಕಳುಹಿಸಬೇಕು. ಬಳಿಕ ನಿಮಗೆ VM -SEVSIN ಕರ್ನಾಟಕ ಸರ್ಕಾರದ ವತಿಯಿಂದ ನೀವು ಯಾವ ದಿನಾಂಕದಲ್ಲಿ ಯಾವ ಸಮಯಕ್ಕೆ ಯಾವ ಸ್ಥಳದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎನ್ನುವ ಮೆಸೇಜ್ ನಿಮಗೆ ತಲುಪುತ್ತದೆ.
ಪಡಿತರ ಕಾರ್ಡಿನಲ್ಲಿ ಅತ್ತೆ ಮತ್ತು ಸೊಸೆ ಇಬ್ಬರ ಹೆಸರು ಇದ್ದರೆ ಗೃಹಲಕ್ಷ್ಮಿ ಹಣ ಯಾರಿಗೆ ಸಿಗುತ್ತದೆ
ಗೃಹ ಲಕ್ಷ್ಮಿ ಈ ಯೋಜನೆಯು ಮನೆಯ ಒಡತಿಗೆ ಲಭ್ಯವಾಗುತ್ತದೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ಇನ್ನು ಮನೆಯ ಒಡತಿ ಯಾರು ಎಂದು ಮನೆಯವರೇ ನಿರ್ಧರಿಸಬೇಕೆಗಿದೆ. ಮನೆಯವರ ಆಯ್ಕೆಯ ಮೇಲೆ ಒಬ್ಬರಿಗೆ ಮಾತ್ರ ಹಣ ಲಭಿಸುತ್ತದೆ. ಇನ್ನು ಕೆಲವರ ಮನೆಯಲ್ಲಿ ಅತ್ತೆ ಹಾಗೂ ಸೊಸೆಯ ಮದ್ಯೆ ಈ ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿರಬಹುದು. ಒಂದು ಮನೆಯಲ್ಲಿ ಅತ್ತೆ ಮತ್ತು ಸೊಸೆ ಇಬ್ಬರು ಇದ್ದರೆ ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಯಾರು ಪಡೆಯಬೇಕು ಎಂದು ನಿರ್ಧರಿಸುವುದು ಕಷ್ಟವಾಗುತ್ತದೆ.
ಹೀಗಿರುವಾಗ ಅತ್ತೆ ಹಾಗು ಸೊಸೆಯ ಮದ್ಯೆಯೇ ಜಗಳ ಉಂಟಾಗುತ್ತದೆ. ಇನ್ನು ಪಡಿತರ ಚೀಟಿಯಲ್ಲಿ ಯಾರು ಮುಖ್ಯಸ್ಥೆ ಆಗಿರುತ್ತಾರೋ ಅವರಿಗೆ ಮಾತ್ರ ಗೃಹ ಲಕ್ಷ್ಮಿ ಯೋಜನೆಯ ಲಾಭ ದೊರೆಯುತ್ತದೆ. ಪಡಿತರ ಚೀಟಿಯ ಮುಖ್ಯಸ್ಥೆ ಅತ್ತೆ ಆಗಿರಬೇಕೋ ಅಥವಾ ಸೊಸೆ ಆಗಿರಬೇಕೋ ಎನ್ನುವುದನ್ನು ಮನೆಯವರೇ ನಿರ್ಧರಿಸಬೇಕಾಗುತ್ತದೆ. ಒಂದು ಪಡಿತರ ಚೀಟಿಯ ಆಧಾರ ಮೇರೆಗೆ ಕೇವಲ ಒಬ್ಬರಿಗೆ ಮಾತ್ರ ಈ ಗೃಹ ಲಕ್ಷ್ಮಿ ಯೋಜನೆಯ ಲಾಭ ದೊರೆಯುತ್ತದೆ.