Ads By Google

Gruha Lakshmi: ಈ ಮಹಿಳೆಯರ ಖಾತೆಗೆ ಮುಂದಿನ ತಿಂಗಳು ಗೃಹಲಕ್ಷ್ಮಿ 4000 ರೂ ಹಣ ಜಮಾ ಆಗಲಿದೆ, ಸರ್ಕಾರದ ಆದೇಶ.

Gruha Lakshmi Latest Update (1)

Image Source: Kannada News

Ads By Google

Gruha Lakshmi Latest Update: Gruha Lakshmi ಯೋಜನೆಯ ಅಡಿಯಲ್ಲಿ ರಾಜ್ಯದ ಅರ್ಹ ಮಹಿಳೆಯರ ಖಾತೆಗೆ ಮಾಸಿಕ 2000 ಹಣ ಖಾತೆಗೆ ಜಮಾ ಮಾಡಲಾಗಿದೆ. ಇನ್ನು Gruha Lakshmi ಯೋಜನೆಯ ನಿರೀಕ್ಷಲ್ಲಿದ್ದವರಿಗೆ ರಾಜ್ಯ ಸರ್ಕಾರ August 30 ರಂದು ಖುಷಿ ನೀಡಿತ್ತು. ರಾಜ್ಯದ ಗೃಹಿಣಿಯರ ತನ್ನ ಖಾತೆಗೆ ಲಕ್ಷ್ಮಿ ಆಗಮನದ ಖುಷಿಯಲ್ಲಿದ್ದರು.ಇನ್ನು ಕೆಲ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದರು ಕೂಡ ಯೋಜನೆಯ ಹಣ ಖಾತೆಗೆ ಜಮಾ ಆಗಿಲ್ಲ.

ಈ ಬಗ್ಗೆ ಗೃಹಿಣಿಯರು ಚಿಂತಿಸುತ್ತಿದ್ದಾರೆ. ಇನ್ನು ರಾಜ್ಯ ಸರಕಾರ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗದೆ ಇದ್ದವರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಗೃಹ ಲಕ್ಷ್ಮಿ ಹಣ ಪಡೆಯಲು ಸರ್ಕಾರ ಉತ್ತಮ ಅವಕಾಶವನ್ನು ನೀಡಲು ಮುಂದಾಗಿದೆ. ಪಡಿತರ ಚೀಟಿಯಲ್ಲಿ ತಪ್ಪುಗಳಿಂದಾಗಿ ಕೆಲ ಅರ್ಹ ಮಹಿಳೆಯರಿಗೆ ಯೋಜನೆಯ ಲಾಭ ಲಭಿಸಿಲ್ಲ. ಇಂತಹ ಮಹಿಳೆಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.

Image Source: Hindustan Times

ಇಂತಹ ಮಹಿಳೆಯರ ಖಾತೆಗೆ 2000 ಇನ್ನು ಜಮಾ ಆಗಿಲ್ಲ
ರಾಜ್ಯದಲ್ಲಿ 1.10 ಕೋಟಿ ಗೃಹಿಣಿಯರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದವರ ಖಾತೆಗೆ ಆಗಸ್ಟ್ 30 ರಂದು ಸರ್ಕಾರ ಹಣ ಜಮಾ ಮಾಡಿದೆ. ಆಗಸ್ಟ್ 15 ರೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಈ ತಿಂಗಳ 2000 ರೂ. ಜಮಾ ಆಗಿದೆ. ಆಗಸ್ಟ್ 15 ರ ನಂತರ ಅರ್ಜಿ ಸಲ್ಲಿಸಿದವರಿಗೆ ಮುಂದಿನ ತಿಂಗಳಿಂದ ಮಾಸಿಕ 2000 ರೂ ಜಮಾ ಆಗಲಿದೆ.

ಇನ್ನು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದರು ಕೊಡ ಕೆಲ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ. ಇದಕ್ಕೆ ಕಾರಣ ಪಡಿತರ ಚೀಟಿಯಲ್ಲಿ ಮನೆಯ ಮುಖ್ಯಸ್ಥೆ ಮಹಿಳೆಯಾಗಿಲ್ಲದೆ ಪುರುಷರಾಗಿದ್ದರೆ ಅಂತವರ ಖಾತೆಗೆ ಹಣ ಜಮಾ ಆಗುವುದಿಲ್ಲ. ಈ ನಿಟ್ಟಿನಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ಸರ್ಕಾರ ಇನ್ನಷ್ಟು ಸಮಯಾವಕಾಶವನ್ನು ನೀಡಿದೆ.

Image Source: India Today

ಈ ಮಹಿಳೆಯರ ಖಾತೆಗೆ ಮುಂದಿನ ತಿಂಗಳು ಗೃಹಲಕ್ಷ್ಮಿ 4000 ರೂ ಹಣ ಜಮಾ
ಗೃಹ ಲಕ್ಷ್ಮಿ ಯೋಜನೆಯಡಿ ಅರ್ಹರು ಲಾಭವನ್ನು ಪಡೆಯಲು ರೇಷನ್ ಕಾರ್ಡ್ ನ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿದೆ. ಇನ್ನು ಕೊಡ ಕೆಲವರ ಪಡಿತರ ಚೀಟಿ ತಿದ್ದುಪಡಿ ಆಗಿಲ್ಲ. ಮನೆಯ ಮುಖ್ಯಸ್ಥೆ ಮಹಿಳೆ ಆಗಿಲ್ಲದಿದ್ದರೆ ಅದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕಿದೆ.

ಪಡಿತರ ಚೀಟಿ ತಿದ್ದುಪಡಿಗೆ ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 14 ರವರೆಗೆ ಸರ್ಕಾರ ಕಾಲಾವಕಾಶವನ್ನು ನೀಡಿದೆ. ನಿಗದಿತ ದಿನಾಂಕದೊಳಗೆ Ration Card ತಿದ್ದುಪಡಿ ಮಾಡಿಸಿದರೆ ಮುಂದಿನ ತಿಂಗಳಿನಿಂದ ಸರ್ಕಾರ 4 ಸಾವಿರ ಹಣ ಜಮಾ ಮಾಡಲಿದೆ. ಈ ಮೂಲಕ ಆಗಸ್ಟ್ ನಲ್ಲಿ ಪಡೆಯಬೇಕಿದ್ದ ಮಾಸಿಕ ಹಣವನ್ನು ಮಹಿಳೆಯರು ಸೆಪ್ಟೆಂಬರ್ ನಲ್ಲಿ ಪಡೆಯಬಹುದಾಗಿದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.