Gruha Lakshmi New: ಗೃಹಲಕ್ಷ್ಮೀ ಹಣಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ಕೊನೆಗೂ ಅಂತಿಮ ಸಿಹಿಸುದ್ದಿ, ಸರ್ಕಾರ ಘೋಷಣೆ.
ಗೃಹ ಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿದವರಿಗೆ ಅಗತ್ಯ ಮಾಹಿತಿ.
Gruha Lakshmi Scheme Latest Update: ಕರ್ನಾಟಕ ರಾಜ್ಯದಲ್ಲಿ ಈಗ ಆಡಳಿತದಲ್ಲಿರುವ ಕಾಂಗ್ರೆಸ್ ಸರಕಾರ (Congress Government) ಈ ಬಾರಿ ಚುನಾವಣೆ ಪೂರ್ವದಲ್ಲಿ ಅನೇಕ ಮಹಿಳಾ ಪರ ಯೋಜನೆ ಜಾರಿಗೆ ತರುತ್ತಲೇ ಇದೆ. ಅಂತಹ ಯೋಜನೆಯಲ್ಲಿ ಶಕ್ತಿ ಮತ್ತು ಗೃಹಲಕ್ಷ್ಮೀ ಯೋಜನೆ ಬಹಳ ಮುಂಚುಣಿಯಲ್ಲಿದೆ.
ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತು ಬಹುತೇಕ ಎಲ್ಲರಿಗೆ ಬಂದರೂ ಇನ್ನು ಅನೇಕರಿಗೆ ಹಣ ಬರುವುದು ಬಾಕಿ ಇದೆ. ಈ ನಡುವೆ ಮೊದಲ ಕಂತು ಹಣ ಬರದಿದ್ದವರು ಇಂದಿಗೂ ಕೂಡ ಕಾಯುತ್ತಿದ್ದು ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ಸೂಚನೆ ನೀಡಿದ್ದಾರೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅವರು ನವೆಂಬರ್ 2ರಂದು ವಿಧಾನಸಭೆಯಲ್ಲಿ ನಡೆದ ಗೃಹಲಕ್ಷ್ಮೀ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಕೆಲ ನಿರ್ದಿಷ್ಟ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಅರ್ಜಿದಾರರ ದಾಖಲಾತಿ ಸಮಸ್ಯೆ ಹಾಗೂ ಯೋಜನೆಗೆ ಕೆಲ ತಾಂತ್ರಿಕ ಅಡೆತಡೆ ಕೂಡ ಬಂದಿದ್ದು ತಿಳಿದುಬಂದಿದೆ. ಯೋಜನೆಯ ಫಲಾನುಭವಿಗಳಿಗೆ ಶೀಘ್ರವೇ ಹಣ ಮಂಜೂರು ಮಾಡಬೇಕು ಎಂದು ಸಚಿವೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸರಕಾರದ ಗೃಹಲಕ್ಷ್ಮೀ ಯೋಜನೆಗೆ ಎಲ್ಲ ಅರ್ಹ ಫಲಾನುಭವಿಗಳಿಗೆ ಶೀಘ್ರ ಹಣ ಮಂಜೂರು ಮಾಡಲು ಈಗಾಗಲೇ ಸೂಚಿಸಲಾಗಿದೆ. ಯಾವೆಲ್ಲ ತಾಂತ್ರಿಕ ಸಮಸ್ಯೆ ಬಂದಿದೆ ಅದನ್ನು ಬಗೆಹರಿಸಿ ಹಣ ಮಂಜೂರು ಮಾಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದ್ದು ಶೀಘ್ರ ಹಣ ಮಂಜೂರಾಗಲು ಅವರೆಲ್ಲರ ಕಾರ್ಯ ಶೀಘ್ರ ಆಗಬೇಕು. ಹಾಗಾಗಿ ಹಣ ಬಂದಿಲ್ಲ ಎಂದು ಚಿಂತಿಸುವ ಅಗತ್ಯ ಇಲ್ಲ. ನೀವು ನೀಡಿದ್ದ ದಾಖಲಾತಿ ಮರುಪರಿಶೀಲನೆ ಮಾಡಿಕೊಳ್ಳಿ ಎಂದು ಹೇಳಿದರು.
ಇದುವರೆಗಿನ ಸ್ಥಿತಿ
ಕಳೆದ ಆಗಸ್ಟ್ ನಲ್ಲಿ 88 ರಷ್ಟು ಜನ ಖಾತೆಗೆ ಹಣ ಪಾವತಿಸಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹಂತ ಹಂತವಾಗಿ ಹಣ ಮಂಜೂರಾಗಿದ್ದು ಅಕ್ಟೋಬರ್ ತಿಂಗಳಿನ ಹಣ 100% ಹಣ ಪಾವತಿ ಮಾಡಲಾಗಿದೆ. ಸಂದಾಯವಾಗುವಂತೆ ಕ್ರಮ ಕೈಗೊಳ್ಳಲು ಮುಂದಾಗಲಾಗಿದೆ. ಯೋಜನೆಯ ಸಮರ್ಪಕ ಅನುಷ್ಟಾನಕ್ಕೆ ಸರಕಾರದ ಅನೇಕ ಇಲಾಖೆಯ ಸಹಕಾರ ಕೋರಲಾಗುತ್ತಿದೆ.
ಕಾರ್ಯಕರ್ತೆಯರ ನೆರವು
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಪಡಿತರ ಕಾರ್ಡ್ ಸಮಸ್ಯೆ ಹಾಗೂ ದಾಖಲಾತಿ ಸಮಸ್ಯೆ ಬಗ್ಗೆ ಮನೆ ಮನೆಗೆ ತೆರಳಿ ಮಾರ್ಗದರ್ಶಿಸಲು ತಿಳಿಸಲಾಗಿದ್ದು ಶೀಘ್ರ ಗೃಹಲಕ್ಷ್ಮೀ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ.
ಹಾಗಾಗಿ ಈ ತಿಂಗಳ ಅಂತ್ಯದೊಳಗೆ ಜರ್ನಾಟಕ ರಾಜ್ಯದ ಬಹುತೇಕ ಭಾಗದಲ್ಲಿ ಗೃಹಲಕ್ಷ್ಮೀ ಯೋಜನೆ ಶೀಘ್ರ ಎಲ್ಲರಿಗೂ ತಲುಪಲಿದೆ ಎನ್ನಬಹುದು. ಅದೇ ರೀತಿ ಇನ್ನು ಅನೇಕರಿಗೆ ಗೃಹಲಕ್ಷ್ಮೀ ಅಡಿಯಲ್ಲಿ ಎರಡು ಕಂತಿನ ಹಣ ಬಂದಿದ್ದು ಯೋಜನೆ ಬಹುತೇಕ ಯಶಸ್ವಿ ನಡೆಯತ್ತ ಸಾಗುತ್ತಲಿದೆ ಎಂಬುದರಲ್ಲಿ ಅನುಮಾನ ಇಲ್ಲ.