Gruha Lakshmi Guarantee: ಗೃಹಲಕ್ಷ್ಮಿ ಹಣ ಜಮಾ ಆಗದ ಮಹಿಳೆಯರಿಗೆ ಇನ್ನೊಂದು ಆದೇಶ, ಬೇಗನೆ ಈ ತಪ್ಪು ಸರಿಪಡಿಸಿಕೊಳ್ಳಿ.
ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮಹಿಳೆಯರಿಗೆ ಅಗತ್ಯ ಮಾಹಿತಿ.
Gruha Lakshmi New Update: Congress ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ Gruha Lakshmi ಯೋಜನೆ ಕುರಿತು ದಿನೇ ದಿನೇ ಹೊಸ ಅಪ್ಡೇಟ್ ಲಭಿಸುತ್ತಿದೆ. ಸದ್ಯ ಗೃಹ ಲಕ್ಷ್ಮಿ ಯೋಜನೆಯಡಿ ಇಲ್ಲಿಯವರೆಗೆ 1.10 ಕೋಟಿ ಅರ್ಹ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಅದರಲ್ಲಿ ಕೇವಲ 82 ಲಕ್ಷ ಮಂದಿಗೆ ಹಣ ಜಮಾ ಆಗಿದೆ.
ಇನ್ನುಳಿದ 28 ಲಕ್ಷ ಮಂದಿಗೆ ಇನ್ನು ಕೂಡ ಹಣ ಖಾತೆಗೆ ಜಮಾ ಆಗಿಲ್ಲ. ಇನ್ನು ಕೂಡ ಶೇ. 30 ರಷ್ಟು ಅರ್ಹರಿಗೆ ಹಣ ಜಮಾ ಆಗಬೇಕಿದೆ. ಈಗಾಗಲೇ ಸದ್ಯದಲ್ಲೇ ಅರ್ಹರ ಖಾತೆಗೆ ಹಣ ಜಮಾ ಆಗುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದರು. ಇದೀಗ ಗೃಹ ಲಕ್ಷ್ಮಿ ಹಣ ಜಮಾ ಆಗುವ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದಿದ್ದಿದೆ.
ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತಿಲ್ಲ ಏಕೆ..?
ಆಧಾರ್ ಹಾಗೂ ಬ್ಯಾಂಕ್ ನ ಖಾತೆ ಜೋಡಣೆಯಲ್ಲಿ ವ್ಯತ್ಯಾಸವಾಗಿದ್ದು, ಈ ನಿಟ್ಟಿನಲ್ಲಿ ಅವುಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ. ಇದೆ ವೇಳೆ 1,59,356 ಅರ್ಜಿದಾರರ ಡೆಮೋ ದೃಡೀಕರಣ ವಿಫಲವಾಗಿದ್ದು, 3082 ಅರ್ಜಿದಾರರು ಮರಣ ಹೊಂದಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ. ಇನ್ನು ಬ್ಯಾಂಕ್ ಗಳ ಮೂಲಕ ಫಲಾನುಭವಿಗಳ ಇ- ಕೆವೈಸಿ ಮಾಡಿಸಲು ಇಲಾಖೆ ಕ್ರಮ ವಹಿಸಿದ್ದು, ಶೀಘ್ರದಲ್ಲೇ ಈ ಬಗ್ಗೆ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮಿ ಹಣ ಜಮಾ ಆಗದ ಮಹಿಳೆಯರಿಗೆ ಇನ್ನೊಂದು ಆದೇಶ
*ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ಹಣ ಪಡೆಯಲು Ration Card ಕಡ್ಡಾಯವಾಗಿದೆ. BPL Ration Card ಇಲ್ಲದೆ ಇದ್ದವರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಹೊಸ ಕಾರ್ಡ್ ಬಂದ ಮೇಲೆ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಗಡುವನ್ನು ಸರ್ಕಾರ ವಿಧಿಸಿಲ್ಲ.
*ಇನ್ನು ನಿಮ್ಮ Ration Card ಗೆ ನಿಮ್ಮ Aadhar Card Link ಆಗದೆ ಇದ್ದರು ಕೂಡ ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ. ಆಧಾರ್ ಲಿಂಕ್ ಆಗದೆ ಇದ್ದರೆ ಕೂಡಲೇ ಸರಿಪಡಿಸಿಕೊಳ್ಳಬೇಕಿದೆ.
*ಇನ್ನು ಈಗಾಗಲೇ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದೆ. ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಮಹಿಳೆ ಆಗದಿದ್ದರೆ ಅದನ್ನು ಶೀಘ್ರದಲ್ಲೇ ಸರಿಪಡಿಸಿಕೊಂಡು ನಂತರ ಅರ್ಜಿ ಸಲ್ಲಿಸಬೇಕಿದೆ.