Scheme Update: ಗೃಹಲಕ್ಷ್ಮಿ ಯೋಜನೆಯಲ್ಲಿ ಇನ್ನೊಂದು ಬಿಗ್ ಅಪ್ಡೇಟ್, ಹಣ ಪಡೆಯದ ಮಹಿಳೆಯರು ತಕ್ಷಣ ಈ ಕೆಲಸ ಮಾಡಿ.
ಅರ್ಹ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ರಾಜ್ಯ ಸರಕಾರದ ಹೊಸ ಮಾರ್ಗ.
Gruha Lakshmi News Update: Gruha Lakshmi ಯೋಜನೆ ಅನುಷ್ಠಾನಗೊಂಡು ನಾಲ್ಕು ತಿಂಗಳು ಮುಗಿಯುತ್ತಿದ್ದರು ಕೂಡ ಯೋಜನೆಯ ಅನುಷ್ಠಾನ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯಡಿ 70 % ಅರ್ಹ ಮಹಿಳೆಯರಿಗೆ ಮೂರು ಕಂತುಗಳ 2000 ರೂ. ಗಳನ್ನೂ ಖಾತೆಗೆ DBT ಮೂಲಕ ಜಮಾ ಆಗಿದೆ. ಆದ್ರೆ ಇನ್ನುಳಿಂದ 30 % ಅರ್ಹ ಮಹಿಳೆಯರ ಖಾತೆಗೆ ಇನ್ನು ಕೂಡ ಒಂದು ಕಂತಿನ ಹಣ ಕೂಡ ಜಮಾ ಆಗಿಲ್ಲ.
ಅಷ್ಟಕ್ಕೂ ಯೋಜನೆಯ ಹಣ ಜಮಾ ಆಗವುದು ವಿಳಂಭವಾಗುತ್ತಿರುವುದು ಏಕೆ..? ಎನ್ನುವ ಮಹಿಳೆಯರ ಪ್ರಶ್ನೆಗೆ ಈವರೆಗೂ ಉತ್ತರ ಸಿಗದಂತಾಗಿದೆ. ಮಹಿಳೆಯರು ಇನ್ನು ಕೂಡ ತಮ್ಮ ತಮ್ಮ ಖಾತೆಯನ್ನು ಹಣ ಜಮಾ ಆಗಿದೆಯಾ..? ಅಥವಾ ಇಲ್ಲವ..? ಎಂದು ಚೆಕ್ ಮಾಡಿಕೊಳ್ಳುತ್ತಲೇ ಇದ್ದಾರೆ.
ಯೋಜನೆಯ 2000 ಹಣ ಪಡೆಯುವುದು ಇನ್ನಷ್ಟು ಸುಲಭ
ಇನ್ನು ಕಾಂಗ್ರೆಸ್ ಸರ್ಕಾರ ಘೋಷಣೆ ಹೊರಡಿಸಿದಂತೆ ರಾಜ್ಯದ ಕೋಟ್ಯಾಂತರ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯಡಿ 2000 ರೂ. ಜಮಾ ಆಗಿದೆ. ಆದರೆ ಸರಿಸುಮಾರು 1.9 ಕೋಟಿ ಮಹಿಳೆಯರ ಖಾತೆಗೆ ಮಾತ್ರ ಹಣ ಜಮಾ ಅಗಲಿದ್ದು, ಇನ್ನು 5 ರಿಂದ 6 ಲಕ್ಷ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುವುದು ಭಾಕಿ ಇದೆ. ಸದ್ಯ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಅರ್ಹ ಮಹಿಳೆಯಲು ಹಣವನ್ನು ಪಡೆಯಲು ಹೊಸ ವಿಧಾನವನ್ನು ಕಂಡುಹಿಡಿದೆ. ಈ ಮೂಲಕ ಅರ್ಹರ ಖಾತೆಗೆ ಆದಷ್ಟು ಬೇಗ ಹಣ ಜಮಾ ಮಾಡುವುದಾಗಿ ಭರವಸೆ ನೀಡಿದೆ.
ಗೃಹ ಲಕ್ಷ್ಮಿ ಹಣ ಪಡೆಯಲು ಹೊಸ ರೂಲ್ಸ್
ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗದೆ ಇರುವುದಕ್ಕೆ ತಾಂತ್ರಿಕ ದೋಷವೇ ಕಾರಣ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ. ತಾಂತ್ರಿಕ ದೋಷಗಳನ್ನು ಆದಷ್ಟು ಬೇಗ ಸರಿಪಡಿಸಿ ಶೀಘ್ರದಲ್ಲೇ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಜನರಿಗೆ ಆಶಾವಾಸನೆ ನೀಡಿದೆ. ಈ ತಿಂಗಳೊಳಗೆ ಯೋಜನೆಯ ಹಣ ಸಂಪೂರ್ಣ ಫಲಾನುಭವಿಗಳೇ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗತ್ಯ
ಇನ್ನು ಗೃಹ ಲಕ್ಷ್ಮಿ ಯೋಜನೆಯ ಹಣ ಇನ್ನು ಖಾತೆಗೆ ಜಮಾ ಆಗದೆ ಇದ್ದವರು ತಮ್ಮಾ ದಾಖಲೆಗಳಲ್ಲಿನ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ಮಹಿಳೆಯರು ಗೃಹ ಲಕ್ಷ್ಮಿ ಅರ್ಜಿ ಸಲ್ಲಿಕೆಯ ಸಮಯದಲ್ಲಿ ಆಧಾರ್ ಲಿಂಕ್ ಆಗದ ಬ್ಯಾಂಕ್ ಖಾತೆಯ ವಿವರವನ್ನು ನೀಡಿದ್ದರು.
ಈ ಕಾರಣಕ್ಕೆ ಹಣ ಜಮಾ ಆಗಲು ಸಮಸ್ಯೆ ಎದುರಾಗಿದ್ದು. ಅದರಲ್ಲಿ ಸಾಕಷ್ಟು ಜನರು ಆಧಾರ್ ಲಿಂಕ್ ಮಾಡಿದ್ದೂ ಇನ್ನು ಕೆಲವರು ಮಾಹಿತಿಯನ್ನು ಸರಿಪಡಿಸುವುದು ಭಾಕಿ ಇದೆ. ಹೀಗಾಗಿ ಆದಷ್ಟು ಬೇಗ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದರೆ ಕೆಲವೇ ದಿನಗಳಲ್ಲಿ ಹಣ ಜಮಾ ಆಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.