Gruha Lakshmi scheme Pending Payments: ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಲಕ್ಷ್ಮಿ ಯೋಜನೆ ಮಹತ್ವದ ಯೋಜನೆಯಾಗಿದೆ. ಈ ಗೃಹಲಕ್ಷ್ಮಿ ಯೋಜನೆಯನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ 2023 ರ ಆಗಸ್ಟ್ ನಲ್ಲಿ ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದ 1.2 ಕೋಟಿ ಮಹಿಳೆಯರು ಪ್ರತಿ ತಿಂಗಳು 2000 ರೂ ಹಣವನ್ನ ಪಡೆದುಕೊಳ್ಳುತ್ತಿದ್ದಾರೆ. ಆದರೆ ಕಳೆದ ಕೆಲವು ತಿಂಗಳ ಹಣ ಬಾಕಿ ಉಳಿದುಕೊಂಡಿದ್ದು ಇದು ರಾಜ್ಯದ ಮಹಿಳೆಯರ ಬೇಸರಕ್ಕೆ ಕಾರಣವಾಗಿದೆ. ಈ ನಡುವೆ ರಾಜ್ಯದ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಾಕಿ ಉಳಿದುಕೊಂಡಿರುವ ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಜಮಾ ಆಗುತ್ತದೆ ಅನ್ನುವುದರ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಹಾಗಾದರೆ ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿ ಉಳಿದುಕೊಂಡಿದ್ದು ಏಕೆ ಮತ್ತು ಬಾಕಿ ಉಳಿದುಕೊಂಡ ಹಣ ಯಾವಾಗ ಜಮಾ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಧಾನಸಭೆಯಲ್ಲಿ ಗೃಹ ಲಕ್ಷ್ಮಿ ಯೋಜನೆ ವಿವಾದ
ಬೆಳಗಾವಿ ಅಧಿವೇಶನದಲ್ಲಿ ಗೃಹ ಲಕ್ಷ್ಮಿ ಯೋಜನೆ ದೊಡ್ಡ ವಿವಾದಕ್ಕೆ ಕಾರಣ ಆಗಿದೆ. BJP ಶಾಸಕ Mahesh Tenginakai ಅವರು ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ ಎಂದು ಅಧಿಕೃತ ದಾಖಲೆಗಳೊಂದಿಗೆ ಆರೋಪ ಮಾಡುತ್ತಾರೆ. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ Lakshmi Hebbalkar ಅವರು ಮೊದಲು 2025 ರ ಆಗಸ್ಟ್ ವರೆಗೆ ಎಲ್ಲ ಕಂತುಗಳು ಬಿಡುಗಡೆಯಾಗಿವೆ ಎಂದು ಹೇಳಿದ್ದರು. ನಂತರ ದಾಖಲೆ ನೋಡಿದ ಅವರು ಎರಡು ತಿಂಗಳ ಹಣ ಬಾಕಿ ಇದೆ ಎಂದು ಒಪ್ಪಿಕೊಳ್ಳುತ್ತಾರೆ. ಇದಾದ ನಂತರ ಸಚಿವೆ Lakshmi Hebbalkar ಅವರು ತಪ್ಪು ಮಾಹಿತಿ ನೀಡಿದಕ್ಕೆ ಸದನದಲ್ಲಿ ಕ್ಷಮೆಯನ್ನು ಕೇಳುತ್ತಾರೆ.
ಗೃಹಲಕ್ಷ್ಮಿ ಹಣ ವಿಳಂಬಕ್ಕೆ ಕಾರಣಗಳು
* ಮುಖ್ಯವಾಗಿ ತಾಂತ್ರಿಕ ದೋಷಗಳು – e-KYC, ಆಧಾರ್-ಬ್ಯಾಂಕ್ ಲಿಂಕ್
* ಡೇಟಾ ವ್ಯತ್ಯಾಸಗಳು – ಹೆಸರು, ವಿವರಗಳು
* ಆರ್ಥಿಕ ವರ್ಷದ ಸಮಸ್ಯೆಗಳು
* ಕುಟುಂಬದ BPL ರೇಷನ್ ಕಾರ್ಡ್ ರದ್ದಾಗಿರುವುದು
* ಮಹಿಳೆಯರ ಹೆಸರು ಯೋಜನೆಯಿಂದ ಡಿಲೀಟ್ ಆಗಿರುವುದು
ಬಾಕಿ ಕಂತುಗಳ ಬಿಡುಗಡೆಗೆ ಭರವಸೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ Lakshmi Hebbalkar ಮತ್ತು ಮುಖ್ಯ ಮಂತ್ರಿ Siddaramaiah ಅವರು ಬಾಕಿ ಹಣವನ್ನ ಶೀಘ್ರದಲ್ಲೇ ಜಮಾ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಈಗಾಗಲೇ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಬೇಗನೇ ಜಮಾ ಮಾಡುವ ಕೆಲಸ ನಡೆಯುತ್ತಿದೆ. ಫಲಾನುಭವಿಗಳು DBT Application ನಲ್ಲಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದಾಗಿದೆ.
ಗೃಹಲಕ್ಷ್ಮಿ ಹಣ ವಿಳಂಬದ ಪರಿಣಾಮ
ರಾಜ್ಯದ ಗೃಹಲಕ್ಷ್ಮಿ ಯೋಜನೆ ಎಷ್ಟೋ ಬಡ ಕುಟುಂಬಕ್ಕೆ ಆಥಿಕ ನೆರವನ್ನು ನೀಡಿದೆ. ಈ ವಿಳಂಬ ಬಡ ಕುಟುಂಬಕ್ಕೆ ಸ್ವಲ್ಪ ತೊಂದರೆ ಉಂಟುಮಾಡಿರಬಹುದು. ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ Lakshmi Hebbalkar ಮತ್ತು ಮುಖ್ಯ ಮಂತ್ರಿ Siddaramaiah ಅವರು ಬಾಕಿ ಹಣವನ್ನ ಶೀಘ್ರದಲ್ಲೇ ಜಮಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಹಣ ಯಾವ ದಿನಾಂಕದಂದು ಜಮಾ ಆಗುತ್ತೆ ಅನ್ನುವುದರ ಬಗ್ಗೆ ಸಚಿವರು ಮಾಹಿತಿ ಕೊಟ್ಟಿಲ್ಲ.
ಹೊಸ ಅರ್ಜಿದಾರರಿಗೆ ನೋಂದಣಿ ಆರಂಭ
ಇನ್ನು ಕೂಡ ಹೊಸ ಅರ್ಜಿ ದಾರರಿದ್ದಾರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸೇವಾ ಸಿಂಧು ಪೋರ್ಟಲ್ (https://sevasindhu.karnataka.gov.in/Sevasindhu/Kannada?ReturnUrl=%2F) ಅಥವಾ ಗ್ರಾಂ ಒನ್ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿದೆ.
* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* ಆದಾಯ ಪ್ರಮಾಣ ಪತ್ರ
* ವಿಳಾಸ ಪುರಾವೆ
* ರೇಷನ್ ಕಾರ್ಡ್
ಗೃಹಲಕ್ಷ್ಮಿ ಯೋಜನೆಯ ಪ್ರಮುಖ ಉದ್ದೇಶ
ಗೃಹಲಕ್ಷ್ಮಿ ಯೋಜನೆ ಕರ್ನಾಟಕ ರಾಜ್ಯ ಸರ್ಕಾರ ಪಂಚ ಗ್ಯಾರೆಂಟಿ ಯೋಜನೆಯಲ್ಲಿ ಒಂದು ಯೋಜನೆಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಕುಟುಂಬದ ಮುಖ್ಯಸ್ಥ ಮಹಿಳೆ ಪ್ರತಿ ತಿಂಗಳು 2000 ರೂ ಪಡೆದುಕೊಳ್ಳುತ್ತಾಳೆ. ಈ ಯೋಜನೆಯ ಮೂಲ ಉದ್ದೇಶವೇ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುವುದು. 2023 ರಲ್ಲಿ ಪ್ರಾರಂಭವಾದ ಈ ಯೋಜನೆಯಡಿ ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಮಹಿಳೆಯರು ಈ ಹಣವನ್ನು ಸ್ವಂತ ಕೆಲಸಕ್ಕೆ ಬಳಸಿಕೊಂಡು ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಕರ್ನಾಟಕ ರಾಜ್ಯ ಸರ್ಕಾರ ಸುಮಾರು 28,608 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

