Gruha Lakshmi: ಮಹಿಳೆಯರ ಖಾತೆಗೆ 6000 ರೂ ಜಮಾ ಮಾಡಲು ನಿರ್ಧಾರ ಮಾಡಿದ ಸಿದ್ದರಾಮಯ್ಯ ಸರ್ಕಾರ, ಷರತ್ತುಗಳು ಅನ್ವಯ.

ಗೃಹ ಲಕ್ಷ್ಮಿ ಯೋಜನೆಯ ಹಣ ಇನ್ನು ಸಿಗದ ಮಹಿಳೆಯರಿಗಾಗಿ ಸರ್ಕಾರದ ಹೊಸ ನಿರ್ಧಾರ.

Gruha Lakshmi Scheme Problem In Karnataka: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ Gruha Lakshmi ಯೋಜನೆ ರಾಜ್ಯ ಸರ್ಕಾರಕ್ಕೆ ಒಂದು ರೀತಿಯ ತಲೆನೋವಾಗಿದೆ ಎನ್ನಬಹುದು. ಏಕೆಂದರೆ Gruha Lakshmi ಯೋಜನೆ ರಾಜ್ಯದಲ್ಲಿ ಸರ್ಕಾರ August 30 ರಂದು ಅನುಷ್ಠಾನಗೊಳಿಸಿತ್ತು.ಆದರೆ ಆಗಸ್ಟ್ ನಲ್ಲಿ ಯೋಜನೆಯ ಲಾಭವನ್ನು ಅರ್ಹ ಫಲಾನುಭವಿಗಳು ಸಂಪೂರ್ಣವಾಗಿ ಪಡೆಯಲು ಸಾಧ್ಯವಾಗಿಲ್ಲ.

ಹೀಗಾಗಿ ಈಗಾಲೂ ಕೂಡ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಹಣ ಅರ್ಹರಿಗೆ ತಲುಪಲು ಅನೇಕ ಕ್ರಮ ಕೈಗೊಳ್ಳುತ್ತಿದೆ. ಫಲಾನುಭವಿಗಳು ಯೋಜನೆಗೆ ಅಗತ್ಯವಿರುವ ದಾಖಲೆಗಳನ್ನು ಸರಿಪಡಿಸಿದ್ದರು ಕೂಡ ಯೋಜನೆಯ ಹಣ ಜಮಾ ಆಗುತ್ತಿಲ್ಲ. ಸದ್ಯ ಗೃಹ ಲಕ್ಷ್ಮಿ ಯೋಜನೆಯಿಂದ ವಂಚಿತರಾದ ಮಹಿಳೆಯರು ಸರ್ಕಾರಕ್ಕೆ ಮೇಲಿಂದ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ.

Gruha Lakshmi Scheme New Update
Image Credit: Original Source

ಗೃಹ ಲಕ್ಷ್ಮಿ  ಯೋಜನೆಯ ಹಣ ಜಮಾ ಆಗದೆ ಇರುವುದಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಗೃಹಿಣಿಯರು
ಕಳೆದ ಮೂರು ತಿಂಗಳುಗಳಿಂದ ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು 1.2 ಕೋಟಿ ಗೃಹಿಣಿಯರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಆದರೆ ಯೋಜನೆ ಅನುಷ್ಠಾನಗೊಂಡು ಮೂರು ತಿಂಗಳು ಕಳೆದಿದ್ದರು ಕೂಡ 30% ದಷ್ಟು ಅರ್ಹ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಮಾಸಿಕ 2000 ಹಣ ಜಮಾ ಆಗುತ್ತಿಲ್ಲ.

ಅರ್ಹ ಮಹಿಳೆರಿಗೆ ಹಣ ಏಕೆ ಜಮಾ ಆಗುತ್ತಿಲ್ಲ..? ಎನ್ನುವುದೇ ಉತ್ತರ ಸಿಗದ ಪ್ರಶ್ನೆಯಾಗಿ ಉಳಿದಿದೆ. ಇನ್ನು ಯಲಹಂಕ ತಾಲೂಕಿನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಅರ್ಹರು ಅರ್ಜಿ ಸಲ್ಲಿಸುತ್ತಿದ್ದು, ಸರ್ಕಾರ ಅರ್ಜಿಯನ್ನು ರಿಜೆಕ್ಟ್ ಮಾಡುತ್ತಿದೆ. ಈ ಕಾರಣಕ್ಕೆ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ದಾಖಲೆಗಳನ್ನು ಸರಿಪಡಿಸಿಕೊಂಡು ಹಣ ಜಮಾ ಆಗುತ್ತಿಲ್ಲ. ನಮಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಬರುವುದು ಯಾವಾಗ..? ಎಂದು ಸರ್ಕಾರವನ್ನು ಮಹಿಳೆಯರು ಪ್ರಶ್ನೆ ಮಾಡುತ್ತಿದ್ದಾರೆ.

Gruha Lakshmi Money
Image Credit: Kannada News Today

ಗೃಹ ಲಕ್ಷ್ಮಿ ಹಣ ಜಮಾ ಆಗಲು ಇಂದೇ ಈ ಕೆಲಸ ಮಾಡಿ
ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಇದೀಗ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗದೆ ಇರುವ ಮಹಿಳೆಯರಿಗೆ ಪರ್ಯಾಯ ಮಾರ್ಗವನ್ನು ಕಂಡು ಹಿಡಿದಿದ್ದಾರೆ. ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಗೃಹ ಲಕ್ಷ್ಮಿ ಹಣ ಜಮಾ ಮಾಡುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಹಣವನ್ನು ನೇರವಾಗಿ ಅಂಚೆ ಖಾತೆಗೆ ಜಮಾ ಮಾಡಲಾಗುತ್ತದೆ. ಹೀಗಾಗಿ ರಾಜ್ಯದ ಮಹಿಳೆಯರು ಅಂಚೆ ಇಲಾಖೆಯಲ್ಲಿ ಖಾತೆ ತೆರೆಯುವಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯ ಗೃಹಿಣಿಯರಿಗೆ ಮಾಹಿತಿ ನೀಡಿದ್ದಾರೆ. ನೀವು ಅಂಚೆ ಇಲಾಖೆಯಲ್ಲಿ ಖಾತೆ ತೆರೆದರೆ November 10 ರೊಳಗೆ ಅರ್ಹ ಗೃಹಿಣಿಯರ ಖಾತೆಗೆ ಒಟ್ಟಾಗಿ 6,000 ರೂ. ಜಮಾ ಆಗಲಿದೆ. ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಇಂದೇ ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯುವುದು ಉತ್ತಮ.

Join Nadunudi News WhatsApp Group