Gruha Lakshmi: SMS ಬಂದಿದ್ದು ಖಾತೆಗೆ ಗ್ರಹಲಕ್ಹ್ಮಿ ಹಣ ಬರದವರು ಈ ಕೆಲಸ ಮಾಡಿ.

ಈಗಾಗಲೇ ಅನೇಕ ಫಲಾನುಭವಿ ಮಹಿಳೆಯರ ಖಾತೆಗಳಿಗೆ ₹2,000 ಹಣ ಜಮೆಯಾಗಿದೆ.ಆದರೆ ಬಿಪಿಎಲ್ ಕಾರ್ಡ್​​ನಲ್ಲಿ(BPL Card) ಪುರುಷ ಮುಖ್ಯಸ್ಥರಿದ್ದವರಿಗೆ ಹಣ ಜಮೆ ಆಗಲ್ಲ.

Gruha Lakshmi Money Credit; ಕರ್ನಾಟಕ ಸರ್ಕಾರ ನಾಲ್ಕನೇ ಗ್ಯಾರೆಂಟಿ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆ(Gruha Lakshmi Yojane) ಅಧಿಕೃತವಾಗಿ ಜಾರಿಯಾಗಿದೆ. ಗೃಹಲಕ್ಷ್ಮಿ ಯೋಜನೆಯು ಕರ್ನಾಟಕದಲ್ಲಿ ಪಡಿತರ ಚೀಟಿ ಹೊಂದಿರುವ ಎಲ್ಲಾ ಕುಟುಂಬದ ಯಜಮಾನಿ ಮಹಿಳೆಯರ ಖಾತೆಗೂ ಕೂಡ ಪ್ರತಿ ತಿಂಗಳು 2000ರೂ. ಸಹಾಯಧನವನ್ನು ನೀಡುವ ಯೋಜನೆಯಾಗಿದೆ.ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್‌ನ 4ನೇ ಗ್ಯಾರಂಟಿ ಗೃಹಲಕ್ಷ್ಮಿಗೆ ಯೋಜನೆಗೆ ಕಾಂಗ್ರೆಸ್(Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ.

ಈಗಾಗಲೇ ಅನೇಕ ಫಲಾನುಭವಿ ಮಹಿಳೆಯರ ಖಾತೆಗಳಿಗೆ ₹2,000 ಹಣ ಜಮೆಯಾಗಿದೆ.ಆದರೆ ಬಿಪಿಎಲ್ ಕಾರ್ಡ್​​ನಲ್ಲಿ(BPL Card) ಪುರುಷ ಮುಖ್ಯಸ್ಥರಿದ್ದವರಿಗೆ ಹಣ ಜಮೆ ಆಗಲ್ಲ. ಕಾರ್ಡ್​ ಮುಖ್ಯಸ್ಥರು ಮನೆಯೊಡತಿ ಆಗಿದ್ರೆ ಮಾತ್ರ ಗ್ಯಾರಂಟಿ ಯೋಜನೆಯ ಲಾಭ ಸಿಗಲಿದೆ.BPL ಕಾರ್ಡ್‌ನಲ್ಲಿ ಪುರುಷ ಮುಖ್ಯಸ್ಥರಿದ್ದರೆ ಗ್ಯಾರಂಟಿ ಯೋಜನೆಯ ಲಾಭ ಸಿಗಲ್ಲ. ವಯಸ್ಕ ಮಹಿಳೆ ಇದ್ದೂ ಮುಖ್ಯಸ್ಥ ಪುರುಷರಿದ್ದರೂ ಯೋಜನೆಯ ಫಲಾನುಭವಿಗಳು ಆಗಲು ಸಾಧ್ಯವಿಲ್ಲ.BPL ಕಾರ್ಡ್‌ನಲ್ಲಿ ಮಹಿಳೆ ಮುಖಸ್ಥರಾದ್ರೆ ಮಾತ್ರ ಅನ್ನಭಾಗ್ಯ, ಗೃಹಲಕ್ಷ್ಮಿಗೆ ಅರ್ಹರಾಗುತ್ತಾರೆ. ಕಾರ್ಡ್‌ನಲ್ಲಿ ಹೆಸರು ಬದಲಾವಣೆಗೆ ಸೆ.10ರವರೆಗೆ ಅವಕಾಶ ನೀಡಲಾಗಿದೆ.

Gruha Lakshmi sms
Image Source: India Today

ಕಾರ್ಡ್‌ನಲ್ಲಿ ಹೆಸರು ಬದಲಾವಣೆ ಆಗದಿದ್ದರೆ ಸಿಗಲ್ಲ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ದ ಹಣ ಖಾತೆಗೆ ಜಮೆ ಆಗಲ್ಲ. ಹಾಗಾಗಿ ಯೋಜನೆ ಲಾಭ ಸಿಗಬೇಕಾದ್ರೆ ಮುಖ್ಯಸ್ಥರ ಹೆಸರು ಬದಲಿಸಿಕೊಳ್ಳಬೇಕು.ಗೃಹಲಕ್ಷ್ಮಿ ಹಣ ಯಾವೆಲ್ಲಾ ಮಹಿಳೆಯರ ಖಾತೆಗೆ ಬಂದಿಲ್ಲಾ ಅಥವಾ ಮೆಸೇಜ್‌ ಬರದಿದ್ದರೆ ಹಾಗೇ 2000 ಹಣ ಬರದಿದ್ದರೆ ಅಂತಹವರು ಈ ಒಂದು ಕೆಲಸವನ್ನು ಮಾಡಲೇಬೇಕು. ನಿಮ್ಮ ಅಕೌಂಟ್‌ ಗೆ 2000 ಹಣ ಬರಬೇಕಾದರೆ ಅವರು ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

ಗೃಹಲಕ್ಷ್ಮಿ ಯೋಜನೆಯ 2000 ಹಣ ಈಗಾಗಲೇ ಕೆಲವರಿಗೆ ಬಂದಿದೆ. ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯ ಮೆಸೇಜ್‌ ಗಳು ಬಂದಿವೆ. ಎಲ್ಲರಿಗೂ ಗೊತ್ತಿರುವಂತೆ ಸಾಕಷ್ಟು ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ.ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಆಗ ಖಾತೆಗೆ ಹಣ ಬರದಿದ್ದರೆ ಅಂತಹವರಿಗೆ ಏಕೆ ಹಣ ಬಂದಿರುವುದಿಲ್ಲ ಎಂದು ನೋಡುವುದಾದರೆ, ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡುವಾಗ ಎಲ್ಲರ ಬಳಿ ಆಧಾರ್‌ ಕಾರ್ಡ್‌ ಡೀಟೆಲ್ಸ್‌ ಅನ್ನು ತೆಗೆದುಕೊಂಡಿರುತ್ತಾರೆ. ನೀವು ಆಧಾರ್‌ ಕಾರ್ಡ್‌ ನಲ್ಲಿ DBT NPCI ಮ್ಯಾಪಿಂಗ್‌ ಯಾವ ಬ್ಯಾಂಕ್‌ ಅಕೌಂಟ್‌ ಗೆ ಮಾಡಿಸಿಸದ್ದೀರಾ ಅನ್ನುವುದರ ಮೇಲೆ ಗೃಹಲಕ್ಷ್ಮಿ ಹಣ ಖಾತೆಗೆ ಹಣ ಬರಲಿದೆ.

Gruha Lakshmi sms
Image Source: Asainet Suvarna News

ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸುವುದು ಕಡ್ಡಾಯವಾಗಿದೆ.resident.uidai.gov in ಎಂಬ ವೆಬ್ಸೈಟ್‌ ಗೆ ಭೇಟಿ ನೀಡಿ. ಚೆಕ್‌ ಆಧಾರ್‌ ಸೀಡಿಂಗ್‌ ಸ್ಟೇಟಸ್‌ ಮೇಲೆ ಕ್ಲಿಕ್‌ ಮಾಡಿದ ನಂತರ ನಿಮ್ಮ ಮನೆಯ ಯಜಮಾನಿಯ ಆಧಾರ್‌ ಕಾರ್ಡ್‌ ನಂಬರ್‌ ಹಾಕಿದ ನಂತರ ಸೆಕ್ಯೂರಿಟಿ ಕೋಡ್‌ ಹಾಕಿ ನಂತರ send OTP ಕ್ಲಿಕ್‌ ಮಾಡಿದ ನಂತರ ಆ ಒಂದು ಆಧಾರ್‌ ಗೆ ಲಿಂಕ್‌ ಆಗಿರುವಂತಹ ಒಂದು ಮೊಬೈಲ್‌ ನಂಬರ್‌ ಗೆ OTP ಹೋಗುತ್ತದೆ. OTP ಎಂಟರ್‌ ಮಾಡಿದ ನಂತರ ಸಬ್ಮಿಟ ಮಾಡಿ. ನಂತರ ನಿಮಗೆ ಆಧಾರ್‌ ಮ್ಯಾಪಿಂಗ್‌ ಮೆಸೇಜ್‌ ಬರುತ್ತದೆ. ಅನ್ನಭಾಗ್ಯ ಯೋಜನೆಯ ಹಣ ಬಂದಿದ್ದರೆ ಈ ಹಣ ಕೂಡ ಖಾತೆಗೆ ಬರುತ್ತದೆ. ಇನ್ನು ಲಕ್ಷಾಂತರ ಮಹಿಳೆಯರ ಖಾತೆಗೆ ನಿಧಾನವಾಗಿ ಹಣ ಜಮಾ ಆಗುತ್ತದೆ. ನಿಮ್ಮ ಖಾತೆಗೆ ಜಮಾ ಆಗದಿದ್ದರೆ ಸ್ವಲ್ಪ ದಿನಗಳ್ಲಲಿ ಜಮಾ ಆಗುವ ಸಾಧ್ಯತೆ ಇದೆ.

Join Nadunudi News WhatsApp Group

Join Nadunudi News WhatsApp Group