Gruha Lakshmi: ಕೆಲವು ಮಹಿಳೆಯರ ಖಾತೆಗೆ ಏಕೆ ಜಮಾ ಆಗುತ್ತಿಲ್ಲ ಗೃಹಲಕ್ಷಿ 2000 ರೂ, ಸ್ಪಷ್ಟನೆ ನೀಡಿದ ಸರ್ಕಾರ

ಮಹಿಳೆಯರಿಗೆ ಏಕೆ ಜಮಾ ಆಗುತ್ತಿಲ್ಲ ಗೃಹ ಲಕ್ಷ್ಮಿ ಮಾಸಿಕ ಹಣ.

Gruha Lakshmi Yojana Money Not Credit: ರಾಜ್ಯ ಸರ್ಕಾರದ ಮಹತ್ವಾಕಾಂಶೆಯ ಯೋಜನೆಯಾದ Gruha Lakshmi ಯೋಜನೆಯು ಜಾರಿಯಾಗಿ ಆರು ತಿಂಗಳು ಕಳೆದಿದ್ದು, ಸರ್ಕಾರ ಆರು ತಿಂಗಳ ಹಣವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡಿದೆ. ಯೋಜನೆ ಅನುಷ್ಠಾನಗೊಂಡ ಸಮಯದಲ್ಲಿ ಗೃಹ ಲಕ್ಷ್ಮಿ ಅಷ್ಟು ಅರ್ಜಿದಾರರಿಗೆ ಯೋಜನೆಯ ಹಣವನ್ನು ತಲುಪಿಸಲು ಆಗಿರಲಿಲ್ಲ.

ನಂತರ ಸರ್ಕಾರ ವಿವಿಧ ರೀತಿಯ ಕ್ರಮ ಕೈಗೊಳ್ಳುವ ಮೂಲಕ ಇದೀಗ 90 % ದಷ್ಟು ಅರ್ಹರಿಗೆ ಹಣವನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು. ಇನ್ನು ಕೂಡ ಹಣ ಜಮಾ ಆಗದೆ ಇರುವ ಮಹಿಳೆಯರಿಗೆ ಆದಷ್ಟು ಬೇಗ ಹಣ ಜಮಾ ಆಗುವುದಾಗಿ ಸರ್ಕಾರ ಹೇಳಿಕೆ ನೀಡಿದೆ. ಇನ್ನು ಕೆಲ ಮಹಿಳೆಯರಿಗೆ ಗೃಹ ಲಕ್ಷ್ಮಿ ಹಣ ಯಾಕೆ ತಲುಪುತ್ತಿಲ್ಲ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Gruha Lakshmi Latest Update
Image Credit: Hindustan Times

ಮಹಿಳೆಯರಿಗೆ ಏಕೆ ಜಮಾ ಆಗುತ್ತಿಲ್ಲ ಗೃಹ ಲಕ್ಷ್ಮಿ ಮಾಸಿಕ ಹಣ
ತಾಂತ್ರಿಕ ದೋಷಗಳ ಕಾರಣ ಯೋಜನೆಯ ಹಣವನ್ನು ಅರ್ಹರ ಖಾತೆಗೆ ತಲುಪಿಸಲು ಸರ್ಕಾರಕ್ಕೆ ಕಷ್ಟವಾಗುತ್ತಿದೆ ಎನ್ನಬಹುದು. ಆದರೂ ಕೆಲ ಅರ್ಹ ಫಲಾನುಭವಿಗಳು ಸರ್ಕಾರದ ನಿಯಮಾನುಸಾರ ಎಲ್ಲ ರೀತಿಯ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳದಿರುವುದು ಹಣ ಜಮಾ ಆಗದೆ ಇರಲು ಮುಖ್ಯ ಕಾರಣ ಎನ್ನಬಹುದು. ಸದ್ಯ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಫಲಾನುಭವಿಗಳಿಗೆ NPCI ಕಡ್ಡಾಯಗೊಳಿಸಿದೆ. ಫಲಾನುಭವಿಗಳು NPCI Link ಮಾಡಿಸುವಲ್ಲಿ ಬ್ಯುಸಿ ಆಗಿದ್ದಾರೆ ಎನ್ನಬಹುದು. NPCI ಪೂರ್ಣಗೊಳಿಸದ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದಿಲ್ಲ ಎಂದು ಹೇಳಬಹುದು.

ಸರ್ಕಾರದಿಂದ 6 ನೇ ಕಂತಿನ ಹಣ ಬಿಡುಗಡೆ
ಇನ್ನು ರಾಜ್ಯ ಸರ್ಕಾರ ಫೆ. 8 ರಂದು 6 ನೇ ಕಂತಿನ ಹಣ ಜಮಾ ಮಾಡಿದೆ. ಈಗಾಗಲೇ ಕೆಲ ಫಲಾನುಭವಿಗಳ ಖಾತೆಗೆ 6 ನೇ ಕಂತಿನ ಹಣ ಜಮಾ ಆಗಿರಬಹುದು. ಹಣ ಜಮಾ ಆಗದೆ ಇರುವ ಫಲಾನುಭವಿಗಳಿಗೆ ಫೆ. ಕೊನೆಯ ವಾರದೊಳಗೆ ಹಣ ಜಮಾ ಮಾಡುವುದಾಗಿ ಸರ್ಕಾರ ಘೋಷಣೆ ಹೊರಡಿಸಿದೆ.

Gruha Lakshmi 6th Instalment Money
Image Credit: Original Source

ಇನ್ನು ಗೃಹ ಲಕ್ಷ್ಮಿ ಫಲಾನುಭವಿಗಳು ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ತಿಳಿಯಲು ಬ್ಯಾಂಕ್ ಗೆ ಹೋಗಿ ಪಾಸ್ ಬುಕ್ ಎಂಟ್ರಿ ಮಾಡಿಸಿಕೊಳ್ಳುವುದು ಸೂಕ್ತ. ಏಕೆಂದರೆ ಕೆಲ ಮಹಿಳೆಯಯರಿಗೆ ಹಣ ಜಮಾ ಆಗಲಿರುವ ಬಗ್ಗೆ ಸಂದೇಶ ಬರದೇ ಇರಬಹುದು. ಅಂತವರು ತಮ್ಮ ಬ್ಯಾಂಕ್ ಖಾತೆಗೆ ಭೇಟಿ ನೀಡಿ ಸ್ಟೇಟಸ್ ಪರಿಶೀಲಿಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.

Join Nadunudi News WhatsApp Group

ಆನ್ಲೈನ್ ನಲ್ಲಿ ಈ ರೀತಿಯಾಗಿ ನಿಮ್ಮ ಪೇಮೆಂಟ್ ಸ್ಟೇಟಸ್ ಪರಿಶೀಲಿಸಿಕೊಳ್ಳಿ
•ಮೊದಲನೇದಾಗಿ ನಿಮ್ಮ ಸ್ಮಾರ್ಟ್ಫೋನ್ ನಲ್ಲಿ DBT Karnataka App ಅನ್ನು ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು,

•ನಂತರ ಡೌನ್ಲೋಡ್ ಆದ ಅಪ್ಲಿಕೇಶನ್ ಅನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ.

•ಇದಾದ ನಂತರ ಮಹಿಳೆಯ ಆಧಾರ್ ನಂಬರ್ ಅನ್ನು ನಮೂದಿಸಬೇಕು,

Gruha Lakshmi Status Check
Image Credit: Karnataka Times

•ಆಗ ನೋಂದಾವಣೆ ಆಗಿರುವ ಮೊಬೈಲ್ ನಂಬರ್ ಗೆ ಒಂದು OTP ಬರುತ್ತದೆ, ಅದನ್ನು ನಮೂದಿಸಬೇಕು.

•ನಂತರ ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಆಗಲು ನೀವು ನಾಲ್ಕು ಪಿನ್ ಬಳಸಬೇಕಾಗುತ್ತದೆ. ನಂತರ ಇದನ್ನು ಮತ್ತೆ ವೆರಿಫಿಕೇಷನ್ ಮಾಡಿಕೊಳ್ಳಬೇಕಾಗುತ್ತದೆ.

•ಕೊನೆಗೆ ಸಬ್ಮಿಟ್ ಆಯ್ಕೆ ಕೊಟ್ಟರೆ ಪೇಮೆಂಟ್ ಪುಟ ತೆರೆದುಕೊಳ್ಳುತ್ತದೆ. ಆಗ ನಿಮ್ಮ ಖಾತೆಗೆ ಆರನೇ ಕಂತಿನ ಹಣ ಜಮಾ ಆಗಿದೆಯೇ ಎನ್ನುವ ಸಂಪೂರ್ಣ ಮಾಹಿತಿ ತಿಳಿಯುತ್ತದೆ.

Join Nadunudi News WhatsApp Group