Gruhalakshmi Co-Operative Bank Loan: ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಇನ್ನೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಮಹಿಳೆಯರು ಈಗ ಕರ್ನಾಟಕ ರಾಜ್ಯ ಸರ್ಕಾರದಿಂದ ಅತೀ ಕಡಿಮೆ ಬಡ್ಡಿಗೆ 30 ಸಾವಿರದಿಂದ 3 ಲಕ್ಷ ರೂಪಾಯಿಯ ತನಕ ಸಾಲ ಪಡೆದುಕೊಳ್ಳಬಹುದು. ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2000 ರೂ ಹಣ ಪಡೆದುಕೊಳ್ಳುತ್ತಿರುವ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಮಲ್ಟಿಪರ್ಪಸ್ ಕೋಆಪರೇಟಿವ್ ಸೊಸೈಟಿಯ ಮೂಲಕ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ 3 ಲಕ್ಷ ರೂಪಾಯಿವರೆಗೆ ಸಾಲ ನೀಡುತ್ತಿದೆ. ಹಾಗಾದರೆ ಈ ಯೋಜನೆ ಯಾವುದು ಮತ್ತು ಈ ಯೋಜನೆಯ ಅರ್ಹತಾ ನಿಯಮಗಳು ಏನು ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
ಗೃಹಲಕ್ಷ್ಮಿ ಯೋಜನೆಯ ಸಾಲ ಸೌಲಭ್ಯ
ಸಣ್ಣ ವ್ಯಾಪಾರ, ಸ್ವ ಉದ್ಯೋಗ ಅಥವಾ ತುರ್ತು ಸಂದರ್ಭಗಳಿಗಾಗಿ ಮಹಿಳೆಯರು ಈಗ ಗೃಹಲಕ್ಷ್ಮಿ ಸಂಘದ ಮೂಲಕ ಸಾಲ ಪಡೆದುಕೊಳ್ಳಬಹುದು. ಈ ಯೋಜನೆಯು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮಾತ್ರ ಸೀಮಿತವಾಗಿದ್ದು ಮಹಿಳೆಯರು ಗೃಹಲಕ್ಷ್ಮಿ ಸಹಕಾರಿ ಸಂಘಕ್ಕೆ ಸೇರುವುದರ ಮೂಲಕ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಮಹಿಳೆಯರು ಈ ಸಂಘಗಳ ಮೂಲಕ ಅತೀ ಕಡಿಮೆ ಬಡ್ಡಿಗೆ ಸಾಲ ಪಡೆದುಕೊಳ್ಳಬಹುದು. ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಭಿಯಾಗಿ ಮಾಡಬೇಕು ಅನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಯೋಜನೆಯ ಅರ್ಹತೆ ಮತ್ತು ನಿಯಮಗಳು
* ಕರ್ನಾಟಕ ಖಾಯಂ ನಿವಾಸಿ ಆಗಿರಬೇಕು
ಕರ್ನಾಟಕ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಸಹಕಾರಿ ಸಂಘದ ಅಡಿಯಲ್ಲಿ ಸಾಲ ಪಡೆದುಕೊಳ್ಳಬೇಕು ಅಂದರೆ ಅರ್ಜಿ ಸಲ್ಲಿಸುವ ಮಹಿಳೆ ಖಾಯಂ ಕರ್ನಾಟಕದ ನಿವಾಸಿಯಾಗಿರುವುದು ಕಡ್ಡಾಯ.
* ಗೃಹಲಕ್ಷ್ಮಿ ಫಲಾನುಭವಿ ಆಗಿರಬೇಕು
ಕರ್ನಾಟಕ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಸಂಘದ ಮೂಲಕ 3 ಲಕ್ಷ ರೂಪಾಯಿ ತನಕ ಸಾಲ ಪಡೆಯುವ ಮಹಿಳೆ ಕಡ್ಡಾಯವಾಗಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಆಗಿರಬೇಕು.
* ಆದಾಯ ಮಿತಿ ಹೊಂದಿರುವುದು ಕಡ್ಡಾಯ
ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು. ಆದಾಯ ತೆರಿಗೆ ಅಥವಾ GST ಫೈಲ್ ಮಾಡದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
*ಕೆಲವು ಇತರೆ ನಿಯಮಗಳು
ಕುಟುಂಬದಲ್ಲಿ ಒಬ್ಬ ಮಹಿಳೆ ಮಾತ್ರ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಕೇಂದ್ರ ಅಥವಾ ರಾಜ್ಯ ಸರ್ಕಾರದ ಇತರ ಯೋಜನೆಯಿಂದ ಸಹಾಯಧನ ಪಡೆದುಕೊಂಡಿರಬಾರದು.
ಸಾಲದ ಬಡ್ಡಿದರದ ವಿವರ
ಸರ್ಕಾರೀ ಮತ್ತು ಖಾಸಗಿ ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಅತೀ ಕಡಿಮೆ ಬಡ್ಡಿ ದರದಲ್ಲಿ ಈ ಯೋಜನೆಯಲ್ಲಿ ಮಹಿಳೆಯರು ಸಾಲ ಪಡೆದುಕೊಳ್ಳಬಹುದು. ಸಣ್ಣ ವ್ಯಾಪಾರ, ಕೃಷಿ ಅಥವಾ ತುರ್ತು ಅಗತ್ಯಗಳಿಗೆ ಬಳಸಬಹುದು ಮತ್ತು EMI ಮೂಲಕ ಹಣ ಮರುಪಾವತಿ ಮಾಡಬೇಕು. ರಾಜ್ಯದಲ್ಲಿ ಕೋಟಿಗೂ ಅಧಿಕಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಾರೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

