Gruha lakshmi New: ಇಂತಹ ಮಹಿಳೆಯರ ಖಾತೆಗೆ ಬರಲಿದೆ ಗೃಹಲಕ್ಷ್ಮಿ ಯೋಜನೆಯ 4000 ರೂ, ಈ ಕೆಲಸ ಮಾಡಿದರೆ ಮಾತ್ರ.
ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗದೆ ಇರುವ ಮಹಿಳೆಯರಿಗೆ ಮಹತ್ವದ ಸಂದೇಶ ನೀಡಿದೆ.
Gruha Lakshmi Yojana Rule And Regulations: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ Gruha Lakshmi ಯೋಜನೆಯ ಕುರಿತು ಮಹಿಳೆಯರು ಹೆಚ್ಚು ಯೋಚಿಸುವಂತಾಗಿದೆ. ಇದಕ್ಕೆ ಕಾರಣ ಯೋಜನೆಯ ಲಾಭ ಎಲ್ಲಾ ಅರ್ಹ ಮಹಿಳೆಯರಿಗೆ ತಲುಪಿದೆಯೇ ಇರುವುದಾಗಿದೆ.
ಈಗಾಗಲೇ Gruha Lakshmi ಯೋಜನೆಯಡಿ ಕೆಲ ಮಹಿಳೆಯರು ಎರಡು ತಿಂಗಳ ಹಣವನ್ನು ಪಡೆದಿದ್ದಾರೆ. ಆದರೆ ಇನ್ನು ಕೂಡ 30 % ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ. ಯೋಜನೆಯಿಂದ ವಂಚಿತರಾಗುವ ಭೀತಿ ಮಹಿಳೆಯರಲ್ಲಿ ಹೆಚ್ಚಿದೆ ಎನ್ನಬಹುದು. ಇದೀಗ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗದೆ ಇರುವ ಮಹಿಳೆಯರಿಗೆ ಮಹತ್ವದ ಸಂದೇಶ ನೀಡಿದೆ.
ಇಂತಹ ಮಹಿಳೆಯರ ಖಾತೆಗೆ ಬರಲಿದೆ ಗೃಹಲಕ್ಷ್ಮಿ ಯೋಜನೆಯ 4000 ರೂ.
ನೀವು ಈ ರೀತಿ ಮಾಡಿದರೆ ಸಾಕು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಯಾವುದೇ ಸಮಸ್ಯೆ ಇಲ್ಲದೆ ಜಮಾ ಆಗುತ್ತದೆ. ನೀವು ಈ ಎಲ್ಲ ದಾಖಲೆಗಳು ಸರಿ ಇದೆಯಾ? ಎನ್ನುವುದನ್ನು ನೋಡಿಕೊಳ್ಳಬೇಕು. ಗೃಹ ಲಕ್ಷ್ಮಿ ಯೋಜನೆಗೆ ಬೇಕಾಗುವ ಅಗತ್ಯ ದಾಖಲೆಗಳಲ್ಲಿ ಯಾವುದೇ ದಾಖಲೆ ಸರಿ ಇಲ್ಲದಿದ್ದರೂ ಕೂಡ ಹಣ ಜಮಾ ಆಗಲು ತೊಂದರೆಯಾಗುತ್ತದೆ.ಈ ಕೆಲಸವನ್ನು ನೀವು ಪೂರ್ಣಗೊಳಿಸಿದರೆ ಒಂದೇ ಬಾರಿಗೆ ಗೃಹಲಕ್ಷ್ಮಿಯ 4000 ಹಣವನ್ನು ಪಡೆಯಬಹುದು.
ಗೃಹಲಕ್ಷ್ಮಿ ಯೋಜನೆಯ 4000 ರೂ. ಪಡೆಯಲು ಇಂದೇ ಈ ಕೆಲಸ ಮಾಡಿ
*BPL Ration Card Mandatory
ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ಹಣ ಪಡೆಯಲು Ration Card ಕಡ್ಡಾಯವಾಗಿದೆ. BPL Ration Card ಇಲ್ಲದೆ ಇದ್ದವರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಹೊಸ ಕಾರ್ಡ್ ಬಂದ ಮೇಲೆ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಗಡುವನ್ನು ಸರ್ಕಾರ ವಿಧಿಸಿಲ್ಲ.
*Aadhaar Card E -KYC
ಇನ್ನು ಗೃಹ ಲಕ್ಷ್ಮಿ ಯೋಜನೆಯಾ ಮಾಸಿಕ 2000 ಹಣ ನಿಮ್ಮ ಖಾತೆಗೆ ಜಮಾ ಆಗಬೇಕಿದ್ದರೆ ನೀವು ಮುಖ್ಯವಾಗಿ Aadhaar E -KYC ಅಪ್ಡೇಟ್ ಮಾಡುವುದು ಅವಶ್ಯಕವಾಗಿದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದರೆ ಮಾತ್ರ DBT ಮೂಲಕ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.
* Aadhar Card Link To Ration Card
ಇನ್ನು ನಿಮ್ಮ Ration Card ಗೆ ನಿಮ್ಮ Aadhar Card Link ಆಗದೆ ಇದ್ದರು ಕೂಡ ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ. ಆಧಾರ್ ಲಿಂಕ್ ಆಗದೆ ಇದ್ದರೆ ಕೂಡಲೇ ಸರಿಪಡಿಸಿಕೊಳ್ಳಬೇಕಿದೆ.
*Amendment of Ration Card
ಇನ್ನು ಈಗಾಗಲೇ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದೆ. ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಮಹಿಳೆ ಆಗದಿದ್ದರೆ ಅದನ್ನು ಶೀಘ್ರದಲ್ಲೇ ಸರಿಪಡಿಸಿಕೊಂಡು ನಂತರ ಅರ್ಜಿ ಸಲ್ಲಿಸಬೇಕಿದೆ.