Gruha Lakshmi : ಗ್ರಹಲಕ್ಹ್ಮಿ ಯೋಜನೆಗೆ ಅರ್ಜಿ ಹಾಕಿ ಹಣ ಬರುತ್ತೆ ಅಂದುಕೊಂಡಿದ್ದವರಿಗೆ ನಿರಾಸೆ,ರಾಜ್ಯ ಸರ್ಕಾರದ ಹೊಸ ಸೂಚನೆ

ಗೃಹ ಲಕ್ಷ್ಮಿ(Gruha Lakshmi) ಗ್ಯಾರಂಟಿ ಯೋಜನೆಯಡಿ 2 ಸಾವಿರ ರೂ. ಪಡೆಯುವುದು ಇನ್ನೂ ಕೆಲದಿನ ವಿಳಂಬವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Gruha Lakshmi Yojane: ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಗೆ ಈ ತಿಂಗಳಿನಿಂದ ಚಾಲನೆ ಸಿಕ್ಕಿದ್ದು, ಜನರು ಸಂತೋಷ ಪಡುತ್ತಿದ್ದಾರೆ. ಆದರೆ ಮಹಿಳೆಯರು ನಿರೀಕ್ಷೆಯಿಂದ ಕಾಯುತ್ತಿದ್ದ. ಗೃಹ ಲಕ್ಷ್ಮಿ(Gruha Lakshmi) ಗ್ಯಾರಂಟಿ ಯೋಜನೆಯಡಿ 2 ಸಾವಿರ ರೂ. ಪಡೆಯುವುದು ಇನ್ನೂ ಕೆಲದಿನ ವಿಳಂಬವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಹೌದು, ಈ ಮೂಲಕ ಇದೇ ಸ್ವಾತಂತ್ಯ ದಿನಚರಣೆಯಂದು ತಮ್ಮ ಖಾತೆಗೆ ಹಣ ಬರಲಿದೆ ಎನ್ನುವ ರಾಜ್ಯದ ಗೃಹ ಲಕ್ಷ್ಮೀ ಯವರುಗೆ ನಿರಾಸೆ ಎದುರಾಗಿದೆ.

ಸದ್ಯ ಈ ಮಹತ್ವದ ಯೋಜನೆಗೆ ಸರ್ಕಾರ ಈಗಾಗಲೇ ಚಾಲನೆ ನೀಡಿದೆ ಆದರೆ ಸರಕಾರ ಬಯಸಿದಂತೆ ಶೀಘ್ರವಾಗಿ ಹಣ ಅಕೌಂಟ್ ಗೆ ಬೀಳುವುದು ತಡವಾಗಲಿದೆ. ಕನಿಷ್ಠ ಒಂದು ವಾರ ಅಥವಾ 12 ದಿನ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2,000 ರೂ.ಗಳ ನೆರವು ನೀಡುವುದಾಗಿ ಕರ್ನಾಟಕ ಕಾಂಗ್ರೆಸ್ ಭರವಸೆ ನೀಡಿತ್ತು.

Gruha lakshmi
Image Source: Hosakannada

ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಬಿಪಿಎಲ್/ಎಪಿಎಲ್/ಅಂತ್ಯೋದಯ ಕಾರ್ಡ್ ನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/- ಗಳನ್ನು DBT ಮೂಲಕ ನೀಡುವ ಯೋಜನೆಯಾಗಿದೆ ಕುಟುಂಬದ ಯಜಮಾನಿಯು ಆರ್ಥಿಕವಾಗಿ ಸಬಲವಾಗಿ ತನ್ನ ಕುಟುಂಬವನ್ನು ನಿಭಾಯಿಸಲು ಈ ಹಣ ನೆರವಿಗೆ ಬರಲಿದೆ.

ಯೋಜನಾ ಪ್ರಮುಖ ಅಂಶಗಳು:

ಅರ್ಜಿದಾರರು 16-06-2023 ರಿಂದ ಅರ್ಜಿ ಸಲ್ಲಿಸಬಹುದಾಗಿರುತ್ತದೆ. • ಅರ್ಜಿಗಳನ್ನು ಆನ್‌ಲೈನ್ ಮೂಲಕ ಅಥವಾ ಭೌತಿಕವಾಗಿ ಗ್ರಾಮ ಒನ್/ಬೆಂಗಳೂರು ಒನ್/ಕರ್ನಾಟಕ ಒನ್ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಸಲ್ಲಿಸಬಹುದಾಗಿದೆ.

Join Nadunudi News WhatsApp Group

ಅರ್ಜಿ ಸಲ್ಲಿಕೆಗೆ SMS ಮೂಲಕ ಹಾಗೂ ಸೇವಾಸಿಂಧು ಪೋರ್ಟಲ್ ಮೂಲಕ Auto generated ಸ್ವೀಕೃತಿಗಳನ್ನು ಪಡೆಯಬಹುದಾಗಿದೆ

ಅರ್ಜಿ ಸಲ್ಲಿಸಲು ಅರ್ಜಿದಾರರ ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು ಅಗತ್ಯವಾಗಿರುತ್ತದೆ.

ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಸಂಪೂರ್ಣ ಉಚಿತವಾಗಿರುತ್ತದೆ. ವಿಧಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ಹಣ ಕೇಳಿದ್ರೆ ದೂರು ದಾಖಲು ಮಾಡಬಹುದು.
ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ.

Gruha lakshmi
Image Source: India Today

Join Nadunudi News WhatsApp Group