Reason For Gruha Lakshmi Scheme Money Not Credit: ಕರ್ನಾಟಕ ರಾಜ್ಯ ಸರ್ಕಾರದ ಬಹುದೊಡ್ಡ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯದ ಪ್ರತಿ ಕುಟುಂಬದ ಒಬ್ಬ ಮಹಿಳೆಯ ಖಾತೆಗೆ ಪ್ರತಿ ತಿಂಗಳು 2000 ರೂ ಹಣ ಜಮಾ ಮಾಡುವ ಕೆಲಸ ಮಾಡಲಾಗುತ್ತಿದೆ. ಆದರೆ ಕಳೆದ ಕೆಲವು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಲು ವಿಳಂಬ ಆಗುತ್ತಿದೆ. ಗೃಹಲಕ್ಷ್ಮಿ ಹಣ ಬಿಡುಗಡೆ ಆದರೂ ಕೂಡ ಕೆಲವು ಮಹಿಳೆಯರ ಖಾತೆಗೆ ಜಮಾ ಆಗುತ್ತಿಲ್ಲ ಎಂದು ಸಾಕಷ್ಟು ಮಹಿಳೆಯರು ಆರೋಪ ಮಾಡಿದ್ದಾರೆ. ಹಾಗಾದರೆ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗದೆ ಇರಲು ಕಾರಣ ಏನು..? ಯಾವ ತಪ್ಪು ಸರಿಪಡಿಸಿಕೊಳ್ಳಬೇಕು ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
ಬ್ಯಾಂಕ್ ಖಾತೆಗೆ ಹಣ ಜಮಾ ಆಗದೆ ಇರಲು ಕಾರಣಗಳು ಮತ್ತು ಪರಿಹಾರ
* ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದಿರುವುದು
ಕೆಲವು ಮಹಿಳೆಯರು ಬ್ಯಾಂಕ್ ಖಾತೆಗೆ ಇನ್ನೂ ಕೂಡ ಆಧಾರ್ ಸಂಖ್ಯೆ ಲಿಂಕ್ ಮಾಡದೆ ಇರುವುದು ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದೆ ಇರುವುದಕ್ಕೆ ಒಂದು ಪ್ರಮುಖವಾದ ಕಾರಣವಾಗಿದೆ. ಸರ್ಕಾರದ ಮಾಹಿತಿಯ ಪ್ರಕಾರ ಸುಮಾರು 6 ಲಕ್ಷ ಮಹಿಳೆಯರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆಯರು ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.
* ಆಧಾರ್, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್‌ನಲ್ಲಿ ಹೆಸರಿನ ವ್ಯತ್ಯಾಸ
ಸಾಕಷ್ಟು ಮಹಿಳೆಯರು ಆಧಾರ್ ಮತ್ತು ರೇಷನ್ ಕಾರ್ಡಿನಲ್ಲಿ ಒಂದು ಹೆಸರು ಮತ್ತು ಬ್ಯಾಂಕ್ ಪಾಸ್ ಬುಕ್ ನಲ್ಲಿ ಒಂದು ಹೆಸರು ಒಂದು ಹೊಂದಿದ್ದಾರೆ. ಉದಾಹರಣೆಗೆ, ಆಧಾರ್ ಮತ್ತು ರೇಷನ್ ಕಾರ್ಡಿನಲ್ಲಿ ಗೌರಿ ಅಂತ ಹೆಸರಿದ್ದರೆ ಬ್ಯಾಂಕ್ ಪಾಸ್ ಬುಕ್ಕಿನಲ್ಲಿ ಗೌರಮ್ಮ ಅಂತ ಹೆಸರು ಇರುವುದು. ಬ್ಯಾಂಕ್ ಖಾತೆಯ ಹೆಸರು ಸರಿಪಡಿಸಿಕೊಳ್ಳುವುದರ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬಹುದು.
* KYC ನವೀಕರಣ ಮಾಡದೆ ಇರುವುದು
ಆಧಾರ್ ಇ-ಕೆವೈಸಿ ಹಳೆಯದಾಗಿದ್ದರೆ, ಹಣ ಜಮಾ ಆಗುವುದಿಲ್ಲ. ಇದನ್ನು ಆನ್‌ಲೈನ್‌ನಲ್ಲಿ ನವೀಕರಿಸಬೇಕು. ಆಧಾರ್ KYC ನವೀಕರಣ ಮಾಡುವುದರ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬಹುದು.
* ಅರ್ಹತೆ ಕಳೆದುಕೊಂಡಿರುವ ಕಾರಣ
ಆದಾಯ ತೆರಿಗೆ ಪಾವತಿಸುವ ಕುಟುಂಬಗಳು ಅರ್ಹರಲ್ಲ. ಇದರಿಂದ ತಾತ್ಕಾಲಿಕವಾಗಿ ಅರ್ಜಿ ರದ್ದಾಗುತ್ತದೆ. ಅಷ್ಟೇ ಮಾತ್ರಾಲಲ್ದೆ ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಲಕ್ಷಾಂತರ ಅನರ್ಹ ಕುಟುಂಬಗಳ ರೇಷನ್ ಕಾರ್ಡ್ ಡಿಲೀಟ್ ಮಾಡಿರುವ ಕಾರಣ ಸಾಕಷ್ಟು ಮಹಿಳೆಯರ ಹೆಸರನ್ನು ಗೃಹಲಕ್ಷ್ಮಿ ಯೋಜನೆಯಿಂದ ಕೂಡ ಡಿಲೀಟ್ ಮಾಡಲಾಗಿದೆ. ಮಹಿಳೆಯರು ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡಿಕೊಂಡು ಹೆಸರು ಡಿಲೀಟ್ ಆಗಿದೆಯಾ ಅಥವಾ ಇಲ್ಲವ ಎಂದು ತಿಳಿದುಕೊಳ್ಳಬೇಕು.
* ಕೆಲವು ತಾಂತ್ರಿಕ ಕಾರಣಗಳು
ಸರ್ಕಾರ ದೋಷ ಮತ್ತು ಕೆಲವು ತಾಂತ್ರಿಕ ದೋಷಗಳ ಕಾರಣ ಎರಡು ಅಥವಾ ಮೂರೂ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣ ಜಾಮಾ ಆಗಲು ವಿಳಂಬ ಆಗಬಹುದು. ಮಹಿಳೆಯರು ಕಾಯಬೇಕು ಮತ್ತು ಕಾದು ಹಣ ಪಡೆದುಕೊಳ್ಳಬೇಕು.
ಸಮಸ್ಯೆಯನ್ನು ತೀರಿಸಲು ಮೊದಲು ಸೇವಾ ಸಿಂಧು ಪೋರ್ಟಲ್ ಅಥವಾ DBT ಆಪ್‌ನಲ್ಲಿ ಸ್ಥಿತಿಯನ್ನು ಪರಿಶೀಲಿಸಿ. ಆಧಾರ್-ಬ್ಯಾಂಕ್ ಲಿಂಕ್ ಆಗಿರುವುದನ್ನು ಖಚಿತಪಡಿಸಿ. ಹೆಸರಿನ ವ್ಯತ್ಯಾಸವಿದ್ದರೆ, ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಸ್ವ-ಘೋಷಣೆ ಫಾರ್ಮ್ ಸಲ್ಲಿಸಿ. ಈ ರೀತಿಯಲ್ಲಿ ಗೃಹಲಕ್ಷ್ಮಿ ಹಣ ಜಮಾ ಆಗದೆ ಇದ್ದರೆ ತಪ್ಪು ಸರಿಪಡಿಸಿಕೊಂಡು ಹಣ ಪಡೆದುಕೊಳ್ಳಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

